ಶೀಘ್ರವೇ ಸೆಟ್ಟೇರಲಿದೆ ‘ಧೂತ 2’; ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಲೇಡಿ ಡಾಕ್ಟರ್
‘ಧೂತ’ ಸರಣಿ ಸೂಪರ್ ಹಿಟ್ ಆಗಿದೆ. ಇದಕ್ಕೆ ಈಗ ಸೀಕ್ವೆಲ್ ಬರುತ್ತಿದೆ. ಇದರಲ್ಲಿ ಲೇಡಿ ಡಾಕ್ಟರ್ ಕಾಮಾಕ್ಷಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ವರದಿ ಆಗಿದೆ. ಕಾಮಾಕ್ಷಿ ‘ಧೂತ’ ಸರಣಿಯಲ್ಲಿ ಟ್ರಕ್ ಡ್ರೈವರ್ ಕೋಟಿಯ ಪತ್ನಿ ಕಲಾ ಆಗಿ ಕಾಣಿಸಿಕೊಂಡಿದ್ದರು. ಈಗ ಎರಡನೇ ಸರಣಿಯಲ್ಲಿ ಅವರ ಪಾತ್ರ ಪ್ರಮುಖವಾಗಲಿದೆ.

ನಾಗ ಚೈತನ್ಯ (Naga Chaitanya) ನಟನೆಯ ‘ಧೂತ’ ಸೀರಿಸ್ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಸೀರಿಸ್ನ ಜನರು ಮೆಚ್ಚಿಕೊಂಡಿದ್ದಾರೆ. ಹಾರರ್ ಸಸ್ಪೆನ್ಸ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈಗಿನ ಕಾಲದಲ್ಲಿ ಮಾಧ್ಯಮಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಈ ಸೀರಿಸ್ನಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಈಗ ಹೊಸ ಸರಣಿಗೆ ಡಾಕ್ಟರ್ ಎಂಟ್ರಿ ಆಗಿದೆ. ಅವರು ಬೇರಾರೂ ಅಲ್ಲ ಕಾಮಾಕ್ಷಿ ಭಾಸ್ಕರಲಾ. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಅವರು, ನಂತರ ಹೀರೋಯಿನ್ ಆದರು. ಕಾಮಾಕ್ಷಿ ಈ ಸರಣಿಯಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ವರದಿ ಆಗಿದೆ.
ಕಾಮಾಕ್ಷಿ ‘ಧೂತ’ ಸರಣಿಯಲ್ಲಿ ಟ್ರಕ್ ಡ್ರೈವರ್ ಕೋಟಿಯ ಪತ್ನಿ ಕಲಾ ಆಗಿ ಕಾಣಿಸಿಕೊಂಡಿದ್ದರು. ಈಗ ಎರಡನೇ ಸರಣಿಯಲ್ಲಿ ಅವರ ಪಾತ್ರ ಪ್ರಮುಖವಾಗಲಿದೆ. ಸದ್ಯ ಈ ಸೀರಿಸ್ನ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಕಾಮಕ್ಷಿ ಅವರಿಗೆ ಪ್ರಮುಖ ಪಾತ್ರ ನೀಡುವ ಬಗ್ಗೆ ಚರ್ಚೆ ನಡೆದಿದೆ.
Congratulations to the team #Polimera2 🎊 👏
Dr. #KamakshiBhaskarla clinches the Best Actress Jury Award for her phenomenal performance in #Polimera2 movie.
Director @DrAnilViswanath received the award on behalf of her in the presence of filmmaker @connect2Vamsi at… pic.twitter.com/1OGiNPixIo
— Prabhas Fan (@ivdsai) May 2, 2024
ಈ ಮೊದಲು ಶಾರ್ಟ್ ಫಿಲ್ಮ್ಗಳಲ್ಲಿ ಕಾಮಾಕ್ಷಿ ಅವರು ನಟಿಸಿದ್ದರು. ಅವನ್ನು ನೋಡಿ ನಿರ್ದೇಶಕ ವಿಕ್ರಮ್ ಕುಮಾರ್ ಅವರು ಸಖತ್ ಇಂಪ್ರೆಸ್ ಆಗಿದ್ದರು. ಹೀಗಾಗಿ ಅವರಿಗೆ ಚಾನ್ಸ್ ನೀಡಿದ್ದರು. ಈ ಸರಣಿಯ ಎರಡನೇ ಸೀಸನ್ನಲ್ಲಿ ಅವರಿಗೆ ಪ್ರಮುಖ ಪಾತ್ರ ನೀಡಲು ನಿರ್ದೇಶಕರು ಮುಂದಾಗಿದ್ದಾರೆ.
ಇದನ್ನೂ ಓದಿ: ಸದ್ದು ಮಾಡ್ತಿದೆ ‘ಧೂತ’ ಸೀರಿಸ್; ಅಂಥದ್ದೇನಿದೆ?
ಕಾಮಾಕ್ಷಿ ಅವರು ಈ ಮೊದಲು ‘ಮಾ ಊರಿ ಪೊಲಿಮೆರಾ 2’ ಸಿನಿಮಾದಲ್ಲಿ ನಟಿಸಿದ್ದರು. ಈ ಹಾರರ್ ಡ್ರಾಮಾಗೆ ಜನರ ಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಸಾರ ಕಂಡು ಪ್ರಶಂಸೆ ಪಡೆದಿದೆ. ಈಗ ಅವರಿಗೆ ಭರ್ಜರಿ ಆಫರ್ ಸಿಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Fri, 3 May 24




