ಮೇ 23ರಂದು ಶರಣ್ಯಾ ಅವರಿಗೆ ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಚಿಂತಾಜನಕ ಆಗಿದ್ದರಿಂದ ಹಲವು ದಿನಗಳ ಕಾಲ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಜೂನ್ನಲ್ಲಿ ಐಸಿಯುನಿಂದ ಜನರಲ್ ವಾರ್ಡ್ಗೆ ವರ್ಗಾಯಿಸಿದ ಬಳಿಕ ಮತ್ತೆ ಪರಿಸ್ಥಿತಿ ಬಿಗಡಾಯಿಸಿತ್ತು.
ಕಳೆದ ಹತ್ತು ವರ್ಷಗಳಲ್ಲಿ ಶರಣ್ಯಾ ಹಲವು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಕೂಡ ಎದುರಾಗಿತ್ತು. ಮಲಯಾಳಂ ಚಿತ್ರರಂಗ ಮತ್ತು ಕಿರುತೆರೆಯ ಅನೇಕರು ಅವರಿಗೆ ಸಹಾಯ ಮಾಡಿದ್ದರು. ಶರಣ್ಯಾ ಹೊಸ ಮನೆ ಖರೀದಿಸಲು ಕೂಡ ಬಹುತೇಕರು ನೆರವಾಗಿದ್ದರು. ಹರಿಚಂದನಮ್, ಸೀತಾ ಮುಂತಾದ ಸೀರಿಯಲ್ಗಳಲ್ಲಿ ನಟಿಸುವ ಮೂಲಕ ಮಲಯಾಳಂ ಕಿರುತೆರೆಯಲ್ಲಿ ಶರಣ್ಯಾ ತುಂಬ ಫೇಮಸ್ ಆಗಿದ್ದರು. ಚೋಟಾ ಮುಂಬೈ, ಬಾಂಬೆ ಮುಂತಾದ ಸಿನಿಮಾಗಳಲ್ಲಿ ಅವರು ಪೋಷಕ ಪಾತ್ರಗಳನ್ನೂ ಮಾಡಿದ್ದರು.
ನಟಿ ಸೀಮಾ ನಾಯರ್ ಅವರು ಶರಣ್ಯಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ‘ಎಲ್ಲ ಪ್ರಾರ್ಥನೆ ಮತ್ತು ಪ್ರಯತ್ನಗಳು ಅಂತ್ಯವಾದವು. ಆಕೆ ಹೊರಟುಹೋದಳು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಸೀಮಾ ಪೋಸ್ಟ್ ಮಾಡಿದ್ದಾರೆ. ಶರಣ್ಯಾ ಅವರ ಕಷ್ಟದ ದಿನಗಳಲ್ಲಿ ಸೀಮಾ ಬೆಂಬಲವಾಗಿ ನಿಂತಿದ್ದರು.
ಇದನ್ನೂ ಓದಿ:
Yashika Aanand: ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್
ಸಂಚಾರಿ ವಿಜಯ್ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ