AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cinema Lovers Day: 99 ರೂಪಾಯಿಗೆ ಪಿವಿಆರ್, ಐನಾಕ್ಸ್​ ಸಿನಿಮಾ ಟಿಕೆಟ್​; ಒಂದು ದಿನದ ಆಫರ್​ ಮಾತ್ರ

‘ಸಿನಿಮಾ ಲವರ್ಸ್​ ಡೇ’ ಪ್ರಯುಕ್ತ ಇಂದು (ಫೆಬ್ರವರಿ 23) ಪಿವಿಆರ್​ ಮತ್ತು ಐನಾಕ್ಸ್​ನಲ್ಲಿ ಸಿನಿಮಾಗಳ ಟಿಕೆಟ್​ ಬೆಲೆ ತಗ್ಗಿಸಲಾಗಿದೆ. ಕೇವಲ 99 ರೂಪಾಯಿಗೆ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ನೋಡುವ ಆಫರ್​ ನೀಡಲಾಗಿದೆ. ಲಕ್ಷಾಂತರ ಪ್ರೇಕ್ಷಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗೋಲ್ಡ್​ ಕ್ಲಾಸ್​ ರೀತಿಯ ಐಷಾರಾಮಿ ಸೀಟ್​ಗಳ ದರದಲ್ಲೂ ರಿಯಾಯಿತಿ ನೀಡಲಾಗಿದೆ.

Cinema Lovers Day: 99 ರೂಪಾಯಿಗೆ ಪಿವಿಆರ್, ಐನಾಕ್ಸ್​ ಸಿನಿಮಾ ಟಿಕೆಟ್​; ಒಂದು ದಿನದ ಆಫರ್​ ಮಾತ್ರ
ಫೈಟರ್​, ಹನುಮಾನ್​, ಒಂದು ಸರಳ ಪ್ರೇಮಕಥೆ
Follow us
ಮದನ್​ ಕುಮಾರ್​
|

Updated on:Feb 23, 2024 | 10:58 AM

ಮಲ್ಟಿಪ್ಲೆಕ್ಸ್​ನಲ್ಲಿ ಹಾಯಾಗಿ ಸಿನಿಮಾ ನೋಡಬೇಕು ಎಂಬುದು ಪ್ರೇಕ್ಷಕರ ಆಸೆ. ಆದರೆ ದುಬಾರಿಯಾದ ಸಿನಿಮಾಗಳ ಟಿಕೆಟ್​ ದರ ನೋಡಿ ಎಷ್ಟೋ ಜನರು ಮಲ್ಟಿಪ್ಲೆಕ್ಸ್​ (Multiplex) ಕಡೆಗೆ ತಲೆ ಹಾಕುವುದಿಲ್ಲ. ಕುಟುಂಬ ಸಮೇತರಾಗಿ ಸಿನಿಮಾ ನೋಡಲು ಹೋದರೆ ಜೇಬಿಗೆ ಹೊರೆಯಾಗುತ್ತದೆ ಎಂದು ಚಿಂತಿಸುವ ವರ್ಗ ಕೂಡ ದೊಡ್ಡದಿದೆ. ಅಂಥವರಿಗೆಲ್ಲ ಒಂದು ಗುಡ್​ ನ್ಯೂಸ್​ ಸಿಕ್ಕಿದೆ. ಇಂದು (ಫೆಬ್ರವರಿ 23) ಪಿವಿಆರ್​ (PVR) ಮತ್ತು ಐನಾಕ್ಸ್​ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡುವವರಿಗೆ ಕಡಿಮೆ ಬೆಲೆಯಲ್ಲಿ ಟಿಕೆಟ್​ಗಳು ಸಿಗಲಿವೆ. ದೇಶಾದ್ಯಂತ ಕೇವಲ 99 ರೂಪಾಯಿಗೆ ಸಿನಿಮಾ ತೋರಿಸಲಾಗುತ್ತಿದೆ. ಅಂದಹಾಗೆ, ಈ ಆಫರ್​ (Cinema Lovers Day) ಇರುವುದು ಇಂದು (ಫೆ.23) ಮಾತ್ರ!

ಪಿವಿಆರ್​ ಮತ್ತು ಐನಾಕ್ಸ್​ ಕಡೆಯಿಂದ ಫೆಬ್ರವರಿ 23ರಂದು ‘ಸಿನಿಮಾ ಲವರ್ಸ್​ ಡೇ’ ಆಚರಿಸಲಾಗುತ್ತಿದೆ. ಈ ಪ್ರಯಕ್ತ ಪಿವಿಆರ್​, ಐನಾಕ್ಸ್​ನಲ್ಲಿ ಸಿನಿಮಾದ ಟಿಕೆಟ್​ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಹಾಲಿವುಡ್​ನಿಂದ ಸ್ಯಾಂಡವುಡ್​ ತನಕ ಎಲ್ಲ ಸಿನಿಮಾಗಳ ಟಿಕೆಟ್​ಗಳು ಕೇವಲ 99 ರೂಪಾಯಿಗೆ ಸಿಗುತ್ತಿವೆ. ಸಾಮಾನ್ಯ ದರ್ಜೆಯ ಸೀಟುಗಳಿಗೆ 99 ರೂಪಾಯಿ ಇದೆ. ಐಷಾರಾಮಿಯಾದ ವಿಶೇಷ ಸೀಟ್​ಗಳ ಬೆಲೆಯನ್ನೂ ತಗ್ಗಿಸಲಾಗಿದೆ.

ಗೋಲ್ಡ್​ ಕ್ಲಾಸ್​ ರೀತಿಯ ಐಷಾರಾಮಿ ಸಿನಿಮಾ ಸೀಟ್​ಗಳಿಗೆ ಮಾಮೂಲಿ ದಿನದಲ್ಲಿ ಸಾವಿರಾರು ರೂಪಾಯಿ ಟಿಕೆಟ್​ ಬೆಲೆ ಇರುತ್ತದೆ. ಆದರೆ ‘ಸಿನಿಮಾ ಲವರ್ಸ್​ ಡೇ’ ಪ್ರಯುಕ್ತ 199 ರೂಪಾಯಿಂದ ಆರಂಭವಾಗಿ ರಿಯಾಯಿತಿ ದರದಲ್ಲಿ ಈ ಸೀಟ್​ಗಳ ಟಿಕೆಟ್​ ಮಾರಲಾಗುತ್ತಿದೆ. ಲಕ್ಷಾಂತರ ಪ್ರೇಕ್ಷಕರು ಆ ಆಫರ್​ನ ಮಜಾ ಸವಿಯುತ್ತಿದ್ದಾರೆ. ಇಂದು ಶುಕ್ರವಾರ ಆಗಿರುವುದರಿಂದ ಹೊಸದಾಗಿ ಬಿಡುಗಡೆಯಾದ ಸಿನಿಮಾಗಳ ಟಿಕೆಟ್​ಗಳು ಕೂಡ ಪಿವಿಆರ್​ ಹಾಗೂ ಐನಾಕ್ಸ್​ನಲ್ಲಿ ಕೇವಲ 99 ರೂಪಾಯಿಗೆ ಸಿಗುತ್ತಿವೆ.

ಇದನ್ನೂ ಓದಿ: ಪಿವಿಆರ್ ಹಣ ಗಳಿಸುವುದು ಹೇಗೆ? ಟಿಕೆಟ್​ನಿಂದ ಸಿಗುವುದೆಷ್ಟು? ನಿರ್ಮಾಪಕರಿಗೆ ತಲುಪುವುದೆಷ್ಟು? ವ್ಯವಹಾರ ಹೇಗೆ?

ಈಗ ಪಿವಿಆರ್​ ಮತ್ತು ಐನಾಕ್ಸ್​ನಲ್ಲಿ ಹಲವು ಸಿನಿಮಾಗಳು ಪ್ರದರ್ಶನ ಕಾಣುತ್ತಿದೆ. ಹೃತಿಕ್​ ರೋಷನ್​ ನಟನೆಯ ‘ಫೈಟರ್​’, ಶಾಹಿದ್​ ಕಪೂರ್​ ಅಭಿನಯದ ‘ತೇರಿ ಬಾತೋ ಮೈ ಐಸಾ ಉಲ್ಜಾ ಜಿಯಾ’, ಪ್ರಿಯಾಮಣಿ ನಟಿಸಿರುವ ‘ಆರ್ಟಿಕಲ್​ 370’, ವಿದ್ಯುತ್​ ಜಾಮ್ವಾಲ್​ ಅವರ ‘ಕ್ರ್ಯಾಕ್​’, ತೇಜ ಸಜ್ಜಾ ನಟನೆಯ ‘ಹನುಮಾನ್​’, ರಜನಿಕಾಂತ್​ ಅಭಿನಯಿಸಿರುವ ‘ಲಾಲ್​ ಸಲಾಂ’ ಮುಂತಾದ ಸಿನಿಮಾಗಳು ಪ್ರದರ್ಶನವಾಗುತ್ತಿವೆ. ಕನ್ನಡದ ‘ಒಂದು ಸರಳ ಪ್ರೇಮಕಥೆ’, ‘ಮಿಸ್ಟರ್​ ನಟ್ವರ್​ಲಾಲ್​’, ‘ಫಾರ್​ ರಿಜಿಸ್ಟ್ರೇಷನ್​’ ಮುಂತಾದ ಸಿನಿಮಾಗಳನ್ನು ಕೂಡ ಇಂದು ಕೇವಲ 99 ರೂಪಾಯಿಗೆ ಪ್ರೇಕ್ಷಕರು ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:58 am, Fri, 23 February 24

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್