AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್ ಪ್ರಕರಣ: ತೆಲುಗಿನ ‘ಬೇಬಿ’ ಸಿನಿಮಾ ತಂಡಕ್ಕೆ ನೊಟೀಸ್

Baby Telugu Movie: ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿರುವ ತೆಲುಗಿನ 'ಬೇಬಿ' ಸಿನಿಮಾಕ್ಕೆ ಹೈದರಾಬಾದ್ ಪೊಲೀಸರು ನೊಟೀಸ್ ನೀಡಿದ್ದಾರೆ. ಸಿನಿಮಾದಲ್ಲಿ ಡ್ರಗ್ಸ್ ಬಳಕೆಯ ಬಗ್ಗೆ ತೋರಿಸಲಾಗಿರುವ ದೃಶ್ಯಗಳಿಗೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ಪ್ರಕರಣ: ತೆಲುಗಿನ 'ಬೇಬಿ' ಸಿನಿಮಾ ತಂಡಕ್ಕೆ ನೊಟೀಸ್
ಬೇಬಿ
ಮಂಜುನಾಥ ಸಿ.
|

Updated on: Sep 14, 2023 | 10:04 PM

Share

ತೆಲುಗಿನಲ್ಲಿ ಇತ್ತೀಚೆಗೆ ಬಿಡುಗಡೆ ಆಗಿದ್ದ ‘ಬೇಬಿ‘ (Baby) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ನಾಯಕಿ ಪ್ರೇಮದ ಹೆಸರಲ್ಲಿ ಇಬ್ಬರು ಯುವಕರನ್ನು ಒಮ್ಮೆಲೆ ಮೋಸ ಮಾಡುವ ಕತೆಯನ್ನು ಆ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಯುವ ಸಮುದಾಯ ಬಹುವಾಗಿ ಮೆಚ್ಚಿಕೊಂಡಿದೆ. ಯುವತಿಯರ ವ್ಯಕ್ತಿತ್ವವನ್ನು ಋಣಾತ್ಮಕವಾಗಿ ಚಿತ್ರಿಸಿರುವುದಕ್ಕೆ ಕೆಲವರು ಆಕ್ಷೇಪವನ್ನೂ ಸಿನಿಮಾ ಬಗ್ಗೆ ವ್ಯಕ್ತಪಡಿಸಿದ್ದಾರೆ. ಏನೇ ಆದರು ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದ್ದು, ಸಿನಿಮಾ ತಂಡ ಖುಷಿಯಲ್ಲಿದೆ. ಆದರೆ ಇದೀಗ ಹೈದರಾಬಾದ್ ಪೊಲೀಸರು ಸಿನಿಮಾ ತಂಡಕ್ಕೆ ನೊಟೀಸ್ ನೀಡಿದ್ದಾರೆ.

ಇತ್ತೀಚೆಗಷ್ಟೆ ನಾರ್ಕೊಟಿಕ್ಸ್ ಬ್ಯೂರೋ ಹಾಗೂ ಹೈದರಾಬಾದ್ ಪೊಲೀಸರು ಜಂಟಿಯಾಗಿ ಮಾದಾಪುರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶಿ ಡ್ರಗ್ಸ್ ಪೆಡ್ಲರ್​ಗಳ ಜೊತೆಗೆ ನಿರ್ಮಾಪಕ, ಮಾಜಿ ಸಂಸದರೊಬ್ಬರ ಮಗ ಸಹ ಬಂಧನಕ್ಕೊಳಗಾಗಿದ್ದಾನೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಸಿವಿ ಆನಂದ್, ಸಿನಿಮಾಗಳಲ್ಲಿ ಡ್ರಗ್ಸ್ ಬಳಕೆ ಬಗ್ಗೆ ದೃಶ್ಯಗಳ ಬಗ್ಗೆ ಮಾತನಾಡುತ್ತಾ, ‘ಬೇಬಿ’ ಸಿನಿಮಾ ತಂಡಕ್ಕೆ ನೊಟೀಸ್ ನೀಡುವುದಾಗಿ ಹೇಳಿದ್ದಾರೆ.

”ಸಿನಿಮಾಗಳಲ್ಲಿ ಡ್ರಗ್ಸ್ ಬಳಕೆ ಬಗ್ಗೆ ದೃಶ್ಯಗಳನ್ನು ಪ್ರದರ್ಶಿಸಬಾರದು. ಇತ್ತೀಚೆಗಿನ ಹಿಟ್ ಸಿನಿಮಾ ‘ಬೇಬಿ’ನಲ್ಲಿ ಡ್ರಗ್ಸ್ ಬಳಕೆ ಬಗ್ಗೆ ದೃಶ್ಯಗಳನ್ನು ಪ್ರದರ್ಶಿಸಲಾಗಿದೆ. ನಾವು ಬಿಡುಗಡೆ ಆಗುತ್ತಿರುವ ಎಲ್ಲ ಸಿನಿಮಾಗಳನ್ನು ಪರಿಶೀಲನೆ ನಡೆಸಲಿದ್ದು, ಡ್ರಗ್ಸ್ ಬಳಕೆಯನ್ನು ತೋರಿಸುವ ಸಿನಿಮಾಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈಗ ‘ಬೇಬಿ’ ಸಿನಿಮಾಕ್ಕೆ ಈ ವಿಷಯಕ್ಕೆ ಸಂಬಂಧಿಸಿದಂತೆ ನೊಟೀಸ್ ನೀಡಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ:ವಿಜಯ್ ದೇವರಕೊಂಡ ಸಹೋದರನ ಸೂಪರ್ ಹಿಟ್ ಸಿನಿಮಾ ‘ಬೇಬಿ’ ಒಟಿಟಿಗೆ

ಮಾತ್ರವಲ್ಲದೆ, ”ನಾವು ದಾಳಿ ನಡೆಸಿದ ಫ್ರೆಶ್ ಲಿವಿಂಗ್ ಅಪಾರ್ಟ್​ಮೆಂಟ್​ನಲ್ಲಿ ಇದ್ದ ದೃಶ್ಯಗಳು ‘ಬೇಬಿ’ ಸಿನಿಮಾದಲ್ಲಿ ತೋರಿಸಲಾಗಿರುವ ದೃಶ್ಯಗಳಿಗೆ ಸಾಕಷ್ಟು ಹೋಲಿಕೆ ಇದೆ. ‘ಬೇಬಿ’ ಸಿನಿಮಾನಲ್ಲಿ ಮಾದಕ ದ್ಯವ್ಯವನ್ನು ಹೇಗೆ ಬಳಸಬೇಕೆಂದು ತೋರಿಸುವ ದೃಶ್ಯಗಳು ಇವೆ. ಇದು ಅಪಾಯಕಾರಿ” ಎಂದು ಆಯುಕ್ತರು, ‘ಬೇಬಿ’ ಸಿನಿಮಾದಲ್ಲಿ ಡ್ರಗ್ಸ್ ಬಳಕೆಯ ಬಗ್ಗೆ ಇರುವ ದೃಶ್ಯಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಸಾರ ಮಾಡಿ ತೋರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ‘ಬೇಬಿ’ ಸಿನಿಮಾ ನಿರ್ದೇಶಕ ಸಾಯಿ ರಾಜೇಶ್, ”ನನಗೆ ಈಗಾಗಲೇ ಅಡ್ವೈಸರಿ ನೊಟೀಸ್ ಬಂದಿದೆ. ಡ್ರಗ್ಸ್ ಬಳಕೆಯ ಬಗ್ಗೆ ಮಾಹಿತಿ ನೀಡುವ ದೃಶ್ಯಗಳನ್ನು ತೋರಿಸದಂತೆ ಹೇಳಿದ್ದಾರೆ. ಆದರೆ ನಾವು ಸಿನಿಮಾದಲ್ಲಿ ಒಬ್ಬ ಸಾಮಾನ್ಯ ಹುಡುಗಿ ಕೆಟ್ಟ ಗೆಳೆಯರಿಂದಾಗಿ ಹೇಗೆ ಡ್ರಗ್ಸ್​ಗೆ ಕುಡಿತಕ್ಕೆ ದಾಸಳಾಗುತ್ತಾಳೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ಈಗಾಗಲೇ ಸಿನಿಮಾ ಸೆನ್ಸಾರ್ ಆಗಿರುವ ಕಾರಣದಿಂದಾಗಿ ಆ ದೃಶ್ಯಗಳನ್ನು ಈಗ ತೆಗೆಯಲು ಬರುವುದಿಲ್ಲ” ಎಂದಿದ್ದಾರೆ.

‘ಬೇಬಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟಿಸಿದ್ದು, ಸಿನಿಮಾವನ್ನು ಶ್ರೀನಿವಾಸ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಸಾಮಾನ್ಯ ಕುಟುಂಬದ ಯುವತಿಯೊಬ್ಬಾಕೆ ಕೆಟ್ಟ ಸಹವಾಸದಿಂದ ಕೆಟ್ಟ ಗುಣಗಳನ್ನು ಕಲಿತು, ತನ್ನ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಇಬ್ಬರು ಯುವಕರೊಟ್ಟಿಗೆ ಪ್ರೇಮದ ನಾಟಕ ಆಡುವ ಕತೆಯನ್ನು ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ