AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯ ಸಮುದ್ರ ಕಲಕಿದ್ದ ಸಂಗೀತ ಮಾಂತ್ರಿಕ ಎಸ್​​ಪಿ ವೆಂಕಟೇಶ್ ಇನ್ನಿಲ್ಲ

Music Director SP Venkatesh: ‘ಅಶ್ವಮೇಧ’ ಸಿನಿಮಾದ ‘ಹೃದಯ ಸಮುದ್ರ ಕಲಕಿ’ ಸೇರಿದಂತೆ ಹಲವು ಅತ್ಯುತ್ತಮ ಹಾಡುಗಳನ್ನು ಕನ್ನಡಕ್ಕೆ ನೀಡಿದ್ದ ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಎಸ್​​ಪಿ ವೆಂಕಟೇಶ್ ಅವರು ಇಂದು (ಫೆಬ್ರವರಿ 03) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೆಂಕಟೇಶ್ ಅವರು ಚೆನ್ನೈನ ತಮ್ಮ ಸ್ವಗೃಹದಲ್ಲಿ ಕೊನೆ ಉಸಿರೆಳೆದಿದ್ದಾರೆ ಅವರಿಗೆ 71 ವರ್ಷ ವಯಸ್ಸಾಗಿತ್ತು. ವೆಂಕಟೇಶ್ ನಿಧನಕ್ಕೆ ತಮಿಳು, ಮಲಯಾಳಂನ ಹಲವಾರು ಸಿನಿಮಾ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಹೃದಯ ಸಮುದ್ರ ಕಲಕಿದ್ದ ಸಂಗೀತ ಮಾಂತ್ರಿಕ ಎಸ್​​ಪಿ ವೆಂಕಟೇಶ್ ಇನ್ನಿಲ್ಲ
Sp Venkatesh
ಮಂಜುನಾಥ ಸಿ.
|

Updated on: Feb 03, 2026 | 8:42 PM

Share

‘ಅಶ್ವಮೇಧ’ ಸಿನಿಮಾದ (Cinema) ‘ಹೃದಯ ಸಮುದ್ರ ಕಲಕಿ’ ಸೇರಿದಂತೆ ಹಲವು ಅತ್ಯುತ್ತಮ ಹಾಡುಗಳನ್ನು ಕನ್ನಡಕ್ಕೆ ನೀಡಿದ್ದ ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಎಸ್​​ಪಿ ವೆಂಕಟೇಶ್ ಅವರು ಇಂದು (ಫೆಬ್ರವರಿ 03) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೆಂಕಟೇಶ್ ಅವರು ಚೆನ್ನೈನ ತಮ್ಮ ಸ್ವಗೃಹದಲ್ಲಿ ಕೊನೆ ಉಸಿರೆಳೆದಿದ್ದಾರೆ ಅವರಿಗೆ 71 ವರ್ಷ ವಯಸ್ಸಾಗಿತ್ತು. ವೆಂಕಟೇಶ್ ನಿಧನಕ್ಕೆ ತಮಿಳು, ಮಲಯಾಳಂನ ಹಲವಾರು ಸಿನಿಮಾ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಗಿಟಾರಿಸ್ಟ್ ಆಗಿ ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದ ಎಸ್​​​ಪಿ ವೆಂಕಟೇಶ್ ಅವರು ನೂರಾರು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಬೆಂಗಾಲಿ ಸಿನಿಮಾಗಳಿಗೂ ಸಹ ಸಂಗೀತ ನೀಡಿದ್ದಾರೆ. ಅದರಲ್ಲೂ ಮಲಯಾಳಂ ಮತ್ತು ತಮಿಳಿನ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿರುವ ಶ್ರೇಯ ಎಸ್​​ಪಿ ವೆಂಕಟೇಶ್ ಅವರದ್ದಾಗಿದೆ.

ಕನ್ನಡದಲ್ಲಿ ಸಹ ಹಲವಾರು ಸಿನಿಮಾಗಳಿಗೆ ವೆಂಕಟೇಶ್ ಅವರು ಸಂಗೀತ ನೀಡಿದ್ದಾರೆ. ‘ಪ್ರೇಮ ಯುದ್ಧ’ ಸಿನಿಮಾದಿಂದ ಆರಂಭಿಸಿದ, ‘ಅಶ್ವಮೇಧ’, ‘ಶರವೇಗದ ಸರದಾರ’, ‘ಸುಂದರಕಾಂಡ’, ‘ಪಂಚಮವೇದ’, ‘ಮೇಘ ಮಂದಾರ’ ಇನ್ನೂ ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಎಸ್​​ಪಿ ವೆಂಕಟ್ ನೀಡಿರುವ ‘ಹೃದಯ ಸಮುದ್ರ ಕಲಕಿ’ ಹಾಡನ್ನು ಕೇಳದ ಕನ್ನಡಿಗನೇ ಇಲ್ಲ ಎನ್ನಬಹುದೇನು.

ಇದನ್ನೂ ಓದಿ:ತೀವ್ರವಾಗಿ ಕುಸಿದ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; ಮುಂದೇನು ಪರಿಸ್ಥಿತಿ?

ಹಿಂದಿಯಲ್ಲಿ ಸಲ್ಮಾನ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಕ್ಯೂಂಕಿ’ಗೆ ಸಂಗೀತ ನೀಡಿರುವುದು ವೆಂಕಟೇಶ್. ಮಾತ್ರವಲ್ಲದೆ, ಅನಿಲ್ ಕಪೂರ್-ಟಬು ನಟನೆಯ ‘ಥೇವರ್ ಮಗನ್’ ಸಿನಿಮಾ ರೀಮೇಕ್ ‘ವಿರಾಸತ್’ಗೂ ವೆಂಕಟೇಶ್ ಅವರದ್ದೇ ಸಂಗೀತ. ಹಿಂದಿಯ ಕಲ್ಟ್ ಕಾಮಿಡಿ ಸಿನಿಮಾ ಆಗಿರುವ ‘ಹಂಗಾಮ’ಗೂ ವೆಂಕಟೇಶ್ ಅವರದ್ದೇ ಸಂಗೀತ. ಮಲಯಾಳಂನಲ್ಲಂತೂ ಹಲವಾರು ಸಿನಿಮಾಗಳಿಗೆ ವೆಂಕಟೇಶ್ ಸಂಗೀತ ನೀಡಿದ್ದಾರೆ.

ವೆಂಕಟೇಶ್ ನಿಧನಕ್ಕೆ ಮಲಯಾಳಂ ನಟ ಸುರೇಶ್ ಗೋಪಿ, ನಿರ್ದೇಶಕ ಉನ್ನಿಕೃಷ್ಣ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ತಮಿಳು ಚಿತ್ರರಂಗದ ಕೆಲವು ಖ್ಯಾತ ಗಾಯಕರು, ಸಂಗೀತಕರ್ಮಿಗಳು ಸಹ ಎಸ್​​ಪಿ ವೆಂಕಟೇಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ವೆಂಕಟೇಶ್ ಅವರ ಅಂತಿಮ ಕಾರ್ಯಗಳು ನಾಳೆ (ಫೆಬ್ರವರಿ 04) ಚೆನ್ನೈನಲ್ಲಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು
ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು
ಪಾಕ್ ಕ್ರಿಕೆಟ್ ಭವಿಷ್ಯ ಮೋದಿ ಕೈಯಲ್ಲಿದೆ; ರಮೀಜ್ ರಾಜಾ
ಪಾಕ್ ಕ್ರಿಕೆಟ್ ಭವಿಷ್ಯ ಮೋದಿ ಕೈಯಲ್ಲಿದೆ; ರಮೀಜ್ ರಾಜಾ
ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್
ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್
ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ: ಕಣ್ಣೀರು ಹಾಕಿದ ಸಂತ್ರಸ್ತರು
ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ: ಕಣ್ಣೀರು ಹಾಕಿದ ಸಂತ್ರಸ್ತರು
ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವು ರಕ್ಷಣೆ
ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವು ರಕ್ಷಣೆ
ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ