AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಫ್ಟ್ ಕೊಡಲ್ಲ ಎಂದು ಅವಮಾನ ಮಾಡಿದ್ದ ಸ್ಟುಡಿಯೋಗೆ ಐಷಾರಾಮಿ ಕಾರಲ್ಲಿ ಬಂದಿದ್ದ ರಜನಿಕಾಂತ್

Rajinikanth: ರಜನಿಕಾಂತ್ ಅವರ ಜೀವನ ಕೇವಲ ಚಲನಚಿತ್ರ ನಟನ ಕಥೆಯಲ್ಲ, ಅದು ಒಂದು ಸಾಧನೆಯ ಕಥೆ. ಕಂಡಕ್ಟರ್ ಆಗಿ ವೃತ್ತಿ ಪ್ರಾರಂಭಿಸಿ, ಅವಮಾನ, ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಅವರು ಸೂಪರ್ ಸ್ಟಾರ್ ಆದರು. 'ದರ್ಬಾರ್' ಚಿತ್ರದ ರಿಲೀಸ್ ಸಂದರ್ಭದಲ್ಲಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ರಜನಿಕಾಂತ್, ಆರಂಭದ ದಿನಗಳಲ್ಲಿ ಎದುರಿಸಿದ ಅವಮಾನಗಳನ್ನು ಹಂಚಿಕೊಂಡಿದ್ದಾರೆ.

ಲಿಫ್ಟ್ ಕೊಡಲ್ಲ ಎಂದು ಅವಮಾನ ಮಾಡಿದ್ದ ಸ್ಟುಡಿಯೋಗೆ ಐಷಾರಾಮಿ ಕಾರಲ್ಲಿ ಬಂದಿದ್ದ ರಜನಿಕಾಂತ್
ರಜನೀಕಾಂತ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 12, 2024 | 12:43 PM

Share

ರಜನಿಕಾಂತ್ ಎಂಬುದು ಕೇವಲ ಹೆಸರಲ್ಲ. ಅದೊಂದು ಬ್ರ್ಯಾಂಡ್. ಕಾಲಿವುಡ್ನಲ್ಲಿ ರಜನಿ ಎರಾ ಸಾಗುತ್ತಿದೆ. ಅವರು ಈಗಲೂ ಬೇಡಿಕೆಯ ಹೀರೋ. ಅವರಿಗೆ ಈಗ 74 ವರ್ಷ. ಇಂದು (ಡಿಸೆಂಬರ್ 12) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ಗಳು ಬರುತ್ತಿವೆ. ಅವರು ಮಾಡಿದ ಸಾಧನೆ ಅನೇಕರಿಗೆ ಮಾದರಿ. ಆರಂಭದಲ್ಲಿ ಕಂಡಕ್ಟರ್ ಆಗಿದ್ದ ಅವರು ನಂತರ ಹೀರೋ ಆದರು. ಕರ್ನಾಟಕದಿಂದ ತಮಿಳುನಾಡಿಗೆ ತೆರಳಿ ಹೆಸರು ಮಾಡಿದರು. ಅವರಿಗೆ ನಿರ್ಮಾಪಕರಿಂದ ಅವಮಾನ ಆಗಿತ್ತು. ಅವರ ಎದುರೇ ದುಬಾರಿ ಕಾರಲ್ಲಿ ಬಂದರು.

2020ರಲ್ಲಿ ‘ದರ್ಬಾರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ರಜನಿಕಾಂತ್ ಮಾತನಾಡಿದ್ದರು. ತಮ್ಮ ಹಳೆಯ ದಿನಗಳನ್ನು ಅವರು ನೆನಪಿಸಿಕೊಂಡಿದ್ದರು. ತಮಿಳು ಚಿತ್ರರಂಗದಲ್ಲಿ ರಜನಿ ಆಗತಾನೇ ಹೆಸರು ಮಾಡುತ್ತಿದ್ದರು. ಆಗ ಅವರಿಗೆ ನಿರ್ಮಾಪಕರಿಂದ ಅವಮಾನ ಆಗಿತ್ತು. ಕಾರಿನಲ್ಲಿ ಲಿಫ್ಟ್ ಕೇಳಿದ್ದಕ್ಕೆ ಕೊಡಲು ಆ ನಿರ್ಮಾಪಕರು ನಿರಾಕಾರಿಸಿದ್ದರು. ನಂತರದ ವರ್ಷಗಳಲ್ಲಿ ಆಗಿದ್ದು ಜಾದೂ.

‘ನನಗೆ ಸಿನಿಮಾ ಆಫರ್ ಬಂತು. ಅದು ನಿಜಕ್ಕೂ ಉತ್ತಮ ಪಾತ್ರವಾಗಿತ್ತು. ನನ್ನ ಬಳಿ ಡೇಟ್ಸ್ ಕೂಡ ಇತ್ತು. ನಾನು ಒಪ್ಪಿಕೊಂಡೆ. ಆರಂಭದಲ್ಲಿ ಸಂಭಾವನೆ ಚರ್ಚಿಸಿದೆವು. ನಾನು 10 ಸಾವಿರ ರೂಪಾಯಿ ಕೇಳಿದೆ. ಆದರೆ, ಅವರು 6 ಸಾವಿರ ರೂಪಾಯಿ ಕೊಡಲು ಒಪ್ಪಿದರು. ನಾನು 100 ರೂಪಾಯಿ ಟೋಕನ್ ಅಡ್ವಾನ್ಸ್ ಕೇಳಿದ್ದೆ. ಆದರೆ, ಹಣ ಇಲ್ಲ ಎಂದು ಅಂದು ಅಡ್ವಾನ್ಸ್ ಕೊಡಲಿಲ್ಲ ಎಂದಿದ್ದಾರೆ’ ಎಂದಿದ್ದಾರೆ ರಜನಿ.

ಇದನ್ನೂ ಓದಿ:ಪ್ರಭಾಸ್, ರಜನೀಕಾಂತ್, ಶಾರುಖ್ ಖಾನ್ ಅನ್ನೂ ಹಿಂದಿಕ್ಕಿದ ಅಲ್ಲು ಅರ್ಜುನ್

ಮರುದಿನ ರಜನಿ ಎವಿಎಂ ಸ್ಟುಡಿಯೋಗೆ ಶೂಟ್ಗೆ ಹೋದರು. ಆದರೆ, ಅಡ್ವಾನ್ಸ್ ಹಣ ಸಿಗಲಿಲ್ಲ. ನಂತರ ಹೀರೋ ಬಂದರು ರೆಡಿ ಆಗು ಎಂದು ಸೆಟ್ನಲ್ಲಿದ್ದವರು ಹೇಳಿದರು. ಆದರೆ, ಇದಕ್ಕೆ ಅವರು ರೆಡಿ ಇರಲಿಲ್ಲ. ಇದರಿಂದ ಕೋಪಗೊಂಡ ನಿರ್ಮಾಪಕರು, ‘ನೀನೇನು ದೊಡ್ಡ ಸ್ಟಾರಾ? ಮಾಡಿರೋದು ಒಂದೆರಡು ಸಿನಿಮಾ. ಅಡ್ವಾನ್ಸ್ ಹಣ ಇಲ್ಲದೆ ಶೂಟ್ ಮಾಡಲ್ವ? ನಿಂಗೆ ಯಾವುದೇ ಪಾತ್ರ ಇಲ್ಲ ಹೋಗು’ ಎಂದು ಹೇಳಿದ್ದರು. ಹಣ ಇಲ್ಲದ ಕಾರಣಕ್ಕೆ ರಜನಿ ಮನೆಗೆ ನಡೆದೇ ಹೋದರು.

ಆ ವೇಳೆ ರಜನಿಕಾಂತ್ ನಟನೆಯ ‘16 ವಯದಿನಿಲೆ’ ಸಿನಿಮಾ ಒಂದು ಹಿಟ್ ಆಯಿತು. ಅವರದ್ದೇ ಡೈಲಾಗ್ನ ಜನರು ರಿಪೀಸ್ ಮಾಡಲು ಪ್ರಾರಂಭಿಸಿದರು. ಆಗ ಅವರು ವಿದೇಶಿ ಕಾರಲ್ಲಿ ಶೂಟಿಂಗ್ ಸೆಟ್ಗೆ ಹೋಗುವ ನಿರ್ಧಾರ ಮಾಡಿದರು. ನಂತರ ಕೆಲವೇ ವರ್ಷಗಳಲ್ಲಿ ಕಾಲಿವುಡ್ನಲ್ಲಿ ಅವರು ದೊಡ್ಡ ಹೀರೋ ಆದರು. ಈ ಘಟನೆ ನಡೆದು ಎರಡೂವರೆ ವರ್ಷ ಬಿಟ್ಟು ಅವರು ದುಬಾರಿ ಕಾರಲ್ಲಿ ಎವಿಎಂ ಸ್ಟುಡಿಯೋಗೆ ಬಂದರು. ಇದು ರಜನಿಕಾಂತ್ ಮಾಡಿದ ಸಾಧನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ