Manjima Mohan: ವಿವಾಹ ಆಗುವಾಗ ಮಂಟಪದಲ್ಲೂ ಬಾಡಿ ಶೇಮಿಂಗ್; ಬೇಸರ ತೋಡಿಕೊಂಡ ನಟಿ
ಆನ್ಲೈನ್ನಲ್ಲಿ ಕಮೆಂಟ್ಗಳು ಎದುರಾಗೋದು ಸಾಮಾನ್ಯ. ಆದರೆ, ಮದುವೆ ಮಂಟಪದಲ್ಲೂ ತಮ್ಮ ಬಾಡಿಯ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿದ ಬಗ್ಗೆ ಮಂಜಿಮಾ ಬೇಸರ ತೋಡಿಕೊಂಡಿದ್ದಾರೆ.

ನಟ-ನಟಿಯರ ದೇಹ ಹೇಗಿದೆ? ಅವರು ಅದನ್ನು ಫಿಟ್ ಆಗಿ ಇಟ್ಟುಕೊಂಡಿದ್ದಾರೆ ಎಂಬಿತ್ಯಾದಿ ವಿಚಾರಗಳು ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ತುಂಬಾನೇ ಮುಖ್ಯವಾಗುತ್ತದೆ. ದೇಹದ ತೂಕ ಜಾಸ್ತಿ ಆದರೆ, ಈ ಬಗ್ಗೆ ಟ್ರೋಲ್ ಮಾಡಲಾಗುತ್ತದೆ. ತಮಿಳು ನಟಿ, ಆ್ಯಂಕರ್ ಮಂಜಿಮಾ ಮೋಹನ್ಗೂ (Manjima Mohan) ಇದೇ ರೀತಿಯ ಅನುಭವ ಆಗಿದೆ. ಇತ್ತೀಚೆಗೆ ಅವರು ಗೌತಮ್ ಕಾರ್ತಿಕ್ (Gautham Karthik ) ಅವರನ್ನು ಮದುವೆ ಆದರು. ಚೆನ್ನೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಹೊಸ ಬಾಳು ಆರಂಭಿಸಿದ್ದಾರೆ ಅವರು. ಬೇಸರದ ಸಂಗತಿ ಎಂದರೆ ನಟಿಗೆ ಮದುವೆಯಲ್ಲೂ ಬಾಡಿ ಶೇಮಿಂಗ್ ಮಾಡಲಾಗಿದೆ.
ಆನ್ಲೈನ್ನಲ್ಲಿ ಕಮೆಂಟ್ಗಳು ಎದುರಾಗೋದು ಸಾಮಾನ್ಯ. ಆದರೆ, ಮದುವೆ ಮಂಟಪದಲ್ಲೂ ತಮ್ಮ ಬಾಡಿಯ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿದ ಬಗ್ಗೆ ಮಂಜಿಮಾ ಬೇಸರ ತೋಡಿಕೊಂಡಿದ್ದಾರೆ. ಮಂಜಿಮಾ ದೇಹದ ತೂಕ ಹೆಚ್ಚಾಗಿದ್ದು ಟೀಕೆಗೆ ಒಳಗಾಗಲು ಪ್ರಮುಖ ಕಾರಣ. ‘ಕೆಲವರು ನನ್ನ ಮದುವೆಯಲ್ಲೂ ನನ್ನ ದೇಹದ ಬಗ್ಗೆ ಮಾತನಾಡಿದರು. ಮೊದಲೆಲ್ಲ ಈ ಬಗ್ಗೆ ನನಗೆ ಬೇಸರ ಆಗುತ್ತಿತ್ತು. ಆದರೆ, ನನ್ನ ದೇಹದ ಬಗ್ಗೆ ನನಗೆ ಖುಷಿ ಇದೆ. ನಾನು ಯಾವಾಗ ಬೇಕೋ ಆಗ ದೇಹದ ತೂಕ ಇಳಿಸಿಕೊಳ್ಳಬಹುದು ಅನ್ನೋದು ನನಗೆ ಗೊತ್ತಿದೆ’ ಎಂದಿದ್ದಾರೆ ಮಂಜಿಮಾ.
ಮಂಜಿಮಾ ಅವರು ಮಲಯಾಳಂ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಗುರುತಿಸಿಕೊಂಡರು. ನಿವೀನ್ ಪೌಳಿ ನಟನೆಯ ‘ಒರು ವಡಕ್ಕನ್ ಸೆಲ್ಫೀ’ ಚಿತ್ರದ ಮೂಲಕ ನಟಿಯಾದರು. ನಂತರ ಅವರನ್ನು ತಮಿಳು ಚಿತ್ರರಂಗ ಕೈ ಬೀಸಿ ಕರೆಯಿತು. ಹಲವು ಹಿಟ್ ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ‘ದೇವರತಮ್’ ಸಿನಿಮಾದಲ್ಲಿ ಮಂಜಿಮಾಗೆ ಗೌತಮ್ ಕಾರ್ತಿಕ್ ಭೇಟಿ ಆಯಿತು. ಅಲ್ಲಿಂದ ಇವರು ಡೇಟಿಂಗ್ ನಡೆಸಲು ಶುರು ಮಾಡಿದರು. ನವೆಂಬರ್ 28ರಂದು ಈ ಜೋಡಿ ಮದುವೆ ಆಗಿದೆ.
ಇದನ್ನೂ ಓದಿ: ‘ರಾಜಕೀಯ ಒತ್ತಡದಿಂದ ದಿ ಕಾಶ್ಮೀರ್ ಫೈಲ್ಸ್ ಸಿನಿಮೋತ್ಸವಕ್ಕೆ ಬಂತು’; ಇಸ್ರೇಲ್ ನಿರ್ದೇಶಕ ನಡಾವ್
ಮಂಜಿಮಾ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಬಂದ ಎಲ್ಲಾ ಆಫರ್ಗಳನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಅವರು ಸದ್ಯ ‘ಅಕ್ಟೋಬರ್ 31st ಲೇಡಿಸ್ ನೈಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಕೆಲಸಗಳು ನಡೆಯುತ್ತಿವೆ. ಮದುವೆ ಹಿನ್ನೆಲೆಯಲ್ಲಿ ಮಂಜಿಮಾ ಅವರು ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ