ತಂದೆ-ಮಗಳ ಬಗ್ಗೆ ಅಸಭ್ಯ ಜೋಕ್: ಯೂಟ್ಯೂಬರ್ ವಿರುದ್ಧ ತೀವ್ರ ಆಕ್ರೋಶ

ತೆಲುಗಿನ ಯೂಟ್ಯೂಬರ್ ಪ್ರಣೀತ್ ಹನುಮಂತು, ತನ್ನ ಯೂಟ್ಯೂಬ್ ವಿಡಿಯೋ ಒಂದರಲ್ಲಿ ತಂದೆ-ಮಗಳ ಸಂಬಂಧದ ಬಗ್ಗೆ ನೀಚವಾಗಿ ಮಾತನಾಡಿದ್ದು, ಪ್ರಣೀತ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ತಂದೆ-ಮಗಳ ಬಗ್ಗೆ ಅಸಭ್ಯ ಜೋಕ್: ಯೂಟ್ಯೂಬರ್ ವಿರುದ್ಧ ತೀವ್ರ ಆಕ್ರೋಶ
Follow us
|

Updated on: Jul 09, 2024 | 3:59 PM

ತೆಲುಗಿನ ಯೂಟ್ಯೂಬರ್​ಗಳು ಒಂದಲ್ಲ ಒಂದು ವಿವಾದಗಳನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಪರಸ್ಪರ ಬೀದಿ ಜಗಳ ಮಾಡಿಕೊಳ್ಳುವುದು, ವಿಡಿಯೋಗಾಗಿ ಮೋಸ ಮಾಡುವುದು, ಬೆದರಿಕೆ ಹಾಕುವುದು, ವಿಡಿಯೋಗಳಲ್ಲಿ ಅವಾಚ್ಯ ಶಬ್ದಗಳನ್ನು ಪರಸ್ಪರರ ಬಗ್ಗೆ ಬಳಸುವುದು, ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡುವುದು ಹೀಗೆ ಹಲವು ಪ್ರಕರಣಗಳಲ್ಲಿ ತೆಲುಗಿನ ಕೆಲ ಯೂಟ್ಯೂಬರ್​ಗಳ ಮೇಲೆ ಪ್ರಕರಣಗಳು ದಾಖಲಾಗಿವೆ. ಒಬ್ಬ ತೆಲುಗು ಯೂಟ್ಯೂಬರ್ ಅಂತೂ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದಾನೆ. ಇದೀಗ ತೆಲುಗಿನ ಜನಪ್ರಿಯ ಯೂಟ್ಯೂಬರ್ ಒಬ್ಬನ ಮೇಲೆ ಪ್ರಕರಣ ದಾಖಲಾಗಿರುವುದಲ್ಲದೆ ಟಾಲಿವುಡ್​ನಲ್ಲಿ ಯೂಟ್ಯೂಬರ್ ಮಾಡಿರುವ ಕಮೆಂಟ್ ಬಗ್ಗೆ ತೀವ್ರ ಆಕ್ಷೇಪ ಕೇಳಿ ಬಂದಿದೆ.

ಹಿಂದಿಯ ಬಹು ಜನಪ್ರಿಯ ಯೂಟ್ಯೂಬರ್ ತನ್ಮಯ್ ಭಟ್, ‘ಮೀಮ್ ರಿವ್ಯೂ’ ಹೆಸರಿನ ಫಾರ್ಮ್ಯಾಟ್ ಒಂದನ್ನು ಪ್ರಾರಂಭಿಸಿ ಅದರ ಮೇಲೆ ವಿಡಿಯೋಗಳನ್ನು ಮಾಡಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಗೆಳೆಯರನ್ನು ವಿಡಿಯೋ ಕಾನ್ಫರೆನ್ಸ್​ನಲ್ಲಿ ಇರಿಸಿಕೊಂಡು ಒಂದೊಂದೇ ಮೀಮ್​ಗಳನ್ನು ನೋಡುತ್ತಾ ಆ ಮೀಮ್​ಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯ ವ್ಯಕ್ತಪಡಿಸುವ ಕಾರ್ಯಕ್ರಮವದು.

ಇದನ್ನೂ ಓದಿ:ದುಬೈ ಯೂಟ್ಯೂಬರ್ ಜೊತೆ ‘ಗಂಗೆ ಬಾರೆ ತುಂಗೆ ಬಾರೆ’ ನಟಿಯ ನಿಶ್ಚಿತಾರ್ಥ?

ಅದೇ ಮಾದರಿಯನ್ನು ಕೆಲವು ಪ್ರಾದೇಶಿಕ ಭಾಷೆಯ ಯೂಟ್ಯೂಬರ್​ಗಳು ಸಹ ಬಳಸುತ್ತಿದ್ದು, ತೆಲುಗಿನ ಯೂಟ್ಯೂಬರ್ ಪ್ರಣೀತ್ ಹನುಮಂತು ಎಂಬಾತನೂ ಸಹ ತನ್ನ ಕೆಲವು ಗೆಳೆಯರೊಟ್ಟಿಗೆ ಮೀಮ್ ರಿವ್ಯೂ ಮಾಡುತ್ತಿದ್ದ. ಇತ್ತೀಚೆಗಿನ ವಿಡಿಯೋ ಒಂದರಲ್ಲಿ ಪ್ರಣೀತ್, ತಂದೆ-ಮಗಳ ವಿಡಿಯೋ ಒಂದನ್ನು ಪ್ರದರ್ಶಿಸಿ, ಆ ವಿಡಿಯೋ ಬಗ್ಗೆ ತೀರ ಕೆಟ್ಟದಾಗಿ ವಿಶೇಷವಾಗಿ ತಂದೆ-ಮಗಳ ಬಗ್ಗೆ ಲೈಂಗಿಕತೆ ಜೋಕುಗಳನ್ನು ಮಾಡಿದ್ದ. ಪ್ರಣೀತ್​ನ ಆ ವಿಡಿಯೋ ವೈರಲ್ ಆಗಿದ್ದು, ಪ್ರಣೀತ್​ ಹನುಮಂತು ಹಾಗೂ ಆತನ ಗೆಳೆಯರ ಈ ವಿಕೃತಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ತೆಲುಗಿನ ನಟರಾದ ಸಾಯಿ ಧರಂ ತೇಜ್, ಪವನ್ ಕಲ್ಯಾಣ್ ಪತ್ನಿ ರೇಣು ದೇಸಾಯಿ, ಮಂಚು ಮನೋಜ್, ನಾರಾ ರೋಹಿತ್ ಇನ್ನಿತರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಣಿತ್ ಹನುಮಂತು ಅನ್ನು ತನ್ನ ಸಿನಿಮಾದಲ್ಲಿ ಹಾಕಿಕೊಂಡಿದ್ದ ನಟ ಸುಧೀರ್ ಬಾಬು, ತಾನು ಪ್ರಣೀತ್​ನನ್ನು ಸಿನಿಮಾದಲ್ಲಿ ಹಾಕಿಕೊಂಡಿರುವುದಕ್ಕೆ ಕ್ಷಮಾಪಣೆಯನ್ನೂ ಸಹ ಕೇಳಿದ್ದಾರೆ. ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಎದುರಾಗುತ್ತಿದ್ದಂತೆ ಪ್ರಣೀತ್ ಕ್ಷಮಾಪಣೆ ಕೇಳಿದ್ದಾರೆ. ಆದರೆ ಪ್ರಣೀತ್ ಹಾಗೂ ಆತನ ಗೆಳೆಯರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ತಾಜಾ ಸುದ್ದಿ
ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!
ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ