AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಸೀರಿಯಲ್ ಕಿಲ್ಲರ್ ಕಥೆ ‘ದಹಾಡ್​’? 20 ಮಹಿಳೆಯರನ್ನು ಈತ ಕೊಂದಿದ್ದು ಹೇಗೆ ಗೊತ್ತಾ?

Cyanide Mohan Kumar: ವಿಜಯ್ ವರ್ಮಾ ಅವರ ಪಾತ್ರ ಸಂಪೂರ್ಣವಾಗಿ ಫಿಕ್ಷನಲ್ ಅಲ್ಲ ಎನ್ನಲಾಗಿದೆ. 2003 ಮತ್ತು 2009ರ ನಡುವೆ ಕರ್ನಾಟಕದಲ್ಲಿ 20 ಮಹಿಳೆಯರನ್ನು ಮೋಹನ್ ಕುಮಾರ್ ಎಂಬಾತ ಹತ್ಯೆ ಮಾಡಿದ್ದ.

ಕರ್ನಾಟಕ ಸೀರಿಯಲ್ ಕಿಲ್ಲರ್ ಕಥೆ ‘ದಹಾಡ್​’? 20 ಮಹಿಳೆಯರನ್ನು ಈತ ಕೊಂದಿದ್ದು ಹೇಗೆ ಗೊತ್ತಾ?
ಮೋಹನ್ ಕುಮಾರ್-ವಿಜಯ್
ರಾಜೇಶ್ ದುಗ್ಗುಮನೆ
|

Updated on: May 16, 2023 | 12:08 PM

Share

ಸೋನಾಕ್ಷಿ ಸಿನ್ಹಾ ಹಾಗೂ ವಿಜಯ್ ವರ್ಮಾ ನಟನೆಯ ‘ದಹಾಡ್’ (Dhaad) ವೆಬ್ ಸೀರಿಸ್ ಇತ್ತೀಚೆಗೆ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದೆ. ಕ್ರೈಮ್ ಥ್ರಿಲರ್ ಶೈಲಿಯಲ್ಲಿ ಈ ಸೀರಿಸ್ ಮೂಡಿ ಬಂದಿದೆ. ಮೇ 12ರಂದು ರಿಲೀಸ್ ಆಗಿರೋ ಈ ಸೀರಿಸ್​ಗೆ ಮೆಚ್ಚುಗೆ ಪಡೆದಿದೆ. ರೀಮಾ ಕಗ್ತಿ, ರುಚಿಕಾ ಒಬೆರಾಯ್ ಅವರು ಈ ಸೀರಿಸ್​ ನಿರ್ದೇಶನ ಮಾಡಿದ್ದಾರೆ. ಜೋಯಾ ಅಖ್ತರ್ ಹಾಗೂ ರೀಮಾ ಈ ಕಥೆಯನ್ನಯ ಬರೆದಿದ್ದಾರೆ. 20 ಮಹಿಳೆಯರನ್ನು ಕೊಂದ ಹಂತಕ ಹುಡುಕುವ ಕಥೆಯನ್ನು ಈ ಸೀರಿಸ್ ಒಳಗೊಂಡಿದೆ.

ವಿಜಯ್ ವರ್ಮಾ ಅವರ ಪಾತ್ರ ಸಂಪೂರ್ಣವಾಗಿ ಫಿಕ್ಷನಲ್ ಅಲ್ಲ ಎನ್ನಲಾಗಿದೆ. 2003 ಮತ್ತು 2009ರ ನಡುವೆ ಕರ್ನಾಟಕದಲ್ಲಿ 20 ಮಹಿಳೆಯರನ್ನು ಮೋಹನ್ ಕುಮಾರ್ ಎಂಬಾತ ಹತ್ಯೆ ಮಾಡಿದ್ದ. ಮೋಹನ್ ಕುಮಾರ್ ಅಕ ಸೈನೈಡ್ ಮೋಹನ್‌ ಪಾತ್ರದ ಜೊತೆ ವಿಜಯ್ ವರ್ಮಾ ಮಾಡಿರುವ ಪಾತ್ರ ಸಾಕಷ್ಟು ಸಾಮ್ಯತೆ ಹೊಂದಿದೆ. ಈ ಸೀರಿಸ್​ನ ಕಥೆ ರಾಜಸ್ಥಾನದಲ್ಲಿ ಸಾಗುತ್ತದೆ.

ಇದನ್ನೂ ಓದಿ: Sonakshi Sinha;ದಹಾಡ್; ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಬಾಲಿವುಡ್​​ ಬೆಡಗಿ ಸೋನಾಕ್ಷಿ ಸಿನ್ಹಾ

ಮೋಹನ್ ಕುಮಾರ್ ಗುರಿಯಾಗಿಸಿಕೊಳ್ಳುತ್ತಿದ್ದುದು 20-30 ಪ್ರಾಯದ ಮಹಿಳೆಯರನ್ನು. ವರದಕ್ಷಿಣೆ ಕೊಡಲು ಸಾಧ್ಯವಾಗದೇ ಇರುವ ಮಹಿಳೆಯರೇ ಇವನ ಟಾರ್ಗೆಟ್. ಅವರನ್ನು ಮದುವೆಯಾಗುವುದಾಗಿ ಆತ ಆಮಿಷ ಒಡ್ಡುತ್ತಿದ್ದ. ಮಹಿಳೆಯರೊಂದಿಗೆ ಹೋಟೆಲ್‌ನಲ್ಲಿ ರಾತ್ರಿ ಕಳೆಯುತ್ತಿದ್ದ. ನಂತರ ಈ ಮಹಿಳೆಯರಿಗೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಆದರೆ, ಆತ ಕೊಡುತ್ತಿದ್ದುದು ಸೈನೈಡ್​ನ! ಒಟ್ಟು 20 ಜನರನ್ನು ಆತ ಹೀಗೆ ಕೊಂದಿದ್ದಾನೆ. ಈ ಮೃತ ದೇಹಗಳು ಬಸ್ ನಿಲ್ದಾಣದ, ಸಾರ್ವಜನಿಕ ಶೌಚಾಲಯದಲ್ಲಿ ಪತ್ತೆ ಆಗಿವೆ. ಎಲ್ಲಾ ಹೆಣಗಳು ಸಿಕ್ಕಿರೋದು ಮದುವೆ ಉಡುಗೆಯಲ್ಲಿ. ಆದರೆ, ಯಾರ ದೇಹದಮೇಲೂ ಚಿನ್ನಾಭರಣ ಇರುತ್ತಿರಲಿಲ್ಲ. ವಿಜಯ್ ವರ್ಮಾ ಪಾತ್ರಕ್ಕೂ ಮೋಹನ್ ಕುಮಾರ್ ಮಾಡಿದ ಅಪರಾಧಕ್ಕೂ ನಂಟಿದೆ.

ಮೋಹನ್ ಕುಮಾರ್​ನ 2009ರಲ್ಲಿ ಅರೆಸ್ಟ್ ಮಾಡಲಾಯಿತು. ಮಂಗಳೂರಿನ ಹೊರ ವಲಯದಲ್ಲಿ ಆತ ಸಿಕ್ಕಿಬಿದ್ದಿದ್ದ. ಬೆಳಗಾವಿ ಜೈಲಿನಲ್ಲಿ ಆತನನ್ನು ಇರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ