‘ಕಣ್ಣಪ್ಪ’ ಚಿತ್ರದ ಅವಧಿ ಇಷ್ಟೊಂದು ದೀರ್ಘವೇ? ಯಾರ ಪಾತ್ರ ಎಷ್ಟೊತ್ತಿದೆ?
ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾ ಜೂನ್ 27 ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್, ಮೋಹನ್ ಬಾಬು, ಮೋಹನ್ ಲಾಲ್, ಮತ್ತು ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಹುಭಾಷಾ ಚಿತ್ರವಾದ ಇದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹೊಸ ಹಾಡು ಕಾಳ ಹಸ್ತಿಯಲ್ಲಿ ಮೇ 28 ರಂದು ಬಿಡುಗಡೆಯಾಗಲಿದೆ.

ವಿಷ್ಣು ಮಂಚು (Vishnu Manchu) ನಟನೆಯ ‘ಕಣ್ಣಪ್ಪ’ ಸಿನಿಮಾ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಜೂನ್ 27ರಂದು ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ವಿಷ್ಣುಮಂಚು ಜೊತೆ ಪ್ರಭಾಸ್, ಮೋಹನ್ ಬಾಬು, ಮೋಹನ್ಲಾಲ್, ಕಾಜಲ್ ಅಗರ್ವಾಲ್ ಕೂಡ ಇದ್ದಾರೆ. ಈ ಸಿನಿಮಾ ಭಾರತದ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಹೀಗಿರುವಾಗಲೇ ‘ಕಣ್ಣಪ್ಪ’ ಸಿನಿಮಾದ ಅವಧಿ ರಿವೀಲ್ ಆಗಿದೆ. ಈ ಚಿತ್ರ 3 ಗಂಟೆ 10 ನಿಮಿಷ ಇದೆ.
ಪ್ರಭಾಸ್ ಅವರು ರುದ್ರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಗಂಟೆಗೂ ಅಧಿಕ ಅವಧಿಯ ಈ ಚಿತ್ರದಲ್ಲಿ ಪ್ರಭಾಸ್ ಅವರು 30 ನಿಮಿಷ ಇರಲಿದ್ದಾರೆ. ವಿಷ್ಣು ಹಾಗೂ ಮೋಹಬ್ ಬಾಬು ಜೊತೆ ಇವರು ಹೆಚ್ಚು ಹೊತ್ತು ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಮೋಹನ್ಲಾಲ್ ಅವರ ಪಾತ್ರ ಕೇವಲ 15 ನಿಮಿಷ ಇರಲಿದೆ. ಅವರು ಈ ಚಿತ್ರಕ್ಕೆ ಪ್ರಮುಖ ತಿರುವು ನೀಡಲಿದ್ದಾರೆ. ಈ ಎರಡೂ ಅತಿಥಿ ಪಾತ್ರಗಳಿಂದ ಹೆಚ್ಚಿನದ್ದನ್ನು ನಿರೀಕ್ಷಿಸಬಹುದು. ಇವರಲ್ಲದೆ, ಅಕ್ಷಯ್ ಕುಮಾರ್ ಅವರು ಶಿವನ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ಅವರು ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಕಣ್ಣಪ್ಪ’ ಸಿನಿಮಾದ ಮುಂದಿನ ಹಾಡು ಕಾಳ ಹಸ್ತಿಯಲ್ಲಿ ಮೇ 28ರಂದು ರಿಲೀಸ್ ಆಗಲಿದೆ. ವಿಷ್ಣು ಮಂಚು ಅವರ ಮಗಳು ಅರಿಯಾನಾ ಹಾಗೂ ವಿವಿಯಾನಾ ಈ ಹಾಡನ್ನು ಹಾಡಿದ್ದಾರೆ. ಸ್ಪೀಫನ್ ದೇವಸಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಹಾಡು ಜನರಿಗೆ ಇಷ್ಟ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ‘ಕಣ್ಣಪ್ಪ’ ಸಿನಿಮಾಗೆ ಯೋಗಿ ಆದಿತ್ಯನಾಥ್ ಬೆಂಬಲ; ಜೂನ್ 27ರಂದು ವಿಶ್ವಾದ್ಯಂತ ಬಿಡುಗಡೆ
ಮುಕೇಶ್ ಕುಮಾರ್ ಸಿಂಗ್ ಅವರು ‘ಕಣ್ಣಪ್ಪ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕಣ್ಣಪ್ಪನ ಪಾತ್ರದಲ್ಲಿ ವಿಷ್ಣು ಮಂಚು ಅವರು ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ಮಹದೇವ ಶಾಸ್ತ್ರಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ವರ್ಷ ಚಿತ್ರರಂಗದಲ್ಲಿ ಇನ್ನೂ ಯಾವುದೇ ಬಿಗ್ ಹಿಟ್ ಬಂದಿಲ್ಲ. ‘ಕಣ್ಣಪ್ಪ’ ಚಿತ್ರದಿಂದ ಎಲ್ಲರೂ ಹೆಚ್ಚಿನದ್ದನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಈ ಚಿತ್ರದ ಬಜೆಟ್ 150-200 ಕೋಟಿ ರೂಪಾಯಿಗೂ ಅಧಿಕವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.