ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್​; ಮದುವೆ ಫೋಟೋ ಹಂಚಿಕೊಂಡ ಮಹಾನಟಿ

ನಟಿ ಕೀರ್ತಿ ಸುರೇಶ್ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಂದು (ಡಿ.12) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಪ್ತರು ಸಾಕ್ಷಿ ಆಗಿದ್ದಾರೆ. ಮದುವೆಯ ಫೋಟೋಗಳನ್ನು ಕೀರ್ತಿ ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವುಗಳಿಗೆ ಫ್ಯಾನ್ಸ್ ಕಮೆಂಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್​; ಮದುವೆ ಫೋಟೋ ಹಂಚಿಕೊಂಡ ಮಹಾನಟಿ
ಕೀರ್ತಿ ಸುರೇಶ್ ಮತ್ತು ಆಂಟೊನಿ ಮದುವೆ
Follow us
ಮದನ್​ ಕುಮಾರ್​
|

Updated on:Dec 12, 2024 | 3:04 PM

ಖ್ಯಾತ ನಟಿ ಕೀರ್ತಿ ಸುರೇಶ್​ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲ್ಯದ ಗೆಳೆಯ ಆಂಟೊನಿ ತಟ್ಟಿಲ್ ಜೊತೆ ಅವರು ಹಸೆಮಣೆ ಏರಿದ್ದಾರೆ. ದಕ್ಷಿಣ ಭಾರತದ ಸಂಪ್ರದಾಯದ ರೀತಿ ಕೀರ್ತಿ ಸುರೇಶ್ ಅವರ ಮದುವೆ ನಡೆದಿದೆ. ಇಂದು (ಡಿಸೆಂಬರ್​ 12) ಗೋವಾದಲ್ಲಿ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಕೀರ್ತಿ ಸುರೇಶ್ ಮತ್ತು ಆಂಟೊನಿ ಅವರು ಮದುವೆ ಆಗಿದ್ದಾರೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ‘ಮಹಾನಟಿ’ ಕೀರ್ತಿ ಸುರೇಶ್​ಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಕೀರ್ತಿ ಸುರೇಶ್ ಅವರ ಕೈ ಹಿಡಿದಿರುವ ಆಂಟೊನಿ ತಟ್ಟಿಲ್ ಅವರು ಉದ್ಯಮಿಯಾಗಿದ್ದಾರೆ. ದುಬೈನಲ್ಲಿ ನೆಲೆಸಿರುವ ಅವರು ಹಲವು ಕಡೆಗಳಲ್ಲಿ ಬಿಸ್ನೆಸ್​ ಹೊಂದಿದ್ದಾರೆ. ಅನೇಕ ಉದ್ಯಮಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಹೋಟೆಲ್, ರೆಸಾರ್ಟ್​ಗಳನ್ನು ಆಂಟೊನಿ ತಟ್ಟಿಲ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಕೀರ್ತಿ ಸುರೇಶ್ ಮತ್ತು ಆಂಟೊನಿ ತಟ್ಟಿಲ್ ಅವರು ಬಾಲ್ಯದ ಸ್ನೇಹಿತರು ಎಂಬುದು ವಿಶೇಷ.

ವರದಿಗಳ ಪ್ರಕಾರ, 12ನೇ ತರಗತಿ ಓದುತ್ತಿರುವಾಗ ಕೀರ್ತಿ ಸುರೇಶ್ ಮತ್ತು ಆಂಟೊನಿ ನಡುವೆ ಪ್ರೀತಿ ಸಿಗುರಿತು. 15 ವರ್ಷ ಪ್ರೀತಿಸಿದ ಅವರು ಈ ಸತಿ-ಪತಿ ಆಗಿದ್ದಾರೆ. ಇಷ್ಟು ವರ್ಷಗಳ ಕಾಲ ಕೀರ್ತಿ ಸುರೇಶ್ ಅವರು ತಮ್ಮ ಪ್ರೀತಿಯ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿದ್ದರು. ಕೆಲವೇ ದಿನಗಳ ಹಿಂದೆ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಈಗ ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಇದನ್ನೂ ಓದಿ: ಕೀರ್ತಿ ಸುರೇಶ್ ಧರಿಸಿರುವ ಈ ಉಡುಗೆಯ ಬೆಲೆ ಒಂದು ಕಾರು ಖರೀದಿಸಬಹುದು

ಕೀರ್ತಿ ಸುರೇಶ್ ಅವರಿಗೆ ಈಗ 32 ವರ್ಷ ವಯಸ್ಸು. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಕೀರ್ತಿ ಸುರೇಶ್ ಅಭಿನಯಿಸಿದ ‘ಮಹಾನಟಿ’ ಸಿನಿಮಾ ಬ್ಲಾಕ್ ಬಸ್ಟರ್​ ಹಿಟ್ ಆಯಿತು. ನಟಿ ಸಾವಿತ್ರ ಅವರ ಬಯೋಪಿಕ್ ಆಗಿ ಮೂಡಿಬಂದ ಈ ಚಿತ್ರದ ಅಭಿನಯಕ್ಕಾಗಿ ಕೀರ್ತಿ ಸುರೇಶ್​ 2019ರಲ್ಲಿ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದರು. ಚಿತ್ರರಂಗದಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಸ್ಟಾರ್​ ನಟರ ಜೊತೆ ಅಭಿನಯಿಸಿ ಕೀರ್ತಿ ಸುರೇಶ್ ಹೆಸರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:46 pm, Thu, 12 December 24

ಅಪಘಾತದ ಬಳಿಕ ಬ್ಯಾಗ್​ ಎತ್ತಿಕೊಂಡು ಕಿಟಕಿಯಿಂದ ಓಡಿ ಹೋದ ಡ್ರೈವರ್
ಅಪಘಾತದ ಬಳಿಕ ಬ್ಯಾಗ್​ ಎತ್ತಿಕೊಂಡು ಕಿಟಕಿಯಿಂದ ಓಡಿ ಹೋದ ಡ್ರೈವರ್
ನಾವು ತಯಾರಿಸಿದ ಮಂತ್ರಿಗಳ ಲಿಸ್ಟ್​ನಿಂದ ನಮ್ಮ ಹೆಸರೇ ಗಾಯಬ್!: ಶಿವಕುಮಾರ್
ನಾವು ತಯಾರಿಸಿದ ಮಂತ್ರಿಗಳ ಲಿಸ್ಟ್​ನಿಂದ ನಮ್ಮ ಹೆಸರೇ ಗಾಯಬ್!: ಶಿವಕುಮಾರ್
ಶಾಂತಿಯುತ ಪ್ರತಿಭಟನೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆ
ಶಾಂತಿಯುತ ಪ್ರತಿಭಟನೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆ
ಗದಗದಲ್ಲಿ ಪಂಚಮಸಾಲಿ ಹೋರಾಟ: ಟಯರ್​ಗೆ ಬೆಂಕಿ ಹಚ್ಚುವ ವೇಳೆ ಕಾಲಿಗೆ ಬೆಂಕಿ
ಗದಗದಲ್ಲಿ ಪಂಚಮಸಾಲಿ ಹೋರಾಟ: ಟಯರ್​ಗೆ ಬೆಂಕಿ ಹಚ್ಚುವ ವೇಳೆ ಕಾಲಿಗೆ ಬೆಂಕಿ
ಲಾಠಿಚಾರ್ಜ್ ಮತ್ತು ಮೀಸಲಾತಿ ಪ್ರತಿಭಟನೆ ನಡುವೆ ಸಂಬಂಧ ಇಲ್ಲ: ಪರಮೇಶ್ವರ್
ಲಾಠಿಚಾರ್ಜ್ ಮತ್ತು ಮೀಸಲಾತಿ ಪ್ರತಿಭಟನೆ ನಡುವೆ ಸಂಬಂಧ ಇಲ್ಲ: ಪರಮೇಶ್ವರ್
ಬೆಳಗಾವಿ ಅಧಿವೇಶನ ನೇರ ಪ್ರಸಾರ ಇಲ್ಲಿ ನೋಡಿ
ಬೆಳಗಾವಿ ಅಧಿವೇಶನ ನೇರ ಪ್ರಸಾರ ಇಲ್ಲಿ ನೋಡಿ
ಆಟೋ ಚಾಲಕನ ನಿಯಂತ್ರಣ ತಪ್ಪಿ ಅಬ್ದುಲ್ ಕಲಾಂ ಸ್ಮಾರಕಕ್ಕೆ ಢಿಕ್ಕಿ
ಆಟೋ ಚಾಲಕನ ನಿಯಂತ್ರಣ ತಪ್ಪಿ ಅಬ್ದುಲ್ ಕಲಾಂ ಸ್ಮಾರಕಕ್ಕೆ ಢಿಕ್ಕಿ
ನಮ್ಮ ಸರ್ಕಾರ ಲಿಂಗಾಯತರ ಬೇಡಿಕೆಯನ್ನು ಈಡೇರಿಸಿತ್ತು: ಅಶೋಕ
ನಮ್ಮ ಸರ್ಕಾರ ಲಿಂಗಾಯತರ ಬೇಡಿಕೆಯನ್ನು ಈಡೇರಿಸಿತ್ತು: ಅಶೋಕ
ಕಾಣದ ಕೈಗಳಿಂದ ಹಿಂಸೆಗೆ ಪ್ರಚೋದನೆ ಸಿಕ್ಕಿದೆ: ಸ್ವಾಮೀಜಿ
ಕಾಣದ ಕೈಗಳಿಂದ ಹಿಂಸೆಗೆ ಪ್ರಚೋದನೆ ಸಿಕ್ಕಿದೆ: ಸ್ವಾಮೀಜಿ
‘ಆಟಕ್ಕೆ ಅವಕಾಶ ಕೊಡಲ್ಲ’; ಗೌತಮಿ ತಂಡ ಸೇರಿ ಗಳಗಳನೆ ಅತ್ತ ಚೈತ್ರಾ ಕುಂದಾಪುರ
‘ಆಟಕ್ಕೆ ಅವಕಾಶ ಕೊಡಲ್ಲ’; ಗೌತಮಿ ತಂಡ ಸೇರಿ ಗಳಗಳನೆ ಅತ್ತ ಚೈತ್ರಾ ಕುಂದಾಪುರ