AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋಲ್ಡ್​ ದೃಶ್ಯಗಳಲ್ಲೇ ಮಿಂಚುತ್ತಿದ್ದಾರೆ ಕೃತಿ ಶೆಟ್ಟಿ; ವೈರಲ್​ ಆಗುತ್ತಿವೆ ಫೋಟೋಗಳು

‘ಶ್ಯಾಮ್​ ಸಿಂಗ್​ ರಾಯ್’ ಸಿನಿಮಾದಲ್ಲಿ ನಾನಿ ಹಾಗೂ ಕೃತಿ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್​ 24ರಂದು ರಿಲೀಸ್​ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರದಲ್ಲಿ ಕೃತಿ ಶೆಟ್ಟಿ ಹಾಗೂ ನಾನಿ ನಡುವೆ ಲಿಪ್​ಕಿಸ್​ ದೃಶ್ಯಗಳಿವೆ.

ಬೋಲ್ಡ್​ ದೃಶ್ಯಗಳಲ್ಲೇ ಮಿಂಚುತ್ತಿದ್ದಾರೆ ಕೃತಿ ಶೆಟ್ಟಿ; ವೈರಲ್​ ಆಗುತ್ತಿವೆ ಫೋಟೋಗಳು
ಕೃತಿ ಶೆಟ್ಟಿ
TV9 Web
| Edited By: |

Updated on: Jan 04, 2022 | 4:11 PM

Share

ನಟಿ ಕೃತಿ ಶೆಟ್ಟಿ (Krithi Shetty) ಟಾಲಿವುಡ್​ನ ಬೇಡಿಕೆಯ ನಟಿ. ಸಿನಿಮಾದ ಪಾತ್ರ ಏನನ್ನು ಕೇಳುತ್ತದೆಯೋ ಅದನ್ನು ಮಾಡೋಕೆ ಅವರು ಸದಾ ಸಿದ್ಧರಿರುತ್ತಾರೆ. ‘ಉಪ್ಪೇನ’ (Uppena) ಸಿನಿಮಾ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ಈ ಸಿನಿಮಾ ತೆರೆಕಂಡ ನಂತರದಲ್ಲಿ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರು ನಿರ್ವಹಿಸಿದ್ದ ಬೇಬಮ್ಮ ಪಾತ್ರ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಕೃತಿ ಸುದ್ದಿಯಲ್ಲಿದ್ದಾರೆ. ಪ್ರತಿ ಸಿನಿಮಾದಲ್ಲೂ ಬೋಲ್ಡ್​ ದೃಶ್ಯಗಳಲ್ಲಿ ಕೃತಿ ನಟಿಸುತ್ತಿದ್ದಾರೆ. ಇದು ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

‘ಶ್ಯಾಮ್​ ಸಿಂಗ​ ರಾಯ್’ ಸಿನಿಮಾದಲ್ಲಿ ನಾನಿ ಹಾಗೂ ಕೃತಿ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್​ 24ರಂದು ರಿಲೀಸ್​ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರದಲ್ಲಿ ಕೃತಿ ಶೆಟ್ಟಿ ಹಾಗೂ ನಾನಿ ನಡುವೆ ಲಿಪ್​ಕಿಸ್​ ದೃಶ್ಯಗಳಿವೆ. ಈ ದೃಶ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈಗ ಮತ್ತೊಂದು ಸಿನಿಮಾದಲ್ಲಿ ಕೃತಿ ಬೋಲ್ಡ್​ ಪಾತ್ರ​ ಮಾಡಿದ್ದಾರೆ.

ಸುಧೀರ್​ ಬಾಬು ನಟನೆಯ ‘ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ’ ಸಿನಿಮಾಗೆ ಕೃತಿ ಶೆಟ್ಟಿ ನಾಯಕಿ. ಈ ಸಿನಿಮಾದಲ್ಲಿಯೂ ಅವರು ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ಫೋಟೋಗಳು ಈಗ ಸಾಕಷ್ಟು ವೈರಲ್​ ಆಗಿದೆ.

‘ಬಂಗರ್ರಾಜು’ ಸಿನಿಮಾದಲ್ಲಿ ಕೃತಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರು ಯಾವ ಅವತಾರ ತಾಳಬಹುದು ಎನ್ನುವ ಕುತೂಹಲ ಪ್ರೇಕ್ಷಕರದ್ದಾಗಿತ್ತು. ಇದಕ್ಕೆ ಇತ್ತೀಚೆಗೆ ಉತ್ತರ ಸಿಕ್ಕಿತ್ತು. ನಾಗ ಚೈತನ್ಯ ಅವರು ಕೃತಿ ಅವರ ಹೊಸ ಲುಕ್​ ಅನಾವರಣ ಮಾಡಿದ್ದರು. ಈ ಲುಕ್​ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಕೃತಿ ಅವರು ‘ಬಂಗರ್ರಾಜು’ ಚಿತ್ರದಲ್ಲಿ ನಾಗಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಲುಕ್​ನಲ್ಲಿ ಕೃತಿ ಅವರು ಹಸಿರು ಬಣ್ಣದ ಸೀರೆ ತೊಟ್ಟಿದ್ದರು. ಕೊರಳಿಗೆ ಗುಲಾಬಿ ಹೂವಿನ ಹಾರ ಹಾಕಿಕೊಂಡಿದ್ದರು. ಕೈಯಲ್ಲಿ ಕನ್ನಡಕ ಹಿಡಿದಿದ್ದರು.

ಇದನ್ನೂ ಓದಿ: ನಾನಿ ಜತೆ ಲಿಪ್ ಕಿಸ್​​​ ಮಾಡಿ ಸುದ್ದಿಯಾದ ಕೃತಿ ಶೆಟ್ಟಿ; ಶಾಕ್​ ಆದ ಅಭಿಮಾನಿಗಳು

Follow Us
Web contact
Web contact

TV9 Kannada

Read More
ನವಜಾತ ಶಿಶುವಿಗೆ ಮರುಜೀವ ನೀಡಿದ ವೈದ್ಯೆ
ನವಜಾತ ಶಿಶುವಿಗೆ ಮರುಜೀವ ನೀಡಿದ ವೈದ್ಯೆ
ವಾಯುಭಾರ ಕುಸಿತ: ಕರ್ನಾಟಕದಲ್ಲಿ 3 ದಿನ ಭಾರೀ ಮಳೆ, ಎಲ್ಲೆಲ್ಲಿ?
ವಾಯುಭಾರ ಕುಸಿತ: ಕರ್ನಾಟಕದಲ್ಲಿ 3 ದಿನ ಭಾರೀ ಮಳೆ, ಎಲ್ಲೆಲ್ಲಿ?
ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಆರೋಪಿಗಳು ಜಿಲೆಟಿನ್ ಇಟ್ಟಿದ್ಯಾಕೆ?
ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಆರೋಪಿಗಳು ಜಿಲೆಟಿನ್ ಇಟ್ಟಿದ್ಯಾಕೆ?
ಬೆಂಗಳೂರಿನಲ್ಲೊಂದು ವಿಚಿತ್ರ ಮನೆ ನೋಡಿದ್ರೆ ನೀವು ಶಾಕ್ ಆಗ್ತಿರಿ!
ಬೆಂಗಳೂರಿನಲ್ಲೊಂದು ವಿಚಿತ್ರ ಮನೆ ನೋಡಿದ್ರೆ ನೀವು ಶಾಕ್ ಆಗ್ತಿರಿ!
ಕೋರ್ಟ್ ಆದೇಶದಿಂದ ದರ್ಶನ್​ಗೆ ಅನುಕೂಲ: ಹೇಗೆ ಗೊತ್ತಾ?
ಕೋರ್ಟ್ ಆದೇಶದಿಂದ ದರ್ಶನ್​ಗೆ ಅನುಕೂಲ: ಹೇಗೆ ಗೊತ್ತಾ?
ಇನೋವಾ ಕಾರಿನಲ್ಲಿ ಬಂದು 7ಲಕ್ಷ ರೂ. ಮೌಲ್ಯದ ಸೀರೆ ಎಗರಿಸಿದ ಮಹಿಳಾ ಗ್ಯಾಂಗ್
ಇನೋವಾ ಕಾರಿನಲ್ಲಿ ಬಂದು 7ಲಕ್ಷ ರೂ. ಮೌಲ್ಯದ ಸೀರೆ ಎಗರಿಸಿದ ಮಹಿಳಾ ಗ್ಯಾಂಗ್
ಮೋದಿ ಕರೆ ಬೆನ್ನಲ್ಲೇ ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ
ಮೋದಿ ಕರೆ ಬೆನ್ನಲ್ಲೇ ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ
ಇನ್ನೂ ಹೆಚ್ಚಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ? ತಜ್ಞರು ಹೇಳೋದೇನು ನೋಡಿ
ಇನ್ನೂ ಹೆಚ್ಚಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ? ತಜ್ಞರು ಹೇಳೋದೇನು ನೋಡಿ
ಮಗ, ಸೊಸೆ-ಮೊಮ್ಮಕ್ಳು ಬೆಳಗಾಗೋದ್ರೊಳಗೆ ಸತ್ತೋದ್ರು: ತಾಯಿಯ ಕಣ್ಣೀರ ಮಾತು
ಮಗ, ಸೊಸೆ-ಮೊಮ್ಮಕ್ಳು ಬೆಳಗಾಗೋದ್ರೊಳಗೆ ಸತ್ತೋದ್ರು: ತಾಯಿಯ ಕಣ್ಣೀರ ಮಾತು
ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲರ ವಿಶ್ಲೇಷಣೆ
ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲರ ವಿಶ್ಲೇಷಣೆ