‘ನನ್ನ ಸಿನಿಮಾಗಳಿಂದ ಯಾರ ಬದುಕೂ ಬದಲಾಗಿಲ್ಲ’; ಬೇಸರದಿಂದ ಹೇಳಿದ ಫಹಾದ್ ಫಾಸಿಲ್
ಸಿನಿಮಾಗೆ ಹಲವರ ಬದುಕನ್ನು ಬದಲಾಯಿಸೋ ಶಕ್ತಿ ಇದೆ. ಸಿನಿಮಾ ನೋಡಿ ಬದುಕು ಬದಲಿಸಿಕೊಂಡ ಅನೇಕರಿದ್ದಾರೆ. ಆದರೆ, ಫಹಾದ್ಗೆ ತಮ್ಮ ಸಿನಿಮಾಗಳಿಂದ ಯಾರ ಬದುಕೂ ಬದಲಾಗಿಲ್ಲ ಎನ್ನುವ ಬೇಸರ ಇದೆ. ‘ಸಿನಿಮಾ ಪರಾಡಿಸೋ’ ಹೆಸರಿನ ಇಟಲಿಯ ಸಿನಿಮಾ ಅವರ ಬದುಕನ್ನು ಬದಲಿಸಿದೆಯಂತೆ.
ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಮಲಿಕ್’, ‘ಬೆಂಗಳೂರು ಡೇಸ್’, ‘ವಿಕ್ರಮ್’ ಹೀಗೇ ಅವರ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಆದರೆ, ಅವರ ಸಿನಿಮಾಗಳಿಂದ ಯಾರ ಜೀವನವೂ ಬದಲಾಗಿಲ್ಲ ಅನ್ನೋದು ಅವರ ಅಭಿಪ್ರಾಯ. ತಾವು ನಟನೆಯನ್ನು ತೊರೆಯೋ ಮೊದಲು ಆ ರೀತಿಯ ಸಿನಿಮಾಗಳನ್ನು ಮಾಡುವ ಕನಸು ಹೊಂದಿದ್ದಾರೆ.
ಸಿನಿಮಾಗೆ ಹಲವರ ಬದುಕನ್ನು ಬದಲಾಯಿಸೋ ಶಕ್ತಿ ಇದೆ. ಸಿನಿಮಾ ನೋಡಿ ಬದುಕು ಬದಲಿಸಿಕೊಂಡ ಅನೇಕರಿದ್ದಾರೆ. ಆದರೆ, ಫಹಾದ್ಗೆ ತಮ್ಮ ಸಿನಿಮಾಗಳಿಂದ ಯಾರ ಬದುಕೂ ಬದಲಾಗಿಲ್ಲ ಎನ್ನುವ ಬೇಸರ ಇದೆ. ‘ಸಿನಿಮಾ ಪರಾಡಿಸೋ’ ಹೆಸರಿನ ಇಟಲಿಯ ಸಿನಿಮಾ ಅವರ ಬದುಕನ್ನು ಬದಲಿಸಿದೆಯಂತೆ. ಆ ಸಿನಿಮಾ ನೋಡುವಾಗ ತಮಗೆ ಏನನ್ನಿಸುತ್ತದೆ ಅನ್ನೋದನ್ನು ಜನರಿಗೆ ಹೇಳಬೇಕು ಎಂಬುದು ಅವರ ಆಸೆ.
‘ನನ್ನ ಸಿನಿಮಾಗಳು ಯಾರ ಮೇಲೂ ಪ್ರಭಾವ ಬೀರಿಲ್ಲ. ನಾನು ಯಾರ ಬದುಕನ್ನೂ ಬದಲಾಯಿಸಿಲ್ಲ. ಆದರೆ, ಸಿನಿಮಾ ಪರಾಡಿಸೋ ನನ್ನ ಬದುಕನ್ನು ಬದಲಾಯಿಸಿತು. ಒಬ್ಬೇ ಒಬ್ಬರು ಬಂದು ಆ ಬಗ್ಗೆ ನನ್ನಲ್ಲಿ ಹೇಳಿಕೊಂಡಿಲ್ಲ. ಅನೇಕ ಸಿನಿಮಾಗಳು ನನ್ನ ಮೇಲೆ ಪ್ರಭಾವ ಬೀರಿವೆ. ನಾನು ನಟನೆಯನ್ನು ಬಿಡುವ ಮೊದಲು ಆ ರೀತಿಯ ಅನುಭವಗಳನ್ನು ನನ್ನ ಪ್ರೇಕ್ಷರಿಗೆ ನೀಡಬೇಕು ಎಂಬುದು ನನ್ನ ಕನಸು’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಪ್ರೇಮಲು’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಮಾಹಿತಿ ಕೊಟ್ಟ ನಿರ್ಮಾಪಕ ಫಹಾದ್ ಫಾಸಿಲ್
ಫಹಾದ್ ಫಾಸಿಲ್ ಅವರ ಮತ್ತೊಂದು ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕುತ್ತಿದೆ. ‘ಸಿನಿಮಾ ಮಾತ್ರ ಜೀವನ ಅಲ್ಲ, ಅದನ್ನು ಬಿಟ್ಟೂ ಇನ್ನೂ ಹಲವು ವಿಚಾರಗಳು ಇವೆ’ ಎಂದು ಫಹಾದ್ ಹೇಳಿದ್ದಾರೆ. ಈ ಹೇಳಿಕೆಗೆ ಅನೇಕರು ವಿರೋದ ವ್ಯಕ್ತಪಡಿಸಿದ್ದಾರೆ. ಫಹಾದ್ ಫಾಸಿಲ್ ನಟನೆಯ ‘ಆವೇಶಂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಸದ್ಯ ಅವರು ತೆಲುಗಿನ ‘ಪುಷ್ಪ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಸುಕುಮಾರನ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.