AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾ ಟಿಕೆಟ್ ಬರೋಬ್ಬರಿ 1.4 ಲಕ್ಷ ರೂ.ಗೆ ಮಾರಾಟ

ಕ್ರಿಸ್ಟೋಫರ್ ನೋಲನ್ ಅವರ 'ದಿ ಒಡಿಸ್ಸಿ' ಸಿನಿಮಾ ಜಾಗತಿಕವಾಗಿ ಅತಿದೊಡ್ಡ ಹೈಪ್ ಸೃಷ್ಟಿಸಿದೆ. ಐಮ್ಯಾಕ್ಸ್ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಲ್ಪಟ್ಟ ಈ ಚಿತ್ರ, ಅದ್ಭುತ ದೃಶ್ಯ ವೈಭವ ನೀಡುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ, ಇಬೇಯಲ್ಲಿ ಟಿಕೆಟ್‌ಗಳು 1500 ಡಾಲರ್‌ಗೆ (ಸುಮಾರು 1.4 ಲಕ್ಷ ರೂ) ಮಾರಾಟವಾಗುತ್ತಿದ್ದು, ನೋಲನ್ ಸಿನಿಮಾಗಳ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾ ಟಿಕೆಟ್ ಬರೋಬ್ಬರಿ 1.4 ಲಕ್ಷ ರೂ.ಗೆ ಮಾರಾಟ
ಒಡೆಸ್ಸಿ
ರಾಜೇಶ್ ದುಗ್ಗುಮನೆ
|

Updated on: Jun 05, 2026 | 2:35 PM

Share

ವಿಶ್ವಪ್ರಸಿದ್ಧ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಿನಿಮಾ ಬರ್ತಿದೆ ಎಂದರೆ ಸಾಕು, ಜಗತ್ತಿನಾದ್ಯಂತ ಸಿನಿರಸಿಕರಲ್ಲಿ ಭಾರಿ ಕುತೂಹಲ ಮತ್ತು ಹೈಪ್ ಸೃಷ್ಟಿಯಾಗುವುದು ತೀರಾ ಮಾಮೂಲಿ. ಆದರೆ, ಅವರ ಮುಂಬರುವ ಹೊಸ ಸಿನಿಮಾ ‘ದಿ ಒಡಿಸ್ಸಿ’ (The Odyssey) ವಿಷಯದಲ್ಲಿ ಮಾತ್ರ ಈ ಕ್ರೇಜ್ ಈಗ ಎಲ್ಲ ಎಲ್ಲೆಗಳನ್ನೂ ಮೀರಿ ನಿಂತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ.

ಹಾಲಿವುಡ್ ಮಾಧ್ಯಮಗಳ ಇತ್ತೀಚಿನ ವರದಿಗಳ ಪ್ರಕಾರ, ಇಬೇ ವೆಬ್‌ಸೈಟ್‌ನಲ್ಲಿ ‘ದಿ ಒಡಿಸ್ಸಿ’ ಸಿನಿಮಾದ ಬ್ಲ್ಯಾಕ್ ಟಿಕೆಟ್‌ಗಳು ಬರೋಬ್ಬರಿ 1500 ಡಾಲರ್‌ಗೆ ಮಾರಾಟವಾಗುತ್ತಿವೆ. ಇದನ್ನು ಭಾರತೀಯ ರೂಪಾಯಿಗಳಿಗೆ ಕನ್ವರ್ಟ್ ಮಾಡಿದರೆ ಅಂದಾಜು 1.4 ಲಕ್ಷ ರೂಪಾಯಿ ಆಗುತ್ತದೆ. ಒಂದೇ ಒಂದು ಟಿಕೆಟ್‌ಗೆ ಜನರು ಇಷ್ಟೊಂದು ದೊಡ್ಡ ಮೊತ್ತ ನೀಡುತ್ತಿರುವುದು ನೋಲನ್ ಸಿನಿಮಾಗಳ ಮೇಲಿರುವ ಗರಿಷ್ಠ ಮಟ್ಟದ ನಿರೀಕ್ಷೆಯನ್ನು ಸಾಬೀತುಪಡಿಸಿದೆ.

‘ದಿ ಒಡಿಸ್ಸಿ’ ಸಿನಿಮಾವನ್ನು ಸಂಪೂರ್ಣವಾಗಿ ಅತ್ಯಾಧುನಿಕ ಐಮ್ಯಾಕ್ಸ್ (IMAX) ಕ್ಯಾಮೆರಾಗಳಲ್ಲೇ ಚಿತ್ರೀಕರಿಸಲಾಗಿದೆ. ಇದನ್ನು 1.43:1 ರೇಶಿಯೋದ 70ಎಂಎಂ ಐಮ್ಯಾಕ್ಸ್ ಪರದೆಯ ಮೇಲೆ ನೋಡುವುದೇ ಒಂದು ಅದ್ಭುತ ದೃಶ್ಯ ವೈಭವ. ಇದೇ ಕಾರಣಕ್ಕೆ, ಚಿತ್ರಮಂದಿರದ ಅತ್ಯುತ್ತಮ ಐಮ್ಯಾಕ್ಸ್ ಸ್ಕ್ರೀನ್‌ನಲ್ಲಿ ಈ ಮ್ಯಾಜಿಕ್ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದು, ಒಂದು ಟಿಕೆಟ್‌ಗೆ ಲಕ್ಷ ಲಕ್ಷ ಹಣ ಚೆಲ್ಲಲು ರೆಡಿಯಾಗಿದ್ದಾರೆ.

ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?

ಬಿಡುಗಡೆಗೂ ಮುನ್ನವೇ ಇಷ್ಟೊಂದು ಸೌಂಡ್ ಮಾಡುತ್ತಿರುವ ಈ ಸಿನಿಮಾ, ತೆರೆಕಂಡ ಮೇಲೆ ಬಾಕ್ಸ್ ಆಫೀಸ್‌ನಲ್ಲಿ ಇನ್ನೆಷ್ಟು ದಾಖಲೆಗಳನ್ನು ಉಡೀಸ್ ಮಾಡಲಿದೆಯೋ ಎಂಬ ಪ್ರಶ್ನೆ ಸಿನಿರಸಿಕರಲ್ಲಿ ಮೂಡಿದೆ. ಹೋಮರ್ ಬರೆದಿರುವ ಗ್ರೀಕ್ ಮಹಾಕಾವ್ಯದ ಹಿನ್ನೆಲೆಯುಳ್ಳ ‘ದಿ ಒಡಿಸ್ಸಿ’ ಸಿನಿಮಾ ಜುಲೈ 17 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮ್ಯಾಟ್ ಡಾಮನ್, ಟಾಮ್ ಹಾಲೆಂಡ್, ಆನ್ ಹ್ಯಾಥ್‌ವೇ, ರಾಬರ್ಟ್ ಪ್ಯಾಟಿನ್ಸನ್, ಝೆಂಡಾಯಾ ಮತ್ತು ಚಾರ್ಲಿಜ್ ಥೆರಾನ್ ಸೇರಿದಂತೆ ಹಾಲಿವುಡ್‌ನ ದಿಗ್ಗಜ ಕಲಾವಿದರ ದಂಡೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us