Atlee Kumar: ಗುಡ್ ನ್ಯೂಸ್ ಕೊಟ್ಟ ನಿರ್ದೇಶಕ ಅಟ್ಲಿ; ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ಪ್ರಿಯಾ
Atlee Kumar | Jawan Director: ಅಟ್ಲಿ ಕುಮಾರ್ ಮತ್ತು ಪ್ರಿಯಾ ಅವರು 2014ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದರು. ಈಗ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ.

ಕಾಲಿವುಡ್ನ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್ (Atlee Kumar) ಅವರು ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಅವರ ವೈಯಕ್ತಿಕ ಬದುಕಿನಲ್ಲೂ ಸಂತಸ ಮನೆ ಮಾಡಿದೆ. ಅಟ್ಲಿ ಕುಮಾರ್ ಅವರು ತಂದೆ ಆಗಿದ್ದಾರೆ! ಹೌದು, ಅಟ್ಲಿ ಪತ್ನಿ ಪ್ರಿಯಾ (Atlee Kumar wife Priya) ಅವರು ಗಂಡು ಮಗುವಿಗೆ ಇಂದು (ಜ.31) ಜನ್ಮ ನೀಡಿದ್ದಾರೆ. ಈ ಖುಷಿಯ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಮೊದಲ ಮಗುವನ್ನು ಪಡೆದಿರುವ ಈ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ (Kollywood) ಸಾಕಷ್ಟು ಖ್ಯಾತಿ ಗಳಿಸಿರುವ ಅಟ್ಲಿ ಕುಮಾರ್ ಅವರು ಈಗ ‘ಜವಾನ್’ ಸಿನಿಮಾ ಮೂಲಕ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮನೆಗೆ ಹೊಸ ಸದಸ್ಯನ ಆಗಮನ ಆಗಿರುವುದು ಸಖತ್ ಖುಷಿ ನೀಡಿದೆ. ಅವರ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ.
2014ರಲ್ಲಿ ಅಟ್ಲಿ ಕುಮಾರ್ ಅವರು ಪ್ರಿಯಾ ಜೊತೆ ದಾಂಪತ್ಯ ಜೀವನ ಆರಂಭಿಸಿದ್ದರು. ಈಗ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಈ ಸಂತಸದ ಸುದ್ದಿ ಹಂಚಿಕೊಳ್ಳಲು ಅಟ್ಲಿ ಟ್ವೀಟ್ ಮಾಡಿದ್ದಾರೆ. ‘ಅವರು ಹೇಳಿದ್ದು ನಿಜ. ಜಗತ್ತಿನಲ್ಲಿ ಈ ರೀತಿಯ ಫೀಲಿಂಗ್ ಬೇರೆ ಯಾವುದೂ ಇಲ್ಲ. ಗಂಡು ಮಗುವಿನ ಆಗಮನ ಆಗಿದೆ. ಇಂದಿನಿಂದ ಪಾಲಕರಾಗಿ ನಮ್ಮ ಹೊಸ ಸಾಹಸದ ಪಯಣ ಶುರುವಾಗಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಅಲ್ಲು ಅರ್ಜುನ್ ಹೊಸ ಚಿತ್ರಕ್ಕೆ ಅಟ್ಲಿ ನಿರ್ದೇಶನ; ಸಂಭಾವನೆ ಎಷ್ಟು ಅಂತ ಕೇಳಿದ್ರೆ ಅಚ್ಚರಿ ಆಗತ್ತೆ
ಅಟ್ಲಿ ಕುಮಾರ್ ಮತ್ತು ಪ್ರಿಯಾ ದಂಪತಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವುದಾಗಿ 2022ರ ಡಿಸೆಂಬರ್ನಲ್ಲಿ ಅನೌನ್ಸ್ ಮಾಡಿದ್ದರು. ಪ್ರೆಗ್ನೆನ್ಸಿ ಪೋಟೋಶೂಟ್ ಮೂಲಕ ಖುಷಿಯ ಸಮಾಚಾರ ಹಂಚಿಕೊಳ್ಳಲಾಗಿತ್ತು. ಈಗ ಪ್ರಿಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ಆಪ್ತರು ಪ್ರಾರ್ಥಿಸಿದ್ದಾರೆ. ಸಾವಿರಾರು ಕಮೆಂಟ್ಗಳ ಮೂಲಕ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ.
They were right ? There’s no feeling in the world like this ♥️ And just like tat our baby boy is here! A new exciting adventure of parenthood starts today!
Grateful. Happy. Blessed. ?♥️??@priyaatlee pic.twitter.com/jCEIHSxlKB
— atlee (@Atlee_dir) January 31, 2023
ತಮಿಳಿನಲ್ಲಿ ‘ರಾಜಾ ರಾಣಿ’, ‘ಥೇರಿ’, ‘ಮೆರ್ಸಲ್’, ‘ಬಿಗಿಲ್’ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಅಟ್ಲಿ ಅವರಿಗೆ ಸಲ್ಲುತ್ತದೆ. ಸ್ಟಾರ್ ನಟ ದಳಪತಿ ವಿಜಯ್ ಜೊತೆ ಅವರು ಆಪ್ತತೆ ಹೊಂದಿದ್ದಾರೆ. ಈಗ ಬಾಲಿವುಡ್ನಿಂದಲೂ ಅಟ್ಲಿ ಅವರಿಗೆ ಬೇಡಿಕೆ ಬಂದಿದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾಗೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಶಾರುಖ್ ಖಾನ್ ಅವರು ‘ಪಠಾಣ್’ ಸಿನಿಮಾ ಮೂಲಕ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಹಾಗಾಗಿ ಅವರ ಮುಂಬರುವ ಸಿನಿಮಾಗಳ ಮೇಲೆ ಹೈಪ್ ಹೆಚ್ಚಿದೆ. ಆದ್ದರಿಂದ ‘ಜವಾನ್’ ಸಿನಿಮಾವನ್ನು ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಕಟ್ಟಿಕೊಡುವ ಸವಾಲು ಅಟ್ಲಿ ಅವರ ಮುಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:35 pm, Tue, 31 January 23








