AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮ್ಮಿ ಬಜೆಟ್, ಕಂಟೆಂಟ್ ಜಾಸ್ತಿ: ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ‘ದೃಶ್ಯಂ 3’

ಮೋಹನ್‌ಲಾಲ್ ನಟನೆಯ 'ದೃಶ್ಯಂ 3' ಸಿನಿಮಾ ಕಡಿಮೆ ಬಜೆಟ್‌ನಲ್ಲಿಯೂ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಕೇವಲ ನಾಲ್ಕೇ ದಿನಗಳಲ್ಲಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಈ ಕಂಟೆಂಟ್-ಆಧಾರಿತ ಚಿತ್ರ, ಮಲಯಾಳಂ ಚಿತ್ರರಂಗದ ಸಾಮರ್ಥ್ಯವನ್ನು ಜಗತ್ತಿಗೆ ಮತ್ತೊಮ್ಮೆ ಸಾರಿದೆ. ಸ್ಟಾರ್ ವ್ಯಾಲ್ಯೂ ಜೊತೆಗೆ ಗಟ್ಟಿ ಕಥೆಯಿದ್ದರೆ ದೊಡ್ಡ ಬಜೆಟ್ ಇಲ್ಲದೆಯೂ ಯಶಸ್ಸು ಸಾಧ್ಯ ಎಂಬುದನ್ನು 'ದೃಶ್ಯಂ 3' ಸಾಬೀತುಪಡಿಸಿದೆ.

ಕಮ್ಮಿ ಬಜೆಟ್, ಕಂಟೆಂಟ್ ಜಾಸ್ತಿ: ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದ 'ದೃಶ್ಯಂ 3'
ದೃಶ್ಯಂ 3Image Credit source: Drishyam 3
ರಾಜೇಶ್ ದುಗ್ಗುಮನೆ
|

Updated on:May 25, 2026 | 11:10 AM

Share

ಸಾಮಾನ್ಯವಾಗಿ ಮಲಯಾಳಂ ಚಿತ್ರರಂಗ ಎಂದರೆ ತಕ್ಷಣ ನೆನಪಿಗೆ ಬರುವುದು ಕಂಟೆಂಟ್ ಆಧಾರಿತ ಸಿನಿಮಾಗಳು. ಅಲ್ಲಿ ನೂರು-ಇನ್ನೂರು ಕೋಟಿ ರೂಪಾಯಿಗಳ ಬಿಗ್ ಬಜೆಟ್ ಚಿತ್ರಗಳು ಸಿದ್ಧವಾಗುವುದು ತೀರಾ ವಿರಳ. ಬಹುತೇಕ ಸಿನಿಮಾಗಳು ಅತಿ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿ, ಸಾಕಷ್ಟು ಸದ್ದು ಮಾಡುತ್ತವೆ. ಮಾಲಿವುಡ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವುದಿಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯ ಈಗ ಬದಲಾಗುತ್ತಿದೆ. ಇದಕ್ಕೆ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ (Drishyam 3) ಹೊಸ ಸೇರ್ಪಡೆ.

ನಿರ್ದೇಶಕ ಜೀತು ಜೋಸೆಫ್ ಮತ್ತು ಮೋಹನ್‌ಲಾಲ್ ಕಾಂಬಿನೇಷನ್‌ನ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕೇವಲ ಕಂಟೆಂಟ್ ಬಲದಿಂದಲೇ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾಗಳೇ ಬಾಕ್ಸ್ ಆಫೀಸ್ ಅಲ್ಲಿ ಸೊರಗುತ್ತಿರುವಾಗ ಜಾರ್ಜ್‌ ಕುಟ್ಟಿ ಬಾಕ್ಸ್ ಆಫೀಸ್​​ನಲ್ಲಿ ಸಂಚಲನ ಸೃಷ್ಟಿಸಿದ್ದಾನೆ.

ಕೇವಲ 4 ದಿನಕ್ಕೆ 141 ಕೋಟಿ ರೂ. ಗಳಿಕೆ

ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ ದಾಖಲೆಯ ಗಳಿಕೆ ಮಾಡಿದೆ. 4ನೇ ದಿನವಾದ ಭಾನುವಾರ ಒಂದೇ ದಿನ ಭಾರತದಲ್ಲಿ 5,270 ಶೋಗಳಿಂದ ಬರೋಬ್ಬರಿ 13.95 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ 63.34 ಕೋಟಿ ರೂಪಾಯಿ ದಾಟಿದ್ದು, ನೆಟ್ ಕಲೆಕ್ಷನ್ 54.55 ಕೋಟಿ ರೂಪಾಯಿಗೆ ಬಂದು ತಲುಪಿದೆ.

ಕೇರಳ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ‘ದೃಶ್ಯಂ 3’ ಸುನಾಮಿ ಎಬ್ಬಿಸಿದೆ. 4ನೇ ದಿನ ವಿದೇಶದಲ್ಲಿ13.00 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಚಿತ್ರ, ಒಟ್ಟು ಓವರ್‌ಸೀಸ್ ಗ್ರಾಸ್ ಕಲೆಕ್ಷನ್ ಅನ್ನು 78.00 ಕೋಟಿ ರೂಪಾಯಿಗೆ ತಲುಪಿದೆ. ಭಾರತ ಮತ್ತು ವಿದೇಶದ ಗಳಿಕೆಯನ್ನು ಒಟ್ಟುಗೂಡಿಸಿದರೆ, ‘ದೃಶ್ಯಂ 3’ ಕೇವಲ 4 ದಿನಗಳಲ್ಲಿ ವಿಶ್ವದಾದ್ಯಂತ 141.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ಮೂರೇ ದಿನಕ್ಕೆ 100 ಕೋಟಿ ಬಾಚಿದ ‘ದೃಶ್ಯಂ 3’: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ಸ್ಟಾರ್ ವ್ಯಾಲ್ಯೂ ಜೊತೆಗೆ ಗಟ್ಟಿ ಕಥೆಯಿದ್ದರೆ ಸಾಕು, ದೊಡ್ಡ ಬಜೆಟ್ ಇಲ್ಲದಿದ್ದರೂ ಕೋಟಿ ಕೋಟಿ ಲೂಟಿ ಮಾಡಬಹುದು ಎಂಬುದನ್ನು ಮಲಯಾಳಂನ ಈ ಸಣ್ಣ ಬಜೆಟ್ ಸಿನಿಮಾ ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:32 am, Mon, 25 May 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ