AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಭೀರ ಲೋಪ ಎಸಗಿದ ಮಲಯಾಳಂ ಸಿನಿಮಾ, ತನಿಖೆ ಆರಂಭಿಸಿದ ಸಿಎಬಿಎಫ್​​ಸಿ

Mollywood Times: ಸಿನಿಮಾಗಳು, ಭಾರತದ ಸಿನಿಮಾಟೊಗ್ರಫಿ ಕಾಯ್ದೆಯಡಿಯೇ ಪ್ರದರ್ಶನ ಕಾಣಬೇಕು. ಅದರಲ್ಲೂ ಸಿಬಿಎಫ್​​ಸಿ ನೀಡಿದ ಪ್ರಮಾಣ ಪತ್ರದ ಹೊರತಾಗಿ ಹಾಗೂ ಸಿಬಿಎಫ್​​ಸಿ ಸೂಚಿಸಿದ ರೀತಿಯಲ್ಲಿಯೇ ಸಿನಿಮಾಗಳು ಪ್ರದರ್ಶನ ಕಾಣಬೇಕು ಎಂಬುದು ಕಡ್ಡಾಯ ನಿಯಮ. ಸಿಬಿಎಫ್​​ಸಿ ಸೂಚಿಸಿದ ಕಡೆ, ಕಟ್ ಮಾಡಬೇಕು, ಮ್ಯೂಟ್ ಮಾಡಬೇಕು, ಒಂದೊಮ್ಮೆ ಸಿಬಿಎಫ್​​ಸಿ, ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದರೆ ಬಿಡುಗಡೆ ಮಾಡುವಂತಿಲ್ಲ. ಸಿಬಿಎಫ್​​ಸಿಯನ್ನು ನಿಯಮವನ್ನು ಮೀರಿ ಯಾರೂ ಸಿನಿಮಾ ಪ್ರದರ್ಶಿಸುವಂತಿಲ್ಲ.

ಗಂಭೀರ ಲೋಪ ಎಸಗಿದ ಮಲಯಾಳಂ ಸಿನಿಮಾ, ತನಿಖೆ ಆರಂಭಿಸಿದ ಸಿಎಬಿಎಫ್​​ಸಿ
Mollywood
ಮಂಜುನಾಥ ಸಿ.
|

Updated on: Jun 13, 2026 | 4:57 PM

Share

ಸಿನಿಮಾಗಳು (Cinema), ಭಾರತದ ಸಿನಿಮಾಟೊಗ್ರಫಿ ಕಾಯ್ದೆಯಡಿಯೇ ಪ್ರದರ್ಶನ ಕಾಣಬೇಕು. ಅದರಲ್ಲೂ ಸಿಬಿಎಫ್​​ಸಿ ನೀಡಿದ ಪ್ರಮಾಣ ಪತ್ರದ ಹೊರತಾಗಿ ಹಾಗೂ ಸಿಬಿಎಫ್​​ಸಿ ಸೂಚಿಸಿದ ರೀತಿಯಲ್ಲಿಯೇ ಸಿನಿಮಾಗಳು ಪ್ರದರ್ಶನ ಕಾಣಬೇಕು ಎಂಬುದು ಕಡ್ಡಾಯ ನಿಯಮ. ಸಿಬಿಎಫ್​​ಸಿ ಸೂಚಿಸಿದ ಕಡೆ, ಕಟ್ ಮಾಡಬೇಕು, ಮ್ಯೂಟ್ ಮಾಡಬೇಕು, ಒಂದೊಮ್ಮೆ ಸಿಬಿಎಫ್​​ಸಿ, ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದರೆ ಬಿಡುಗಡೆ ಮಾಡುವಂತಿಲ್ಲ. ಸಿಬಿಎಫ್​​ಸಿಯನ್ನು ನಿಯಮವನ್ನು ಮೀರಿ ಯಾರೂ ಸಿನಿಮಾ ಪ್ರದರ್ಶಿಸುವಂತಿಲ್ಲ. ಆದರೆ ಇದೀಗ ಮಲಯಾಳಂ ಸಿನಿಮಾ ಒಂದು ಈ ದುಸ್ಸಾಹಸ ಮಾಡಿದೆ.

‘ಪ್ರೇಮಲು’, ‘ಲೋಕ’ ಖ್ಯಾತಿಯ ನಟ ನಸ್ಲೆನ್ ಅಭಿನಯದ ‘ಮಾಲಿವುಡ್ ಟೈಮ್ಸ್’ ಹೆಸರಿನ ಮಲಯಾಳಂ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಈ ಸಿನಿಮಾವು ಮಲಯಾಳಂ ಚಿತ್ರರಂಗದ ಕುರಿತಾದ ಕತೆಯನ್ನು ಒಳಗೊಂಡಿದ್ದು, ನಸ್ಲೆನ್ ಅವರು ಮಲಯಾಳಂ ಚಿತ್ರರಂಗದ ಸಿನಿಮಾ ನಿರ್ದೇಶಕನಾಗಿ ನಟಿಸಿದ್ದಾರೆ. ಆದರೆ ಈ ಸಿನಿಮಾ ಸಿಬಿಎಫ್​​ಸಿಯ ನಿಯಮ ಉಲ್ಲಂಘಿಸಿದ್ದು, ಸಿಬಿಎಫ್​​ಸಿ ಸೂಚಿಸಿದ ಕಟ್ ಹಾಗೂ ಮ್ಯೂಟ್ ಮಾಡದೆ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಸಿಬಿಎಫ್​​ಸಿಗೆ ಸಲ್ಲಿಕೆಯಾಗಿದ್ದ ಸಿನಿಮಾಕ್ಕೂ ಈಗ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾಕ್ಕೂ ವ್ಯತ್ಯಾಸವಿದೆ ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ, ಪ್ರಮಾಣೀಕರಣಕ್ಕಾಗಿ ಸಲ್ಲಿಸಲಾದ ಸಿನಿಮಾನಲ್ಲಿ ಕೆಲವು ಅವಾಚ್ಯ ಶಬ್ದಗಳನ್ನು ಮ್ಯೂಟ್ ಮಾಡಲಾಗಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಆ ಶಬ್ದಗಳನ್ನು ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದಿದ್ದಾರೆ. ಸಿಬಿಎಫ್​​ಸಿ ಸೂಚಿಸಿದ್ದರೂ ಸಹ ಸಿನಿಮಾ ತಂಡದವರು ಅಶ್ಲೀಲ ಪದಗಳನ್ನು ಮ್ಯೂಟ್ ಮಾಡದೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಿಬಿಎಫ್​​ಸಿಯು ಇದೀಗ ತನಿಖೆ ಆರಂಭಿಸಿದ್ದು, ಘಟನೆ ಕುರಿತಾಗಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಒಂದೊಮ್ಮೆ ಸಿಬಿಎಫ್​​ಸಿ ಸೂಚಿಸಿದ ಕಟ್​​ ಹಾಗೂ ಮ್ಯೂಟ್​​ ರಹಿತವಾಗಿ ಸಿನಿಮಾವನ್ನು ಬಿಡುಗಡೆ ಮಾಡಿದ್ದಲ್ಲಿ ನಿರ್ಮಾಪಕರು ಗಂಭೀರ ದಂಡವನ್ನೇ ತೆರಬೇಕಾಗುತ್ತದೆ. ಪರಿಶೀಲನೆಯಲ್ಲಿ ತಪ್ಪು ಸಾಬೀತಾದರೆ, ಇದು ಗಂಭೀರವಾದ ನಿಯಮ ಉಲ್ಲಂಘನೆ ಆಗಿದೆ ಈ ಉಲ್ಲಂಘನೆಗೆ ಸಿನಿಮಾ ಮೇಲೆ ಶಾಶ್ವತ ನಿಷೇಧ, ನಿರ್ಮಾಪಕರಿಗೆ ದಂಡ ಮತ್ತು ಶಿಕ್ಷೆ ವಿಧಿಸಬಹುದಾಗಿರುತ್ತದೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಭಾರೀ ಗಳಿಕೆ ಮಾಡಿದ ಹಾಲಿವುಡ್ ಚಿತ್ರ; ಕನ್ನಡ ಸಿನಿಮಾಗಳಿಗೇ ಇಲ್ಲ ಬೇಡಿಕೆ

1952ರ ಸಿನೆಮಾಟೋಗ್ರಾಫ್ ಕಾಯಿದೆಯ ನಿಬಂಧನೆಗಳ ಪ್ರಕಾರ, ಪ್ರಮಾಣೀಕೃತ ಚಲನಚಿತ್ರ ಆವೃತ್ತಿಗಳಿಗೆ ಸಂಬಂಧಿಸಿದ ಉಲ್ಲಂಘನೆಗಳು ದಂಡಕ್ಕೆ ಕಾರಣವಾಗಬಹುದು. ಅಧಿಕಾರಿಗಳು ನಿಯಮ ಉಲ್ಲಂಘನೆಯಾಗಿದೆ ಎಂದು ತೀರ್ಮಾನಿಸಿದರೆ, ನಿರ್ಮಾಪಕರು ಕಾನೂನಿನ ಅನ್ವಯ ಕ್ರಮಗಳನ್ನು ಎದುರಿಸಬೇಕಾಗಿರುತ್ತದೆ. ಮತ್ತು ‘ಮಾಲಿವುಡ್ ಟೈಮ್ಸ್’ ನ ಪ್ರದರ್ಶನ ನಿಲ್ಲಿಸಿ ಮತ್ತೊಮ್ಮೆ ಪ್ರಮಾಣೀಕೃತ ಗೊಳಿಸಬೇಕಾಗುತ್ತದೆ. ಸದ್ಯಕ್ಕೆ ಈ ಸಿನಿಮಾಕ್ಕೆ ‘ಯುಎ13’ ಪ್ರಮಾಣ ಪತ್ರವನ್ನು ಸಿಬಿಎಫ್​​ಸಿ ನೀಡಿದೆ.

‘ಮಾಲಿವುಡ್ ಟೈಮ್ಸ್’ ಸಿನಿಮಾನಲ್ಲಿ ನಸ್ಲಿನ್ ನಾಯಕ, ಸಿನಿಮಾ ಅನ್ನು ಅಭಿನಯ್ ಸುಂದರ್ ನಾಯಕ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಆಶಿಖ್ ಉಸ್ಮಾನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ