ಚಿತ್ರಮಂದಿರದಲ್ಲಿ ಅಜಿತ್ ಫ್ಯಾನ್ಸ್ ಜತೆ ವಿಜಯ್ ಫ್ಯಾನ್ಸ್ ಮಾರಾಮಾರಿ; ವಿಡಿಯೋ ವೈರಲ್
‘ಗುಡ್ ಬ್ಯಾಡ್ ಅಗ್ಲಿ’ ಪ್ರದರ್ಶನ ಆಗುವಾಗ ಅಜಿತ್ ಕುಮಾರ್ ಅಭಿಮಾನಿಗಳು ಹಾಗೂ ದಳಪತಿ ವಿಜಯ್ ಅಭಿಮಾನಿಗಳ ನಡುವೆ ಗಲಾಟೆ ಆಗಿದೆ. ಚಿತ್ರಮಂದಿರದ ಒಳಗೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪಲಕ್ಕಾಡ್ ‘ಸತ್ಯ’ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದ ವಿಡಿಯೋ ಕೂಡ ವೈರಲ್ ಆಗಿದೆ.

ಎಲ್ಲ ಭಾಷೆಯ ಚಿತ್ರರಂಗದಲ್ಲೂ ಫ್ಯಾನ್ಸ್ ವಾರ್ ಇದೆ. ಕಾಲಿವುಡ್ ನಟರಾದ ಅಜಿತ್ ಕುಮಾರ್ (Ajith Kumar) ಹಾಗೂ ದಳಪತಿ ವಿಜಯ್ ಅವರ ಅಭಿಮಾನಿಗಳ ನಡುವೆ ಕೂಡ ಆಗಾಗ ಕ್ಲ್ಯಾಶ್ ಆಗುತ್ತಿರುತ್ತದೆ. ಅದಕ್ಕೆ ಇಲ್ಲೊಂದು ಲೇಟೆಸ್ಟ್ ಉದಾಹರಣೆ ಇದೆ. ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಸಿನಿಮಾದ ಪ್ರದರ್ಶನದ ವೇಳೆ ದಳಪತಿ ವಿಜಯ್ (Thalapathy Vijay) ಹಾಗೂ ಅಜಿತ್ ಕುಮಾರ್ ಅಭಿಮಾನಿಗಳು ಬಡಿದಾಡಿಕೊಂಡಿದ್ದಾರೆ. ಕೇರಳದಲ್ಲಿ ಈ ಘಟನೆ ನಡೆದಿದೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳ ಈ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಏಪ್ರಿಲ್ 10ರಂದು ಬಿಡುಗಡೆ ಆಯಿತು. ಕೇರಳದ ಪಲಕ್ಕಾಡ್ನಲ್ಲಿರುವ ‘ಸತ್ಯ’ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಆಗ ಫ್ಯಾನ್ಸ್ ನಡುವೆ ಕಿರಿಕ್ ಶುರುವಾಯಿತು. ದಳಪತಿ ವಿಜಯ್ ಫ್ಯಾನ್ಸ್ ಹಾಗೂ ಅಜಿತ್ ಕುಮಾರ್ ಫ್ಯಾನ್ಸ್ ಪರಸ್ಪರ ಬೈಯ್ದುಕೊಂಡರು. ನಂತರ ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು.
ಪರಿಸ್ಥಿತಿ ಕೈ ಮೀರಿದಾಗ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಾಯಿತು. ಅಭಿಮಾನಿಗಳ ನಡುವೆ ಮಾರಾಮಾರಿ ನಡೆಯಿತು. ಈ ಗಲಾಟೆಯಲ್ಲಿ ಚಿತ್ರಮಂದಿರದ ಆಸನಗಳಿಗೆ ಹಾನಿ ಆಯಿತು. ಪರದೆ ಇರುವ ಸ್ಥಳದಲ್ಲೂ ಹಾನಿ ಆಗಿದೆ ಎಂದು ವರದಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಕಂಡು ಜನರು ಛೀಮಾರಿ ಹಾಕುತ್ತಿದ್ದಾರೆ.
I don’t know why these illiterate Vijay Fans are coming to Show off in a crowd packed with hardcore Ajith Fans.
Again balamana Adi from Thala Fans to a gang of vijay Fans those came to ruin the #GoodBadUgly celebration inside Theatre .
Exclusive video from Sathya Theatre… pic.twitter.com/4DtXe86X9t
— Unaɪse Reborn (@unnuviews) April 11, 2025
ಅಜಿತ್ ಕುಮಾರ್ ಅಭಿಮಾನಿಗಳೇ ತುಂಬಿರುವ ಚಿತ್ರಮಂದಿರಕ್ಕೆ ಬಂದು ವಿಜಯ್ ಫ್ಯಾನ್ಸ್ ಯಾಕೆ ಕಿರಿಕ್ ಮಾಡಬೇಕಿತ್ತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ಸ್ಟಾರ್ ನಟರ ಅಭಿಮಾನಿಗಳ ನಡುವೆ ಇರುವ ದ್ವೇಷ ತುಂಬಾ ಹಳೆಯದು. ಈ ರೀತಿ ಮಾಡಬೇಡಿ ಎಂದು ಈ ಮೊದಲೇ ಅಜಿತ್ ಕುಮಾರ್ ಅವರು ಬುದ್ಧಿ ಹೇಳಿದ್ದರು. ಆದರೂ ಕೂಡ ಫ್ಯಾನ್ಸ್ ವಾರ್ ನಿಂತಿಲ್ಲ.
ಇದನ್ನೂ ಓದಿ: ಅಪರೂಪಕ್ಕೆ ಕಾಣಿಸಿಕೊಂಡ ಅಜಿತ್ ಕುಮಾರ್ ಮಗಳು ಅನುಷ್ಕಾ; ವಿಡಿಯೋ ವೈರಲ್
‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೆ ಅಧಿಕ್ ರವಿಚಂದ್ರನ್ ಅವರು ನಿರ್ದೇಶನ ಮಾಡಿದ್ದಾರೆ. ತ್ರಿಶಾ ಕೃಷ್ಣನ್, ಪ್ರಿಯಾ ಪ್ರಕಾಶ್ ವಾರಿಯರ್, ಅರ್ಜುನ್ ದಾಸ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.