‘ದೇವರ’ ಸಿನಿಮಾ ಒಟಿಟಿ ರಿಲೀಸ್​ಗೆ ದಿನಾಂಕ ನಿಗದಿ; ನ.8ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ

ಜೂನಿಯರ್ ಎನ್‌ಟಿಆರ್ ನಟನೆಯ ‘ದೇವರ: ಪಾರ್ಟ್​ 1’ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ನೆಟ್‌ಫ್ಲಿಕ್ಸ್ ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ಪಡೆದುಕೊಂಡಿದ್ದು, ನವೆಂಬರ್ 8 ರಿಂದ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಚಿತ್ರದ ಯಶಸ್ಸು ಮತ್ತು ಒಟಿಟಿ ರಿಲೀಸ್ ಬಗ್ಗೆ ಇಲ್ಲಿ ಸಂಪೂರ್ಣ ವಿವರಗಳಿವೆ.

‘ದೇವರ’ ಸಿನಿಮಾ ಒಟಿಟಿ ರಿಲೀಸ್​ಗೆ ದಿನಾಂಕ ನಿಗದಿ; ನ.8ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ
ಜೂನಿಯರ್​ ಎನ್​ಟಿಆರ್​
Follow us
ಮದನ್​ ಕುಮಾರ್​
|

Updated on: Nov 05, 2024 | 3:21 PM

ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ: ಪಾರ್ಟ್​ 1’ ಸಿನಿಮಾ ಚಿತ್ರಮಂದಿರದಲ್ಲಿ ಉತ್ತಮ ಕಲೆಕ್ಷನ್​ ಮಾಡಿದೆ. ಪ್ರೇಕ್ಷಕರ ವಲಯದಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರೂ ಕೂಡ ಅಪ್ಪಟ ಅಭಿಮಾನಿಗಳು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಶೀಘ್ರದಲ್ಲೇ ಈ ಚಿತ್ರ 50 ದಿನಗಳನ್ನು ಪೂರೈಸಲಿದೆ. ಅಷ್ಟರಲ್ಲಾಗಲೇ ಒಟಿಟಿ ರಿಲೀಸ್​ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಚಿತ್ರಮಂದಿರದಲ್ಲಿ ‘ದೇವರ: ಪಾರ್ಟ್​ 1’ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ನೋಡಲು ಕಾದಿದ್ದಾರೆ. ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ಇಲ್ಲಿದೆ ವಿವರ..

‘ದೇವರ: ಪಾರ್ಟ್​ 1’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ನೆಟ್​ಫ್ಲಿಕ್ಸ್​ ಸಂಸ್ಥೆ ಖರೀದಿಸಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಹಲವು ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಎಲ್ಲ ಭಾಷೆಯ ಪ್ರಸಾರ ಹಕ್ಕುಗಳು ನೆಟ್​ಫ್ಲಿಕ್ಸ್​ಗೆ ಸೇಲ್ ಆಗಿವೆ. ನವೆಂಬರ್​ 8ರಿಂದ ‘ದೇವರ: ಪಾರ್ಟ್​ 1’ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ಒಟಿಟಿಯಲ್ಲಿ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದುನೋಡಬೇಕು.

View this post on Instagram

A post shared by Netflix India (@netflix_in)

ಕೊರಟಾಲ ಶಿವ ಅವರು ‘ದೇವರ: ಪಾರ್ಟ್​ 1’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಜೂನಿಯರ್​ ಎನ್​ಟಿಆರ್​ ಅವರು ದ್ವಿಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಜಾನ್ವಿ ಕಪೂರ್​ ನಟಿಸಿದ್ದಾರೆ. ಇದು ಅವರ ಮೊದಲ ತೆಲುಗು ಸಿನಿಮಾ. ಸೈಫ್ ಅಲಿ ಖಾನ್​, ಮುರಳಿ ಶರ್ಮಾ, ಪ್ರಕಾಶ್ ರಾಜ್, ಶ್ರೀಕಾಂತ್ ಮುಂತಾದವರು ಅಭಿನಯಿಸಿದ್ದಾರೆ. ಅನಿರುದ್ಧ್ ರವಿಚಂದರ್​ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಮುಂಬೈಗೆ ಹೋಗಿ ಜಾನ್ವಿ ಕಪೂರ್​ ಬಗ್ಗೆ ತಕರಾರು ತೆಗೆದ ಜೂನಿಯರ್​ ಎನ್​ಟಿಆರ್​; ಏನದು?

ಚಿತ್ರಮಂದಿರಗಳಲ್ಲಿ ನವೆಂಬರ್​ 15ರಂದು ‘ದೇವರ: ಪಾರ್ಟ್​ 1’ ಸಿನಿಮಾ 50 ದಿನಗಳನ್ನು ಪೂರೈಸಲಿದೆ. ಈ ವಿಶೇಷ ದಿನವನ್ನು ಸೆಲೆಬ್ರೇಟ್ ಮಾಡಲು ಜೂನಿಯರ್​ ಎನ್​ಟಿಆರ್​ ಅವರ ಅಭಿಮಾನಿಗಳು ಪ್ಲ್ಯಾನ್ ಮಾಡಿದ್ದಾರೆ. ಹೈದರಾಬಾದ್​ನ ‘ಸುದರ್ಶನ್​ 35 ಎಂಎಂ’ ಚಿತ್ರಮಂದಿರದಲ್ಲಿ ಸೆಲೆಬ್ರೇಷನ್​ಗೆ ಪ್ಲ್ಯಾನ್ ಮಾಡಿಲಾಗಿದೆ. ಜೂನಿಯರ್​ ಎನ್​ಟಿಆರ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು ನವೆಂಬರ್​ 16ರಂದು 24 ವರ್ಷ ಆಗಲಿದೆ. ಆ ದಿನವನ್ನು ಕೂಡ ಸಂಭ್ರಮಿಸಲು ಫ್ಯಾನ್ಸ್ ಸಜ್ಜಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.