ಮತ್ತೆ ಬಂದರು ಪ್ರಚಂಡ ಜಾದೂಗಾರರು, ಹಾರ್ಸ್ಮನ್ಗಳ ಮುಂದಿನ ಗುರಿ ಏನು?
ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂ ರೀಲ್ಸ್ಗಳಲ್ಲಿ ನಾಲ್ವರು ಜಾದೂಗಾರರ ವಿಡಿಯೋ ಒಂದು ಪದೇ ಪದೇ ಕಾಣಲು ಸಿಗುತ್ತದೆ. ಒಬ್ಬ ಮಹಿಳೆ ಮೂವರು ಪುರುಷರು ಒಂದು ಹೈ ಸೆಕ್ಯುರಿಟಿ ಇರುವ ಜಾಗಕ್ಕೆ ಹೋಗಿ ಅಲ್ಲಿಂದ ಒಂದು ಸಣ್ಣ ಚಿಪ್ ಕದಿಯುತ್ತಾರೆ. ಆ ಚಿಪ್ ಅನ್ನು ಅಲ್ಲೇ ಇರುವ ಸೈನಿಕರ ಕಣ್ಣು ತಪ್ಪಿಸಿ, ಒಬ್ಬರ ಕೈಯಿಂದ ಒಬ್ಬರಿಗೆ ದಾಟಿಸುತ್ತಾ, ಎಲ್ಲರ ಕಣ್ಣಿಗೆ ಮಣ್ಣೆರಚಿ ಹೊರಗೆ ತೆಗೆದುಕೊಂಡು ಬರುತ್ತಾರೆ. ಇದು ಜನಪ್ರಿಯ ‘ನೌ ಯು ಸಿ ಮೀ’ ಸಿನಿಮಾದ ದೃಶ್ಯ, ಇದೀಗ ಈ ಸಿನಿಮಾ ಸರಣಿಯ ಮೂರನೇ ಭಾಗ ಬಿಡುಗಡೆಗೆ ರೆಡಿಯಾಗಿದೆ.

ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂ ರೀಲ್ಸ್ಗಳಲ್ಲಿ ನಾಲ್ವರು ಜಾದೂಗಾರರ ವಿಡಿಯೋ ಒಂದು ಪದೇ ಪದೇ ಕಾಣಲು ಸಿಗುತ್ತದೆ. ಒಬ್ಬ ಮಹಿಳೆ ಮೂವರು ಪುರುಷರು ಒಂದು ಹೈ ಸೆಕ್ಯುರಿಟಿ ಇರುವ ಜಾಗಕ್ಕೆ ಹೋಗಿ ಅಲ್ಲಿಂದ ಒಂದು ಸಣ್ಣ ಚಿಪ್ ಕದಿಯುತ್ತಾರೆ. ಆ ಚಿಪ್ ಅನ್ನು ಅಲ್ಲೇ ಇರುವ ಸೈನಿಕರ ಕಣ್ಣು ತಪ್ಪಿಸಿ, ಒಬ್ಬರ ಕೈಯಿಂದ ಒಬ್ಬರಿಗೆ ದಾಟಿಸುತ್ತಾ, ಎಲ್ಲರ ಕಣ್ಣಿಗೆ ಮಣ್ಣೆರಚಿ ಹೊರಗೆ ತೆಗೆದುಕೊಂಡು ಬರುತ್ತಾರೆ. ಈ ದೃಶ್ಯ ಆಗಾಗ್ಗೆ ಟ್ರೆಂಡ್ ಆಗುತ್ತಲೇ ಇರುತ್ತದೆ. ಅಸಲಿಗೆ ಇದು ‘ನೌ ಯು ಸೀ ಮಿ’ ಸಿನಿಮಾದ ದೃಶ್ಯ. ಈ ಸಿನಿಮಾ ನಾಲ್ಕು ಜಾದೂಗಾರರ ಕತೆ ಹೊಂದಿರುವ ಸಿನಿಮಾ. ಇಡೀ ಸಿನಿಮಾದ ಕತೆಯೇ ಜಾದೂಗಾರಿಕೆ ಮೇಲೆ ಆಧರಿಸಿದ್ದಾಗಿದೆ. ಇದೀಗ ಈ ಸಿನಿಮಾದ ಮೂರನೇ ಭಾಗ ಬಿಡುಗಡೆ ಆಗಲಿದೆ.
‘ನೌ ಯು ಸಿ ಮೀ 3’ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಥ್ರಿಲ್ಲಂಗ್ ಅನುಭವವನ್ನು ಟ್ರೈಲರ್ ನೀಡುತ್ತಿದೆ. ಸಿನಿಮಾನಲ್ಲಿ ಅದ್ಭುತ ಜಾದೂಗಾರರನ್ನು ಹಾರ್ಸ್ಮನ್ ಎಂದು ಕರೆಯಲಾಗುತ್ತದೆ. ಈ ಹಿಂದಿನ ಸಿನಿಮಾಗಳಲ್ಲಿ ಇದ್ದ ನಾಲ್ವರು ಹಾರ್ಸ್ಮನ್ಗಳು ಬೇರೆ ಬೇರೆ ಆಗಿದ್ದು ಈಗ ಹೊಸ ಹಾರ್ಸ್ಮನ್ಗಳು ಅಂದರೆ ಜಾದೂಗಾರರು ತಂಡ ಸೇರಿಕೊಂಡಿದ್ದಾರೆ. ಈ ಹಿಂದಿನ ಸಿನಿಮಾಗಳ ರೀತಿಯೇ ಜಾದೂ ಬಳಸಿ ಇವರು ಕ್ರಿಮಿನಲ್ಗಳ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಈ ಬಾರಿ ಭಾರಿ ದೊಡ್ಡ ನಟೋರಿಯಸ್ ಗ್ಯಾಂಗ್ ಅನ್ನೇ ಎದುರು ಹಾಕಿಕೊಂಡಿದ್ದಾರೆ.
ಭಯೋತ್ಪಾದಕರು, ಅವರಿಗೆ ದೊಡ್ಡ ಮಟ್ಟಿಗೆ ಹಣ ಸಹಾಯ ಮಾಡುತ್ತಿರುವ ಅಂತರಾಷ್ಟ್ರೀಯ ಕ್ರಿಮಿನಲ್ಗಳ ಮೇಲೆ ಇವರ ಕಣ್ಣು ಬಿದ್ದಿದೆ. ಭಯೋತ್ಪಾದಕರಿಗೆ ಹಣ ತಲುಪುವುದನ್ನು ತಡೆಯಲು ವಿಶ್ವದ ಅತ್ಯಂತ ದುಬಾರಿ ವಜ್ರವನ್ನು ಜಾದೂ ಬಳಸಿ ಕದಿಯಲು ಈ ತಂಡ ಮುಂದಾಗಿದೆ. ಟ್ರೈಲರ್ನ ಆರಂಭದಲ್ಲಿ ಹಳೆ ಹಾರ್ಸ್ಮನ್ಗಳು ತಂಡ ಬಿಟ್ಟು ಹೋಗಿದ್ದಾರೆ ಎಂದು ತೋರಿಸಲಾಗಿದೆ. ಆದರೆ ಅದೇ ಟ್ರೈಲರ್ನಲ್ಲಿ ಹಳೆ ಹಾರ್ಸ್ಮನ್ ತಂಡದವರು ಮತ್ತೆ ಒಟ್ಟಿಗೆ ಸೇರಿಕೊಂಡಿದ್ದು ಎಲ್ಲರೂ ಸೇರಿ ಮಿಷನ್ ನಲ್ಲಿ ಭಾಗಿ ಆಗುತ್ತಾರೆ.
ಇದನ್ನೂ ಓದಿ:ಮತ್ತೆ ಹಾಲಿವುಡ್ಗೆ ಹಾರಲಿರುವ ನಟಿ ಆಲಿಯಾ ಭಟ್, ಸಿನಿಮಾ ಯಾವುದು?
ರುಬೆನ್ ಫ್ಲೆಶರ್ ‘ನೌ ಯು ಸೀ ಮಿ 3’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ‘ವೆನಮ್’, ‘ಜಾಂಬಿಲ್ಯಾಂಡ್’, ‘ದಿ ಮೌಲ್’ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಈ ಹಿಂದಿನ ‘ನೌ ಯು ಸಿ ಮೀ’ ಸಿನಿಮಾಗಳಲ್ಲಿ ನಟಿಸಿದ್ದ ಜೆಸ್ಸಿ ಇಸನ್ಬರ್ಗ್, ವೂಡಿ ಹಾರ್ಲ್ಸನ್, ಡೇವ್ ಫ್ರಾಂಕೊ, ಇಶಾ ಫಿಶರ್ ಮತ್ತು ಮಾರ್ಗನ್ ಫ್ರೀಮನ್ ನಟಿಸಿದ್ದಾರೆ. ಈ ಹಿಂದಿನ ಎರಡು ಸಿನಿಮಾಗಳಲ್ಲಿ ನಟಿಸಿದ್ದ ‘ಹಲ್ಕ್’ ಖ್ಯಾತಿಯ ಮಾರ್ಕ್ ರಫೆಲೊ ಈ ಸಿನಿಮಾದಲ್ಲಿ ನಟಿಸಿಲ್ಲ. ‘ನೌ ಯು ಸಿ ಮೀ 3’ ಸಿನಿಮಾ ಭಾರತದಲ್ಲಿ ಮೇ 31 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




