Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಿತ್ ಸಿನಿಮಾ ವಿರುದ್ಧ ದೂರು, ಐದು ಕೋಟಿ ಕೇಳಿದ ಇಳಯರಾಜ

Ilayaraja: ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಗಳಿಕೆ ಮಾಡುತ್ತಿದೆ. ಇದರ ಬೆನ್ನಲ್ಲೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಕ್ಕೆ ಶಾಕ್ ನೀಡಿದ್ದಾರೆ. ಲೀಗಲ್ ನೋಟೀಸ್ ನೀಡಿರುವ ಇಳಯರಾಜ ಐದು ಕೋಟಿ ರೂಪಾಯಿಗೆ ಬೇಡಿಕೆ ಇರಿಸಿದ್ದಾರೆ.

ಅಜಿತ್ ಸಿನಿಮಾ ವಿರುದ್ಧ ದೂರು, ಐದು ಕೋಟಿ ಕೇಳಿದ ಇಳಯರಾಜ
Ajith Kumar Ilayaraja
Follow us
ಮಂಜುನಾಥ ಸಿ.
|

Updated on: Apr 15, 2025 | 6:17 PM

ಸಂಗೀತ ನಿರ್ದೇಶಕ ಇಳಯರಾಜ (Ilayaraja) ಕಳೆದ ಕೆಲ ವರ್ಷಗಳಿಂದ ಹಲವು ಸಿನಿಮಾ, ಸಂಗೀತ ನಿರ್ದೇಶಕ, ಗಾಯಕರುಗಳ ಮೇಲೆ ಕೃತಿಚೌರ್ಯದ ಪ್ರಕರಣ ದಾಖಲಿಸುತ್ತಾ ಬಂದಿದ್ದಾರೆ. ಅವರ ಆತ್ಮೀಯ ಗೆಳೆಯರು, ಚಿತ್ರರಂಗಕ್ಕೆ ಅವರನ್ನು ಪರಿಚಯಿಸಿದ್ದ ಗಾಯಕ ಎಸ್​ಬಿ ಬಾಲಸುಬ್ರಹ್ಮಣ್ಯಂ ವಿರುದ್ಧವೂ ಅವರು ದೂರು ದಾಖಲಿಸಿದ್ದರು. ಇದೀಗ ತಮಿಳಿನ ಸ್ಟಾರ್ ನಟ ಅಜಿತ್ ನಟನೆಯ ಹೊಸ ಸಿನಿಮಾ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ವಿರುದ್ಧ ದೂರು ದಾಖಲಿಸಿದ್ದು, ಐದು ಕೋಟಿ ರೂಪಾಯಿ ಪರಿಹಾರ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ.

ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಸಾಧಾರಣ ಯಶಸ್ಸು ಕಂಡಿದ್ದು ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಉತ್ತಮವಾಗಿದೆ. ಸಿನಿಮಾದಲ್ಲಿ ಕೆಲವು ಹಳೆಯ ಹಾಡುಗಳನ್ನು ನಿರ್ದೇಶಕರು ಬಳಸಿದ್ದಾರೆ. ಆದರೆ ಇದೇ ಅವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ ಇಳಯರಾಜ ಸಂಗೀತ ನೀಡಿರುವ ತಮಿಳು ಹಾಡುಗಳಾದ ‘ಒತ್ತ ರೂಪ ತಾರೆನ್’, ‘ಇಲಮೈ ಇದೋ ಇದೋ’, ‘ಎನ್ ಜೋಡಿ ಮಂಜ ಕುರುವಿ’ ಹಾಡುಗಳನ್ನು ಬಳಸಿಕೊಳ್ಳಲಾಗಿದೆ.

ಇದೀಗ ಸಂಗೀತ ನಿರ್ದೇಶಕ ಇಳಯರಾಜ ಅವರು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ತಂಡಕ್ಕೆ ನೊಟೀಸ್ ಕಳಿಸಿದ್ದು ತಮ್ಮ ಸಂಗೀತ ನಿರ್ದೇಶನದ ಹಾಡುಗಳನ್ನು ತಮ್ಮ ಒಪ್ಪಿಗೆ ಇಲ್ಲದೆ ಬಳಸಿದ್ದಕ್ಕೆ ಐದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅದು ಮಾತ್ರವೇ ಅಲ್ಲದೆ ಸಿನಿಮಾದಿಂದ ತಮ್ಮ ಸಂಗೀತ ನಿರ್ದೇಶನದ ಹಾಡುಗಳನ್ನು ತೆಗೆಯಬೇಕು ಹಾಗೂ ಚಿತ್ರತಂಡ ಬಹಿರಂಗ ಕ್ಷಮೆಯನ್ನೂ ಸಹ ಕೇಳಬೇಕು ಎಂದಿದ್ದಾರೆ. ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರತಂಡ ಇಳಯರಾಜ ಅವರ ಈ ನೊಟೀಸ್​ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:ನಿರ್ದೇಶಕಿಯಾದ ರಂಜನಿ ರಾಘವನ್; ಇಳಯರಾಜಗೂ ಇಷ್ಟವಾಗಿದೆ ಹೊಸ ಸಿನಿಮಾದ ಕಥೆ

ಇಳಯರಾಜ ಅವರು ಇತ್ತೀಚೆಗೆ ಹಲವು ಚಿತ್ರತಂಡಗಳಿಗೆ ಈ ರೀತಿಯ ನೊಟೀಸ್​ಗಳನ್ನು ನೀಡಿ ಹಣ ವಸೂಲಿ ಮಾಡಿದ್ದಾರೆ. ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ಜೊತೆಗೂ ಸಹ ಇಳಯರಾಜ ಅವರು ಕಾನೂನು ಹೋರಾಟ ಮಾಡಿದ್ದರು. ಆ ಸಿನಿಮಾದಲ್ಲಿ ಇಳಯರಾಜ ಅವರ ‘ಕಣ್ಮನಿ’ ಹಾಡನ್ನು ಬಳಸಲಾಗಿತ್ತು. ಇನ್ನೂ ಬಿಡುಗಡೆ ಆಗದ ರಜನೀಕಾಂತ್​ರ ‘ಕೂಲಿ’ ಸಿನಿಮಾಕ್ಕೂ ಇಳಯರಾಜ ನೊಟೀಸ್ ಕಳಿಸಿದ್ದಾರೆ. ‘ಕೂಲಿ’ ಸಿನಿಮಾದ ಟೀಸರ್​ನಲ್ಲಿ ಇಳಯರಾಜ ಅವರ ಸಂಗೀತ ಬಳಸಿಕೊಳ್ಳಲಾಗಿದೆ. ಇನ್ನೂ ಕೆಲ ಸಿನಿಮಾಗಳ ಮೇಲೆ ಇಳಯರಾಜ ದೂರುಗಳನ್ನು ದಾಖಲಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ