ಶೂಟಿಂಗ್ ವೇಳೆ ಗಾಯಗೊಂಡ ಬೆನ್ನಲ್ಲೇ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟ ನಟ ಸೂರ್ಯ
ಸಿನಿಮಾದ ಶೂಟಿಂಗ್ ವೇಳೆ ಅವರ ಭುಜದ ಮೇಲೆ ಕ್ಯಾಮೆರಾ ಬಿದ್ದಿದೆ. ಈ ಕಾರಣದಿಂದ ಅವರಿಗೆ ಸಣ್ಣ ಗಾಯಗಳಾಗಿತ್ತು. ಆ ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

‘ಕಂಗುವ’ ಸಿನಿಮಾ (Kanguva Movie) ಶೂಟಿಂಗ್ ವೇಳೆ ನಟ ಸೂರ್ಯ ಅವರಿಗೆ ಗಾಯಗಳಾಗಿವೆ. ಈ ಕಾರಣದಿಂದ ಶೂಟಿಂಗ್ನ ಅರ್ಧಕ್ಕೆ ನಿಲ್ಲಿಸಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೂರ್ಯ ಅವರ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದರು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಅವರು ಸ್ವಲ್ಪ ಚೇತರಿಕೆ ಕಂಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಚಾರ ತಿಳಿದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಘಟನೆ ಏನು?
‘ಕಂಗುವ’ ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ. ಸೂರ್ಯ ಅವರು ಹಲವು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ 38 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಇತ್ತೀಚೆಗೆ ಹರಿದಾಡಿದೆ. ಈ ಸಿನಿಮಾದ ಶೂಟಿಂಗ್ ವೇಳೆ ಅವರ ಭುಜದ ಮೇಲೆ ಕ್ಯಾಮೆರಾ ಬಿದ್ದಿದೆ. ಈ ಕಾರಣದಿಂದ ಅವರಿಗೆ ಸಣ್ಣ ಗಾಯಗಳಾಗಿತ್ತು. ಆ ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
‘ಆತ್ಮೀಯ ಸ್ನೇಹಿತರೇ, ಹಿತೈಷಿಗಳೇ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳೇ. ಬೇಗ ಗುಣಮುಖರಾಗಿ ಎಂಬ ನಿಮ್ಮ ಸಂದೇಶಗಳಿಗೆ ಧನ್ಯವಾದ. ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಸದಾ ಕೃತಜ್ಞ’ ಎಂದು ಸೂರ್ಯ ಅವರು ಬರೆದುಕೊಂಡಿದ್ದಾರೆ. ಸೂರ್ಯ ಅವರ ಪೋಸ್ಟ್ ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
Dear Friends, well wishers & my #AnbaanaFans Heartfelt thanks for the outpouring ‘get well soon’ msgs.. feeling much better.. always grateful for all your love 🙂
— Suriya Sivakumar (@Suriya_offl) November 23, 2023
ಇದನ್ನೂ ಓದಿ: ಸಿನಿಮಾ ಸೆಟ್ನಲ್ಲಿ ಸೂರ್ಯಗೆ ಗಾಯ, ಚಿತ್ರೀಕರಣ ಮುಂದೂಡಿಕೆ
‘ಸ್ಟುಡಿಯೋ ಗ್ರೀನ್ ಹಾಗೂ ಯುವಿ ಕ್ರಿಯೇಷನ್ಸ್ ‘ಕಂಗುವ’ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ದಿಶಾ ಪಟಾಣಿ ಈ ಚಿತ್ರದಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದಾರೆ. 2024ರ ಆರಂಭದಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಈ ಮೊದಲು ಟೈಟಲ್ ರಿವೀಲ್ ಮಾಡಲು ವಿಡಿಯೋ ಒಂದನ್ನು ಬಿಡಲಾಗಿತ್ತು. ಬಿಜಿಎಂ ಹಾಗೂ ದೃಶ್ಯಗಳ ಗುಣಮಟ್ಟ ಎಲ್ಲರ ಗಮನ ಸೆಳೆದಿತ್ತು .
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:12 am, Fri, 24 November 23




