AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಫಿ ವಿತ್ ಕರಣ್’ ಕೊನೆಯ ಸೀಸನ್ ಪ್ರಸಾರ ಎಲ್ಲಿ, ಯಾವಾಗ?; ಇಲ್ಲಿದೆ ವಿವರ

ಕರಣ್ ಜೋಹರ್ ಅವರ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' ಸೀಸನ್ 9 ಅಧಿಕೃತವಾಗಿ ಪ್ರಾರಂಭವಾಗುತ್ತಿದೆ. ಇದು ಈ ಜನಪ್ರಿಯ ಕಾರ್ಯಕ್ರಮದ ಕೊನೆಯ ಸೀಸನ್ ಆಗಿದ್ದು, ಮೊದಲ ಸಂಚಿಕೆಯಲ್ಲಿ ಮೆಗಾಸ್ಟಾರ್ ಸಲ್ಮಾನ್ ಖಾನ್ ಅತಿಥಿಯಾಗಿ ಭೇಟಿ ನೀಡುತ್ತಿದ್ದಾರೆ. ಈ ಸಂಚಿಕೆ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.

‘ಕಾಫಿ ವಿತ್ ಕರಣ್’ ಕೊನೆಯ ಸೀಸನ್ ಪ್ರಸಾರ ಎಲ್ಲಿ, ಯಾವಾಗ?; ಇಲ್ಲಿದೆ ವಿವರ
ಕರಣ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 14, 2026 | 8:03 AM

Share

ಕರಣ್ ಜೋಹರ್ ಅವರ ಜನಪ್ರಿಯ ಟಾಕ್ ಶೋ ‘ಕಾಫಿ ವಿತ್ ಕರಣ್’ ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಇದು ಈ ಶೋನ ಕೊನೆಯ ಸೀಸನ್ ಎಂದು ಘೋಷಿಸಲಾಗಿದೆ. ಪ್ರೇಕ್ಷಕರು ಬಹಳ ಕಾತರದಿಂದ ಕಾಯುತ್ತಿದ್ದ ಈ ಕಾರ್ಯಕ್ರಮದ ಪ್ರೋಮೋ ಈಗ ಬಿಡುಗಡೆಯಾಗಿದೆ. ಮೊದಲ ಸಂಚಿಕೆಯಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್ ವಿಶೇಷ ಅತಿಥಿಯಾಗಿ ಭೇಟಿ ನೀಡುತ್ತಿದ್ದಾರೆ.

ಜಿಯೋಹಾಟ್‌ಸ್ಟಾರ್​ನ ದಿ ಪೀಕಾಕ್ ಹಬ್‌ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಅಕ್ಟೋಬರ್ 14 ರಿಂದ ಪ್ರೀಮಿಯರ್ ಸಂಚಿಕೆ ವೀಕ್ಷಣೆಗೆ ಲಭ್ಯವಿದೆ. ಕರಣ್ ಜೋಹರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಹಂಚಿಕೊಂಡಿದ್ದಾರೆ. ‘ಒಂದು ಕೊನೆಯ ಬಾರಿಗೆ ಬಾಯ್ ಜೊತೆ ಕಾಫಿ’ ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.

ಇದು ಶೋನ ಕೊನೆಯ ಸೀಸನ್ ಆಗಿರುವುದರಿಂದ ವಿಶೇಷವಾಗಿರಲಿದೆ. ಪ್ರೋಮೋದಲ್ಲಿ ಕರಣ್ ಜೋಹರ್ ಈ ಬಗ್ಗೆ ಮಾತನಾಡಿದ್ದಾರೆ. ಇದು ಕೊನೆಯ ಸೀಸನ್ ಎಂದು ಕರಣ್ ಹೇಳಿದ್ದಾರೆ. ಇದಕ್ಕೆ ಸಲ್ಮಾನ್ ಖಾನ್ ಕೂಡ ಧನಿಗೂಡಿಸಿ ನಗಿಸಿದ್ದಾರೆ. ಈ ಬಾರಿ ಶೋನಲ್ಲಿ ಹಲವು ಕುತೂಹಲಕಾರಿ ಸಂಗತಿಗಳು ಇರಲಿವೆ.

View this post on Instagram

A post shared by Karan Johar (@karanjohar)

ಸಲ್ಮಾನ್ ಖಾನ್ ಈ ಶೋನಲ್ಲಿ ಸೋಲೋ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಅವರು ಈ ಹಿಂದೆ ಎರಡು ಬಾರಿ ಶೋಗೆ ಬಂದಿದ್ದರು. ತಮ್ಮ ಸಹೋದರರು ಮತ್ತು ತಂದೆಯ ಜೊತೆ ಆಗಮಿಸಿದ್ದರು. ಆದರೆ ಈ ಬಾರಿ ಅವರು ಒಬ್ಬಂಟಿಯಾಗಿ ಶೋನ ಮೆರಗು ಹೆಚ್ಚಿಸಿದ್ದಾರೆ. ಇಂದು ಸಂಜೆ 7 ಗಂಟೆಗೆ ಶೋ ಜಿಯೋ ಹಾಟ್​​ಸ್ಟಾರ್​​ನ್ಲಿ ಪ್ರಸಾರ ಕಾಣಲಿದೆ.

ಇದನ್ನೂ ಓದಿ: ‘ನೀವು ಇನ್ನೂ ವರ್ಜಿನ್ ಆಗಿದ್ದೀರಾ?’; ಸಲ್ಮಾನ್ ಖಾನ್​ಗೆ ಕರಣ್ ಜೋಹರ್ ನೇರ ಪ್ರಶ್ನೆ

ಈ ಅಂತಿಮ ಸೀಸನ್‌ನಲ್ಲಿ ಅನೇಕ ಸ್ಟಾರ್ ನಟರು ಅತಿಥಿಗಳಾಗಿ ಬರಲಿದ್ದಾರೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ, ಕರೀನಾ ಕಪೂರ್, ಸೈಫ್ ಅಲಿ ಖಾನ್ ಸೇರಿದಂತೆ ಹಲವು ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ. ಈ ಪಟ್ಟಿಯು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:02 am, Wed, 14 October 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More