ಸೂಪರ್ ಹಿಟ್ ‘96’ ಸಿನಿಮಾಗೆ ಬರಲಿದೆ ಸೀಕ್ವೆಲ್; ಗುಡ್ ನ್ಯೂಸ್ ನೀಡಿದ ನಿರ್ದೇಶಕ
ವಿಜಯ್ ಸೇತುಪತಿ ಮತ್ತು ತ್ರಿಶಾ ಕೃಷ್ಣನ್ ನಟನೆಯ ‘96’ ಸಿನಿಮಾವನ್ನು ನೋಡಿ ಇಷ್ಟಪಟ್ಟವರ ಸಂಖ್ಯೆ ದೊಡ್ಡದಿದೆ. ಈಗ ಅಂಥವರಿಗಾಗಿ ಒಂದು ಗುಡ್ ನ್ಯೂಸ್ ಸಿಕ್ಕಿದೆ. ‘96’ ಚಿತ್ರಕ್ಕೆ ಸೀಕ್ವೆಲ್ ಬರಲಿದೆ. ಸ್ವತಃ ನಿರ್ದೇಶಕ ಪ್ರೇಮ್ ಕುಮಾರ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಕ್ತಾಯ ಆಗಿದೆ ಎಂದು ಕೂಡ ಅವರು ಹೇಳಿದ್ದಾರೆ.
2018ರ ಅಕ್ಟೋಬರ್ನಲ್ಲಿ ‘96’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಶಾ ಕೃಷ್ಣನ್ ಅವರು ಪ್ರಮುಖ ಪಾತ್ರ ಮಾಡಿದ್ದರು. ವಿಶೇಷವಾದ ಕಥಾಹಂದರ ಇರುವ ಆ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಬಾಕ್ಸ್ ಆಫೀಸ್ನಲ್ಲಿ ‘96’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಬೇರೆ ಬೇರೆ ಭಾಷೆಗಳಿಗೂ ಈ ಚಿತ್ರ ರಿಮೇಕ್ ಆಗಿತ್ತು. ಈಗ ಆ ಸಿನಿಮಾಗೆ ಸೀಕ್ವೆಲ್ ಬರುತ್ತಿದೆ. ಈ ವಿಷಯ ಕೇಳಿ ತ್ರಿಶಾ ಕೃಷ್ಣನ್ ಹಾಗೂ ವಿಜಯ್ ಸೇತುಪತಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ನಿರ್ದೇಶಕ ಪ್ರೇಮ್ ಕುಮಾರ್ ಅವರು ‘96’ ಸಿನಿಮಾಗೆ ಸೀಕ್ವೆಲ್ ಘೋಷಣೆ ಮಾಡಿದ್ದಾರೆ.
ಮಾಜಿ ಪ್ರೇಮಿಗಳಿಬ್ಬರು ಹಲವು ವರ್ಷಗಳ ಬಳಿಕ ಭೇಟಿಯಾದಾಗ ನಡೆಯುವ ಎಮೋಷನಲ್ ಸಂಗತಿಗಳನ್ನು ‘96’ ಸಿನಿಮಾ ತೆರೆದಿಡುತ್ತದೆ. ಮಾಜಿ ಪ್ರೇಮಿಗಳ ಪಾತ್ರದಲ್ಲಿ ತ್ರಿಶಾ ಕೃಷ್ಣನ್ ಹಾಗೂ ವಿಜಯ್ ಸೇತುಪತಿ ಅವರು ನಟಿಸಿದ್ದರು. ಈ ಸಿನಿಮಾ ನೋಡಿದ ಎಲ್ಲರಿಗೂ ತಮ್ಮ ಹಳೆಯ ದಿನಗಳ ನೆನಪಾಗಿದ್ದವು. ಆ ಸಿನಿಮಾದ ಮುಂದುವರಿದ ಕಥೆಯನ್ನು ತಿಳಿಯಲು ಈಗ ಸಿನಿಪ್ರಿಯರು ಕಾಯುತ್ತಿದ್ದಾರೆ.
‘96’ ಸಿನಿಮಾ ಬಿಡುಗಡೆಯಾಗಿ 6 ವರ್ಷಗಳು ಕಳೆದಿವೆ. ಹಾಗಿದ್ದರೂ ಕೂಡ ಜನರು ಆ ಸಿನಿಮಾ ಬಗ್ಗೆ ಈಗಲೂ ಮಾತನಾಡುತ್ತಿದ್ದಾರೆ. ಚಿತ್ರದ ಬಗ್ಗೆ ಜನರಿಗೆ ಇರುವ ಕ್ರೇಜ್ ಗಮನಿಸಿದ ನಿರ್ದೇಶಕ ಪ್ರೇಮ್ ಕುಮಾರ್ ಅವರು ಆ ಕಥೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ‘96’ ನೋಡಿ ಇಷ್ಟಪಟ್ಟಿದ್ದ ಪ್ರೇಕ್ಷಕರು ಖಂಡಿತವಾಗಿಯೂ ಸೀಕ್ವೆಲ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ‘ಕ್ಷಮೆ ಕೇಳಿ, ವಿಡಿಯೋ ಡಿಲೀಟ್ ಮಾಡಿಸಿ, ಹಣ ನೀಡಿ’: ಎವಿ ರಾಜುಗೆ ಬಿಸಿ ಮುಟ್ಟಿಸಿದ ತ್ರಿಶಾ
ನಿರ್ದೇಶಕ ಪ್ರೇಮ್ ಅವರು ಈಗಾಗಲೇ ‘96’ ಸೀಕ್ವೆಲ್ಗೆ ಸ್ಕ್ರಿಪ್ಟ್ ಪೂರ್ಣಗೊಳಿಸಿದ್ದಾರೆ. ವಿಜಯ್ ಸೇತುಪತಿ ಮತ್ತು ತ್ರಿಶಾ ಕೃಷ್ಣನ್ ಅವರನ್ನು ಭೇಟಿಯಾಗಿ ಕಥೆ ಹೇಳುವುದು ಮಾತ್ರ ಬಾಕಿ ಇದೆ. ಒಂದು ವೇಳೆ ಆ ಕಲಾವಿದರಿಬ್ಬರು ಗ್ರೀನ್ ಸಿಗ್ನಲ್ ನೀಡಿದರೆ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ತ್ರಿಶಾ ಹಾಗೂ ವಿಜಯ್ ಸೇತುಪತಿ ಅವರು ಕಥೆ ಕೇಳಿ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬದನ್ನು ತಿಳಿಯುವ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.