AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಸೋಲಿಗೆ ಇವರೇ ಕಾರಣ; ಹೀನಾಯ ಆಟದ ಬಳಿಕ ಹೇಳಿಕೆ ನೀಡಿದ ಪಾಂಡ್ಯ

ಮುಂಬೈ ಇಂಡಿಯನ್ಸ್ ಸಿಎಸ್‌ಕೆ ವಿರುದ್ಧ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಕಂಡ ಬಳಿಕ, ನಾಯಕ ಹಾರ್ದಿಕ್ ಪಾಂಡ್ಯ ಹೇಳಿಕೆ ನೀಡಿದ್ದಾರೆ. ಪಿಚ್ ಬದಲಾಗಿದೆ ಎಂದು ಹೇಳಲು ಇಷ್ಟಪಡುವುದಿಲ್ಲ ಎಂದ ಪಾಂಡ್ಯ, ಸಿಎಸ್‌ಕೆ ತಂಡದ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ಹೊಗಳಿದ್ದಾರೆ ಚೆನ್ನೈ ಬ್ಯಾಟರ್‌ಗಳು ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಮುಂಬೈ ತಂಡ ವಿಫಲವಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.

ನಮ್ಮ ಸೋಲಿಗೆ ಇವರೇ ಕಾರಣ; ಹೀನಾಯ ಆಟದ ಬಳಿಕ ಹೇಳಿಕೆ ನೀಡಿದ ಪಾಂಡ್ಯ
ಮುಂಬೈ ಇಂಡಿಯನ್ಸ್
ರಾಜೇಶ್ ದುಗ್ಗುಮನೆ
|

Updated on: Apr 24, 2026 | 7:46 AM

Share

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಸಿಎಸ್​​ಕೆ ವಿರುದ್ಧ 103 ರನ್​​ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಇದಾಗಿದೆ. ಸಿಎಸ್​ಕೆ ನೀಡಿದ 207 ರನ್​​ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಮುಂಬೈ ಅತ್ಯಂತ ಹೀನಾಯ ಪ್ರದರ್ಶನ ನೀಡಿತು. ಕೇವಲ 104 ರನ್​​ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಕ್ಯಾಪ್ಟನ್ ಪಾಂಡ್ಯ 1 ರನ್​​ಗೆ ಔಟ್ ಆದರು. ಪಂದ್ಯ ಮುಗಿದ ಬಳಿಕ ರವಿ ಶಾಸ್ತ್ರಿ ಜೊತೆ ಮಾತನಾಡಿದ ಪಾಂಡ್ಯ, ಮುಂಬೈ ತಂಡದ ಸೋಲಿಗೆ ಕಾರಣ ನೀಡಿದರು. ನಾಲ್ಕು ಪಂದ್ಯಗಳಲ್ಲಿ 2 ಶತಕ ಬಾರಿಸಿದ ಸಂಜು ಅವರನ್ನು ಹೊಗಳಿದರು.

‘ಪಿಚ್ ಬದಲಾಗಿದೆ ಎಂದು ನಾನು ಹೇಳುವುದಿಲ್ಲ. ನಾನು ಹಾಗೆ ಹೇಳಲು ಇಷ್ಟಪಡುವ ವ್ಯಕ್ತಿಯೂ ಅಲ್ಲ’ ಎಂದು ಪಾಂಡ್ಯ ಹೇಳಿದ್ದಾರೆ. ಕೆಲವರು ಸೋಲಿನ ಬಳಿಕ ‘ಪಿಚ್ ಸರಿ ಇರಲಿಲ್ಲ, ಪಿಚ್ ಬದಲಾಗಿತ್ತು’ ಎಂಬ ಕಾರಣವನ್ನು ನೀಡುತ್ತಾರೆ. ಈ ಕಾರಣದಿಂದ ಹಾರ್ದಿಕ್ ಈ ರೀತಿ ಹೇಳಿಕೆ ನೀಡಿದ್ದಾರೆ.

‘ಚೆನ್ನೈ ತಂಡದವರು ಚೆನ್ನಾಗಿ ಬ್ಯಾಟ್ ಮಾಡಿದರು. ಈ ಮೂಲಕ 207 ರನ್ ಗಳಿಸಿದರು. ಅವರು ರನ್ ಗಳಿಸಿದ್ದು ಇದೇ ಪಿಚ್​​ನಲ್ಲಿ, ಇದೇ ಮಣ್ಣಿನಲ್ಲಿ. ನಾವು ಆಡಿದ್ದು ಇದೇ ಮೈದಾನದಲ್ಲಿ. ನಾವು ಉತ್ತಮವಾಗಿ ಬ್ಯಾಟ್ ಮಾಡಬೇಕಿತ್ತು. ಸಂಜು ಅದ್ಭುತವಾಗಿ ಬ್ಯಾಟಿಂಗ್ ಆಡಿದರು. ಅವರು ಬ್ಯಾಟರ್​​ಗಳು ಬರೋದು ಹಾಗೂ ರನ್ ಪೇರಿಸುವ ಕೆಲಸ ಮಾಡಿದರು. ಈ ಮೂಲಕ ಒಳ್ಳೆಯ ಮೊತ್ತ ಕಲೆ ಹಾಕಿದರು’ ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.

‘ಈ ಪಿಚ್​​ನಲ್ಲಿ ಸಾಮಾನ್ಯವಾಗಿ ಬರುವ ರನ್​​ಗಿಂತ ಹೆಚ್ಚಿನ ರನ್ ಬಂದಿತ್ತು. ಇದನ್ನು ಚೇಸ್ ಮಾಡಲು ನಮಗೆ ಉತ್ತಮ ಪವರ್‌ಪ್ಲೇ ಅಗತ್ಯವಿತ್ತು. ಆವೇಗದಲ್ಲಿ ನಾವು ಆಡಬೇಕಿತ್ತು. ಆದರೆ ಹಾಗಾಗಲಿಲ್ಲ’ ಎಂದು ಪಾಂಡ್ಯ ಹೇಳಿದರು. ಸದ್ಯ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಬರೋಬ್ಬರಿ 103 ರನ್..! ಐಪಿಎಲ್ ಇತಿಹಾಸದಲ್ಲೇ ಅತಿ ಹೀನಾಯ ಸೋಲು ಕಂಡ ಮುಂಬೈ

ಸಂಜು ಸ್ಯಾಮ್ಸನ್ಸ್ ಕೇವಲ 54 ಬಾಲ್​​ಗಳಲ್ಲಿ 101 ರನ್ ಸಿಡಿಸಿದರು. ಇದರಲ್ಲಿ 6 ಸಿಕ್ಸ್, 10 ಫೋರ್ ಸೇರಿದೆ. ಈ ಮೊತ್ತ ತಂಡಕ್ಕೆ ಆಸರೆ ಆಯಿತು. ಉಳಿದ ಯಾವುದೇ ಸಿಎಸ್​​ಕೆ ಆಟಗಾರರು 25 ರನ್ ಗಡಿ ದಾಟಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ