ಒಂದು ಸಿನಿಮಾ, ಹಲವು ಸ್ಟಾರ್ಗಳು, ‘ಖೈದಿ 2’ ವಿಶೇಷತೆಗಳೇನು?
Kaithi 2: ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ (ಎಲ್ಸಿಯು) ಪ್ರಾರಂಭವಾಗಿದ್ದು ‘ಖೈದಿ’ ಸಿನಿಮಾ ಮೂಲಕ ಕಾರ್ತಿ ನಾಯಕನಾಗಿ ನಟಿಸಿದ್ದ ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ‘ಖೈದಿ 2’ ಸಿನಿಮಾಕ್ಕೆ ಸಿದ್ಧತೆ ಆರಂಭವಾಗಿದ್ದು, ‘ಖೈದಿ 2’ ಸಿನಿಮಾನಲ್ಲಿ ಹಲವು ಸ್ಟಾರ್ ನಟ, ನಟಿಯರು ನಟಿಸಲಿದ್ದಾರೆ. ಇಲ್ಲಿದೆ ಪಟ್ಟಿ...

ನಟರಾಗಿ ಉತ್ತುಂಗದಲ್ಲಿದ್ದವು ವಿಲನ್ (Villain) ಪಾತ್ರಗಳನ್ನು ಮಾಡುವುದಿಲ್ಲ. ಅಸಲಿಗೆ ವಿಲನ್ ಆಗಿ ಹೆಸರು ಮಾಡಿದವರು ಸಹ ನಾಯಕ ನಟರಾಗಲು ಬಯಸುತ್ತಾರೆ. ವಿಲನ್ ಆಗಿ ಎಂಟ್ರಿ ಕೊಟ್ಟು ಆ ನಂತರ ನಾಯಕರಾದ ಹಲವಾರು ಮಂದಿ ನಟರು ಈಗಲೂ ಸಕ್ರಿಯವಾಗಿದ್ದಾರೆ. ರಜನೀಕಾಂತ್, ಚಿರಂಜೀವಿ, ಗೋಪಿಚಂದ್, ವಿಜಯ್ ಸೇತುಪತಿ ಇನ್ನೂ ಹಲವರಿದ್ದಾರೆ. ಆದರೆ ಸ್ಟಾರ್ ನಟನಾಗಿರುವಾಗಲೇ ಔಟ್ ಆಂಡ್ ವಿಲನ್ ಪಾತ್ರ ಮಾಡುವ ಧೈರ್ಯ ತೋರಿರುವ ನಟ ಎಂದರೆ ಅದು ತಮಿಳಿನ ಸ್ಟಾರ್ ನಟ ಸೂರ್ಯ.
‘ವಿಕ್ರಂ’ ಸಿನಿಮಾನಲ್ಲಿ ರೋಲೆಕ್ಸ್ ಹೆಸರಿನ ಅತಿಥಿ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದರು. ರೂತ್ಲೆಸ್ ವಿಲನ್ ಪಾತ್ರವದು. ಡ್ರಗ್ಸ್ ಸಾಮ್ರಾಜ್ಯದ ದೊರೆ, ತನ್ನನ್ನು ಪ್ರಶ್ನಿಸುವವನನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವ ವಿಲನ್ ಪಾತ್ರವದು. ಆದರೆ ‘ವಿಕ್ರಂ’ ಸಿನಿಮಾನಲ್ಲಿ ಕೇವಲ ಅತಿಥಿ ಪಾತ್ರ ಮಾತ್ರವೇ ಆಗಿತ್ತು ರೋಲೆಕ್ಸ್. ಆದರೆ ಈಗ ರೋಲೆಕ್ಸ್ ಮೂಲಕ ಸೂರ್ಯ ಪೂರ್ಣ ಪ್ರಮಾಣದ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ, ಅದೂ ತಮ್ಮ ಸ್ವಂತ ಸಹೋದರ ಕಾರ್ತಿಯ ಎದುರು.
ಕಾರ್ತಿ ನಟಿಸಿದ್ದ ‘ಖೈದಿ’ ಸಿನಿಮಾ ಮೂಲಕ ಲೋಕೇಶ್ ಯೂನಿವರ್ಸ್ ಆರಂಭವಾಯ್ತು. ಆ ಸಿನಿಮಾದ ಕತೆಯಿಂದಲೇ ‘ವಿಕ್ರಂ’ ಹುಟ್ಟಿತು ಆ ಬಳಿಕ ‘ಲಿಯೋ’ ಸಿನಿಮಾಕ್ಕೂ ‘ವಿಕ್ರಂ’ಗೂ ಲಿಂಕ್ ಕೊಡಲಾಯ್ತು. ಇದೀಗ ಲೋಕೇಶ್ ಕನಗರಾಜ್ ‘ಖೈದಿ 2’ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾಕ್ಕೆ ಹಲವು ಸ್ಟಾರ್ ನಟರನ್ನು ಅವರು ಒಟ್ಟು ಗೂಡಿಸಲಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಬಳಿಕ ತಮಿಳು ಸಿನಿಮಾರಂಗದ ಬಗ್ಗೆ ಅನುರಾಗ್ ಟೀಕೆ
ಅಸಲಿಗೆ ‘ವಿಕ್ರಂ’ ಸಿನಿಮಾದ ಕೊನೆಯಲ್ಲಿಯೇ ‘ಖೈದಿ 2’ ಸಿನಿಮಾದ ಸುಳಿವನ್ನು ಲೋಕೇಶ್ ನೀಡಿದ್ದರು. ಮೂಲಗಳ ಪ್ರಕಾರ ‘ಖೈದಿ 2’ ಚಿತ್ರಕತೆ ಪೂರ್ಣವಾಗಿದ್ದು, ಸಿನಿಮಾನಲ್ಲಿ ಕಾರ್ತಿ, ಸೂರ್ಯ ಜೊತೆಗೆ ತೆಲುಗಿನ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹ ಇರಲಿದ್ದಾರಂತೆ. ಇವರದ್ದು ಕಾರ್ತಿಯ ಪತ್ನಿಯ ಪಾತ್ರ ಎನ್ನಲಾಗುತ್ತಿದೆ. ಇವರುಗಳ ಜೊತೆಗೆ ಕಮಲ್ ಹಾಸನ್ ಅವರ ಅತಿಥಿ ಪಾತ್ರವೂ ಇರಲಿದೆಯಂತೆ.
ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ‘ಕೂಲಿ’ ಸಿನಿಮಾ ಲೋಕೇಶ್ ಯೂನಿವರ್ಸ್ನ ಹೊರಗಿನ ಸ್ಟಾಂಡ್ ಅಲೋನ್ ಸಿನಿಮಾ ಆಗಿದೆ. ಈ ಸಿನಿಮಾನಲ್ಲಿ ರಜನೀಕಾಂತ್, ಉಪೇಂದ್ರ, ಆಮಿರ್ ಖಾನ್ ಮತ್ತು ನಾಗಾರ್ಜುನ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆ ಬಳಿಕ ‘ಖೈದಿ 2’ ಸಿನಿಮಾದ ಪ್ರೀ ಪ್ರೊಡಕ್ಷನ್ ಆರಂಭ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




