The Vaccine War: ವಿವೇಕ್ ಅಗ್ನಿಹೋತ್ರಿ ಹೊಸ ಚಿತ್ರದ ಕೆಲಸ ಶುರು; ಇದು 2024ರ ಚುನಾವಣೆಗೆ ಪ್ರಚಾರ ಎಂದ ನೆಟ್ಟಿಗರು

Vivek Agnihotri Next Movie: ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ‘ವ್ಯಾಕ್ಸಿನ್​ ವಾರ್​’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದರ ಶೂಟಿಂಗ್​ ಆರಂಭಕ್ಕೂ ಮುನ್ನವೇ ಕೆಲವರಿಂದ ನೆಗೆಟಿವ್​ ಕಮೆಂಟ್​ಗಳು ಬರುತ್ತಿವೆ.

The Vaccine War: ವಿವೇಕ್ ಅಗ್ನಿಹೋತ್ರಿ ಹೊಸ ಚಿತ್ರದ ಕೆಲಸ ಶುರು; ಇದು 2024ರ ಚುನಾವಣೆಗೆ ಪ್ರಚಾರ ಎಂದ ನೆಟ್ಟಿಗರು
ವಿವೇಕ್ ಅಗ್ನಿಹೋತ್ರಿ, ದಿ ವ್ಯಾಕ್ಸಿನ್ ವಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 12, 2022 | 9:14 AM

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರ ಪ್ರತಿ ನಡೆಯೂ ಈಗ ಚರ್ಚೆಗೆ ಒಳಗಾಗುತ್ತಿದೆ. ಇತ್ತೀಚೆಗೆ ನಡೆದ ಗೋವಾ ಸಿನಿಮೋತ್ಸವದಲ್ಲಿ ಅವರ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿಬಂದಿದ್ದವು. ಸಿನಿಮೋತ್ಸವದ ಜ್ಯೂರಿ ಕಮಿಟಿಯ ಅಧ್ಯಕ್ಷರಾಗಿದ್ದ ನಡಾವ್​ ಲಪಿಡ್​ ಅವರು ಈ ಚಿತ್ರವನ್ನು ಕಟುವಾಗಿ ಟೀಕಿಸಿದ್ದರು. ಆ ವಿಚಾರವನ್ನೆಲ್ಲ ಬದಿಗಿಟ್ಟು ವಿವೇಕ್​ ಅಗ್ನಿಹೋತ್ರಿ ಅವರು ಹೊಸ ಸಿನಿಮಾದ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ಈ ಮೊದಲೇ ತಿಳಿಸಿರುವಂತೆ ಈ ಚಿತ್ರಕ್ಕೆ ‘ದಿ ವ್ಯಾಕ್ಸಿನ್​ ವಾರ್​’ (The Vaccine War) ಎಂದು ಹೆಸರು ಇಡಲಾಗಿತ್ತು. 2020ರಲ್ಲಿ ಕೊರೊನಾ ವೈರಸ್​ ಹಾವಳಿ ಎದುರಾದಾಗ ಅದರ ವಿರುದ್ಧ ಭಾರತ ಹೇಗೆ ಹೋರಾಟ ನಡೆಸಿತು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲು ವಿವೇಕ್​ ಅಗ್ನಿಹೋತ್ರಿ ನಿರ್ಧರಿಸಿದ್ದಾರೆ. ಅದರ ಬೆನ್ನಲ್ಲೇ ಕೆಲವು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ವಿವೇಕ್​ ಅಗ್ನಿಹೋತ್ರಿ ಅವರು ಮೋದಿ ಸರ್ಕಾರದ ಪರವಾಗಿ ಇದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಈಗ ಅವರು ವ್ಯಾಕ್ಸಿನ್​ ಕುರಿತು ಮಾಡಲು ಹೊರಟಿರುವ ಚಿತ್ರ ಕೂಡ ಮೋದಿ ಸರ್ಕಾರವನ್ನು ಹೊಗಳುವ ಪ್ರಚಾರದ ಸಿನಿಮಾ ಆಗಲಿದೆ ಎಂದು ಅನೇಕರು ಕಾಲೆಳೆಯುತ್ತಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಈ ಚಿತ್ರವನ್ನು ಮಾಡಲಾಗುತ್ತಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ
Image
ಸೀಕ್ರೇಟ್​ ಆಗಿ ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ
Image
‘ದಿ ಕಾಶ್ಮೀರ್​ ಫೈಲ್ಸ್​​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಹಿನ್ನೆಲೆ ಏನು? ಇಲ್ಲಿದೆ ಅವರ ಲವ್​ಸ್ಟೋರಿ
Image
‘ದಿ ಕಾಶ್ಮೀರ್​ ಫೈಲ್ಸ್​’ ಮಾತ್ರವಲ್ಲ, ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ ಇತರೆ ಚಿತ್ರಗಳ ಬಗ್ಗೆ ನಿಮಗೆ ಗೊತ್ತಾ?
Image
ವಿವೇಕ್​ ಅಗ್ನಿಹೋತ್ರಿ ಹಿನ್ನೆಲೆ ಏನು? ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ದೇಶಕರ ಬಗ್ಗೆ ಇಲ್ಲಿದೆ ಮಾಹಿತಿ..

ಇದನ್ನೂ ಓದಿ: Vivek Agnihotri: ದೆಹಲಿ ಹೈಕೋರ್ಟ್​ನಲ್ಲಿ ಬೇಷರತ್​ ಕ್ಷಮೆ ಯಾಚಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

‘ದಿ ವ್ಯಾಕ್ಸಿನ್​ ವಾರ್​’ ಚಿತ್ರದ ಶೂಟಿಂಗ್​ಗೆ ಭರದ ಸಿದ್ಧತೆ ನಡೆದಿದೆ.​ ಇದನ್ನು ತಿಳಿಸುವ ಸಲುವಾಗಿ ವಿವೇಕ್​ ಅಗ್ನಿಹೋತ್ರಿ ಅವರು ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಸರ್ಕಾರದ ಪರವಾಗಿ ಸಿನಿಮಾ ಮಾಡುತ್ತಿರುವುದಕ್ಕೆ ‘ಇಡಿ ಮತ್ತು ಐಟಿ ದಾಳಿಯಿಂದ ತಪ್ಪಿಸಿಕೊಂಡಿದ್ದೀರಿ’ ಎಂಬ ಕಮೆಂಟ್​ ಕೂಡ ಬಂದಿದೆ.

ಇದನ್ನೂ ಓದಿ: Vivek Agnihotri: ‘ಸತ್ಯ ಅಲ್ಲ ಅಂತ ಸಾಬೀತಾದ್ರೆ ಸಿನಿಮಾ ಮಾಡೋದು ಬಿಟ್ಟು ಬಿಡ್ತೀನಿ’; ವಿವೇಕ್​ ಅಗ್ನಿಹೋತ್ರಿ ಸವಾಲು

‘ಮುಂದಿನ ಬಾರಿ ನಡೆಯಲಿರುವ ಸಿನಿಮೋತ್ಸವಕ್ಕೆ ನಡಾವ್​ ಲಪಿಡ್​ ಅವರನ್ನು ಕರೆಯೋದು ಬೇಡ ಅಂತ ನಿಮ್ಮ ಸರ್ಕಾರಕ್ಕೆ ಹೇಳಿ. ವಿವೇಕ್​ ಅಗ್ನಿಹೋತ್ರಿಯೇ ಜ್ಯೂರಿ ಕಮಿಟಿ ಅಧ್ಯಕ್ಷರಾಗಲಿ. ಅನುರಾಗ್​ ಠಾಕೂರ್​, ಅನುಪಮ್​ ಖೇರ್​, ರವಿ ಕಿಶನ್​, ಅಕ್ಷಯ್​ ಕುಮಾ​ರ್​ ಅವರು ಜ್ಯೂರಿ ತಂಡದಲ್ಲಿ ಇರಲಿ’ ಎಂದು ವ್ಯಕ್ತಿಯೊಬ್ಬರು ವ್ಯಂಗ್ಯವಾಡಿದ್ದಾರೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಸೂಪರ್ ಹಿಟ್​ ಆದ ಬಳಿಕ ವಿವೇಕ್​ ಅಗ್ನಿಹೋತ್ರಿ ಅವರ ಖ್ಯಾತಿ ಹೆಚ್ಚಿತು. ಅದರ ಜೊತೆಗೆ ವಿವಾದಗಳು ಕೂಡ ಶುರುವಾದವು. ‘ವ್ಯಾಕ್ಸಿನ್​ ವಾರ್​’ ಚಿತ್ರದ ಶೂಟಿಂಗ್​ ಆರಂಭವಕ್ಕೂ ಮುನ್ನವೇ ಕೆಲವರಿಂದ ನೆಗೆಟಿವ್​ ಕಮೆಂಟ್​ಗಳು ಬರುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ