‘ದೇವರ’ ಸಿನಿಮಾದಲ್ಲಿ 10 ಸಾವಿರ ಮಂದಿಯ ಜೊತೆ ಫೈಟ್ ಮಾಡಲಿದ್ದಾರೆ ಜೂ. ಎನ್​ಟಿಆರ್?

ಜೂನಿಯರ್​ ಎನ್​ಟಿಆರ್ ಜನ್ಮದಿನದ ಪ್ರಯುಕ್ತ ಸಿನಿಮಾದ ‘ಫಿಯರ್..’ ಹಾಡು ರಿಲೀಸ್ ಆಗಿದೆ. ಈ ಸಿನಿಮಾ ಸಂಪೂರ್ಣ ಆಲ್ಬಂ ರಿಲೀಸ್​ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಸಿಕ್ಕಿರುವ ಮತ್ತೊಂದು ಸುದ್ದಿ ಎಂದರೆ ಈ ಚಿತ್ರದಲ್ಲಿ 10 ಸಾವಿರ ಮಂದಿಯ ಜೊತೆ ಜೂನಿಯರ್​ ಎನ್​ಟಿಆರ್ ಫೈಟ್ ಮಾಡಲಿದ್ದಾರಂತೆ.

‘ದೇವರ’ ಸಿನಿಮಾದಲ್ಲಿ 10 ಸಾವಿರ ಮಂದಿಯ ಜೊತೆ ಫೈಟ್ ಮಾಡಲಿದ್ದಾರೆ ಜೂ. ಎನ್​ಟಿಆರ್?
ದೇವರ ಸಿನಿಮಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: May 28, 2024 | 6:33 AM

ಜೂನಿಯರ್ ಎನ್​ಟಿಆರ್​ ನಟನೆಯ ‘ದೇವರ: ಪಾರ್ಟ್​ 1’ (Devara Part 1) ಬಗ್ಗೆ ಭರ್ಜರಿ ನಿರೀಕ್ಷೆ ಮೂಡಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಮೂಲ ತೆಲುಗು ಭಾಷೆಯಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ ಕಲಾವಿದರಾದ ಜಾನ್ವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಈಗ ಹೊಸ ಅಪ್​ಡೇಟ್ ಒಂದು ಕೇಳಿ ಬಂದಿದೆ.

ಇತ್ತೀಚೆಗೆ ‘ದೇವರ’ ಸಿನಿಮಾದ ಗ್ಲಿಂಪ್ಸ್ ವಿಡಿಯೋ ರಿಲೀಸ್ ಮಾಡಲಾಗಿದೆ. ಇದರಿಂದ ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಹೆಚ್ಚುವಂತೆ ಆಗಿದೆ. ಜೂನಿಯರ್​ ಎನ್​ಟಿಆರ್ ಜನ್ಮದಿನದ ಪ್ರಯುಕ್ತ ಸಿನಿಮಾದ ‘ಫಿಯರ್..’ ಹಾಡು ರಿಲೀಸ್ ಆಗಿದೆ. ಈ ಸಿನಿಮಾ ಸಂಪೂರ್ಣ ಆಲ್ಬಂ ರಿಲೀಸ್​ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಸಿಕ್ಕಿರುವ ಮತ್ತೊಂದು ಸುದ್ದಿ ಎಂದರೆ ಈ ಚಿತ್ರದಲ್ಲಿ 10 ಸಾವಿರ ಮಂದಿಯ ಜೊತೆ ಜೂನಿಯರ್​ ಎನ್​ಟಿಆರ್ ಫೈಟ್ ಮಾಡಲಿದ್ದಾರಂತೆ.

ಇಷ್ಟೊಂದು ಜನರನ್ನು ಒಟ್ಟಿಗೆ ಸೇರಿಸೋದು ಎಂದರೆ ಅದು ಸಣ್ಣ ಮಾತಲ್ಲ. ಇದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಕೂಡ ದೊಡ್ಡ ಚಾಲೆಂಜ್. ಇದನ್ನು ನಿರ್ದೇಶಕ ಕೊರಟಾಲ ಶಿವ ಯಾವ ರೀತಿಯಲ್ಲಿ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸಮುದ್ರದ ಕಥೆಯನ್ನು ‘ದೇವರ’ ಸಿನಿಮಾ ಒಳಗೊಂಡಿದೆ. ಸಮುದ್ರದಲ್ಲಿ, ಸಮುದ್ರ ತೀರದಲ್ಲಾಗುವ ಎಲ್ಲಾ ರೀತಿಯ ಅಡ್ವೆಂಚರ್​ಗಳನ್ನು ಈ ಸಿನಿಮಾದಲ್ಲಿ ನೀವು ನೋಡಬಹುದು. ‘ದೇವರ’ ಸಿನಿಮಾದಲ್ಲಿ ಬರೋ ನಿಧಿ ದೋಚುವ ದೃಶ್ಯದಲ್ಲಿ 10 ಸಾವಿರ ಜನರ ಜೊತೆ ಜೂನಿಯರ್ ಎನ್​ಟಿಆರ್ ಫೈಟ್ ಮಾಡಲಿದ್ದಾರೆ. ಈ ಮೂಲಕ ರಕ್ತದ ಕಥೆಯನ್ನು ಹೇಳಲು ಸಿನಿಮಾ ರೆಡಿ ಆಗಿದೆ.

ಇದನ್ನೂ ಓದಿ: ‘ದೇವರ’ ಬಿಡುಗಡೆ ಟೈಮ್​ನಲ್ಲೇ ‘ಮಾರ್ಟಿನ್​’ ರಿಲೀಸ್​; ಏನಂದ್ರು ನಿರ್ದೇಶಕರು?

ದೇವರ ಗ್ಲಿಂಪ್ಸ್​ನಲ್ಲಿ ‘ಇದು ರಕ್ತದ ಸಮುದ್ರ. ಈ ಸಮುದ್ರ ಮೀನಿಗಿಂತ ಹೆಚ್ಚಾಗಿ ಕತ್ತಿ ಹಾಗೂ ರಕ್ತವನ್ನೇ ನೋಡಿ’ ಎಂದು ಬರೆಯಲಾಗಿತ್ತು. ಈ ಮೂಲಕ ಸಿನಿಮಾ ಬಗ್ಗೆ ಕುತೂಹಲ ಹುಟ್ಟುಹಾಕಲಾಗಿತ್ತು. ಸದ್ಯ ಕೇಳಿ ಬರುತ್ತಿರುವ ಹೊಸ ಸುದ್ದಿ ಕೇಳಿ ಫ್ಯಾನ್ಸ್ ಮತ್ತಷ್ಟು ಥ್ರಿಲ್ ಆಗಿದ್ದಾರೆ. ಈ ಚಿತ್ರದ ಒಟಿಟಿ ಹಕ್ಕು ನೆಟ್​ಫ್ಲಿಕ್ಸ್ ಪಡೆದುಕೊಂಡಿದೆ ಎನ್ನಲಾಗಿದೆ. 155 ಕೋಟಿ ರೂಪಾಯಿಗೆ ಒಟಿಟಿ ಹಕ್ಕು ಮಾರಾಟ ಆಗಿದೆ ಎಂದು ವರದಿ ಆಗಿದೆ. ಈ ಚಿತ್ರ ಅಕ್ಟೋಬರ್ 10ರಂದು ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.