AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ ಚಿತ್ರದಿಂದ ನನ್ನ ಕರಿಯರ್​ನಲ್ಲಿ ಏನೂ ಬದಲಾಗಿಲ್ಲ’; ಖಾರವಾಗಿ ಹೇಳಿದ ಫಹಾದ್ ಫಾಸಿಲ್

2021ರ ಡಿಸೆಂಬರ್ ತಿಂಗಳಲ್ಲಿ ‘ಪುಷ್ಪ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ನಟಿಸಿದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದರು. ಈ ಸಿನಿಮಾದಿಂದ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳುವ ಮೂಲಕ ಫಹಾದ್ ಅಚ್ಚರಿ ಮೂಡಿಸಿದ್ದಾರೆ.  

‘ಪುಷ್ಪ ಚಿತ್ರದಿಂದ ನನ್ನ ಕರಿಯರ್​ನಲ್ಲಿ ಏನೂ ಬದಲಾಗಿಲ್ಲ’; ಖಾರವಾಗಿ ಹೇಳಿದ ಫಹಾದ್ ಫಾಸಿಲ್
ಅಲ್ಲು ಅರ್ಜುನ್-ಫಹಾದ್
 ಶ್ರೀಲಕ್ಷ್ಮೀ ಎಚ್
| Edited By: |

Updated on: May 07, 2024 | 10:18 AM

Share

ಫಹಾದ್ ಫಾಸಿಲ್ (Fahadh Faasil) ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಅವರ ನಟನೆಯ ‘ಆವೇಶಂ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಅವರು ‘ಪುಷ್ಪ’ ಚಿತ್ರದಲ್ಲಿ ಎಸ್​ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರ ಮಾಡಿದ್ದರು. ಈ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಈ ಮಧ್ಯೆ ಅವರು ಒಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ಪುಷ್ಪ’ ಚಿತ್ರದಿಂದ ನನ್ನ ಕರಿಯರ್ ಬದಲಾಗಿಲ್ಲ ಎಂದು ಹೇಳಿದ್ದಾರೆ.

2021ರ ಡಿಸೆಂಬರ್ ತಿಂಗಳಲ್ಲಿ ‘ಪುಷ್ಪ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ನಟಿಸಿದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದರು. ಅನೇಕರ ಸಂಭಾವನೆ ಹೆಚ್ಚಾಯಿತು. ಅನೇಕ ಕಲಾವಿದರ ಜನಪ್ರಿಯತೆ ಹೆಚ್ಚಿತು. ಆದರೆ, ಈ ಸಿನಿಮಾದಿಂದ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳುವ ಮೂಲಕ ಫಹಾದ್ ಅಚ್ಚರಿ ಮೂಡಿಸಿದ್ದಾರೆ.

‘ಪುಷ್ಪ ಚಿತ್ರದಿಂದ ನಿಮ್ಮ ಖ್ಯಾತಿ ಕೇರಳವನ್ನು ದಾಟಿ ಹೋಗಿದೆ ಅನ್ನೋದು ನಿಮಗೆ ಗೊತ್ತೇ’ ಎಂದು ಅವರನ್ನು ಕೇಳಲಾಯಿತು. ಇದಕ್ಕೆ ಅವರು ನೋ ಎಂದು ಉತ್ತರಿಸಿದ್ದಾರೆ. ‘ಪುಷ್ಪ ನನ್ನ ವೃತ್ತಿ ಜೀವನಕ್ಕೆ ಏನನ್ನೂ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಇದನ್ನು ಸುಕುಮಾರ್ ಅವರ ಎದುರೂ ಹೇಳುತ್ತೇನೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ನಾನು ಪ್ರಾಮಾಣಿಕನಾಗಿರಬೇಕು. ನಾನು ಇಲ್ಲಿ ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ಯಾವುದಕ್ಕೂ ಅಗೌರವವಿಲ್ಲ. ಪುಷ್ಪ ನಂತರ ಜನರು ನನ್ನಿಂದ ಮ್ಯಾಜಿಕ್ ಅನ್ನು ನಿರೀಕ್ಷಿಸುತ್ತಾರೆ. ಅದು ನಾನು ಸುಕುಮಾರ್ ಸರ್ ಮೇಲಿನ ಪ್ರೀತಿಗೆ ಮಾಡಿದ ಸಿನಿಮಾ. ನನ್ನ ಕೆಲಸ ಮಲಯಾಳಂ ಚಿತ್ರರಂಗಕ್ಕೆ’ ಎಂದಿದ್ದಾರೆ ಅವರು.

‘ರಾಜ್​ಕುಮಾರ್ ರಾವ್ ಓರ್ವ ಖ್ಯಾತ ನಟ. ರಣಬೀರ್ ಕಪೂರ್ ದೇಶದಲ್ಲೇ ಶ್ರೇಷ್ಠ ನಟ. ಅವರು ನನ್ನಲ್ಲಿ ಏನನ್ನು ನೋಡುತ್ತಾರೆ ಅನ್ನೋದು ನನಗೆ ತಿಳಿದಿಲ್ಲ. ಅಲ್ಲಿನ ಜನರು ಕುಂಬಳಂಗಿ ನೈಟ್ಸ್, ಟ್ರಾನ್ಸ್ ನೋಡಿದ್ದಾರೆ. ಯಾವ ಕನೆಕ್ಷನ್​ನಿಂದಾಗಿ ಮತ್ತು ಯಾವುದರ ಆಧಾರದ ಮೇಲೆ ಅವರು ನನ್ನ ಸಿನಿಮಾ ನೋಡುತ್ತಿದ್ದಾರೆ ಎನ್ನುವ ಬಗ್ಗೆ ನನಗೆ ಅಚ್ಚರಿ ಆಗುತ್ತದೆ’ ಎಂದಿದ್ದಾರೆ ಫಹಾದ್ ಫಾಸಿಲ್.

ಇದನ್ನೂ ಓದಿ: ‘ನನ್ನ ಸಿನಿಮಾಗಳಿಂದ ಯಾರ ಬದುಕೂ ಬದಲಾಗಿಲ್ಲ’; ಬೇಸರದಿಂದ ಹೇಳಿದ ಫಹಾದ್ ಫಾಸಿಲ್

ಅನೇಕರು ಫಹಾದ್ ಫಾಸಿಲ್​ನ ಪ್ಯಾನ್ ಇಂಡಿಯಾ ಸ್ಟಾರ್ ಎಂದು ಕರೆದಿದ್ದಾರೆ. ಇದನ್ನು ಅವರು ಒಪ್ಪಿಲ್ಲ. ‘ನಾನು ಮಲಯಾಳಂ ನಟ. ಪ್ಯಾನ್ ಇಂಡಿಯಾಗೂ ನನಗೂ ಸಂಬಂಧವಿಲ್ಲ. ನಾನು ನಂಬುವ ಕೆಲಸಗಳನ್ನು ಮಾಡುತ್ತೇನೆ. ಸಿನಿಮಾ ಬಿಸ್ನೆಸ್ ಮಾಡಬೇಕು ನಿಜ ಆದರೆ, ಅದು ಸೆಕೆಂಡರಿ. ಇಲ್ಲಿ ಮಾಡುವ ರೀತಿಯ ಸಿನಿಮಾಗಳನ್ನು ನಾನು ಎಲ್ಲಿಯೂ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ ಅವರು. ಫಹಾದ್ ಫಾಸಿಲ್ ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಈ ಕಾರಣಕ್ಕೆ ಅವರು ಹೆಚ್ಚು ಇಷ್ಟ ಆಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್