AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಕ್ರೋ ವೆಬ್ ಸರಣಿಯಲ್ಲಿ ಮೋಕ್ಷಿತಾ ಪೈ; ವಿಶೇಷತೆ, ಸವಾಲನ್ನು ವಿವರಿಸಿದ ನಟಿ

ಮೋಕ್ಷಿತಾ ಪೈ ಅವರು ಬುಲೆಟ್ ಆ್ಯಪ್​ನಲ್ಲಿ ಬಿಡುಗಡೆಯಾಗಲಿರುವ ಹೊಸ ಮೈಕ್ರೋ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಒಂದು ನಿಮಿಷದ 50 ಎಪಿಸೋಡ್‌ಗಳನ್ನು ಒಳಗೊಂಡ ಈ ಸರಣಿಯು ವರ್ಟಿಕಲ್ ಫಾರ್ಮ್ಯಾಟ್‌ನಲ್ಲಿದೆ. ನಟನೆಯಲ್ಲಿನ ಸವಾಲುಗಳು ಮತ್ತು ಈ ಹೊಸ ಮಾದರಿಯ ವೆಬ್ ಸರಣಿಯ ವಿಶೇಷತೆಗಳನ್ನು ಮೋಕ್ಷಿತಾ ವಿವರಿಸಿದ್ದಾರೆ.

ಮೈಕ್ರೋ ವೆಬ್ ಸರಣಿಯಲ್ಲಿ ಮೋಕ್ಷಿತಾ ಪೈ; ವಿಶೇಷತೆ, ಸವಾಲನ್ನು ವಿವರಿಸಿದ ನಟಿ
ಮೋಕ್ಷಿತಾ
ರಾಜೇಶ್ ದುಗ್ಗುಮನೆ
|

Updated on:Jun 30, 2025 | 1:25 PM

Share

ವೆಬ್ ಸೀರಿಸ್​ಗಳ ಬಗ್ಗೆ ಎಲ್ಲರೂ ಕೇಳಿರುತ್ತೀರಿ, ನೋಡಿರುತ್ತೀರಿ. ಅದರ ಮುಂದಿನ ಹಂತವಾಗಿ ಮಿನಿ ವೆಬ್ ಸೀರಿಸ್ ಕೂಡ ಬಂತು. ಅಂದರೆ ಕಡಿಮೆ ಅವಧಿಯಲ್ಲಿ ಎಲ್ಲವನ್ನೂ ಹೇಳೋದು. ಈಗ ಮೈಕ್ರೋ ವೆಬ್ ಸೀರಿಸ್ ಟ್ರೆಂಡಿಂಗ್​ನಲ್ಲಿ ಇದೆ. ಮೋಕ್ಷಿತಾ ಪೈ ಅವರು ಇದರ ಭಾಗವಾಗಿದ್ದಾರೆ. ಈ ವಿಚಾರ ಅವರಿಗೆ ಖುಷಿ ನೀಡಿದೆ. ಈ ಮೈಕ್ರೋ ಸೀರಿಸ್​ನ (Mico Series) ವಿಶೇಷತೆಗಳು ಒಂದೆರಡಲ್ಲ. ಆ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಕೊವಿಡ್ ಬಳಿಕ ವೆಬ್​ ಸೀರಿಸ್​ಗಳು ಟ್ರೆಂಡ್ ಆದವು. 40-60 ನಿಮಿಷಗಳ ಹಲವು ಎಪಿಸೋಡ್​ಗಳು ವೆಬ್​ ಸೀರಿಸ್​​ನಲ್ಲಿ ಇರುತ್ತವೆ. ಅದು ದೀರ್ಘ ಎನಿಸಿದಾಗ ಹುಟ್ಟಿಕೊಂಡಿದ್ದೇ ಮಿನಿ ಸೀರಿಸ್. ಇತ್ತೀಚೆಗೆ ಬಂದ ಕನ್ನಡದ ‘ಅಯ್ಯನ ಮನೆ’ ಇದಕ್ಕೆ ಒಳ್ಳೆಯ ಉದಾಹರಣೆ. 20 ನಿಮಿಷಗಲ್ಲಿ ಒಂದು ಎಪಿಸೋಡ್ ಮುಗಿದೇ ಹೋಗುತ್ತದೆ. ಈಗ ಮೈಕ್ರೋ ಸೀರಿಸ್ ಬಂದಿದೆ. ಒಂದೇ ನಿಮಿಷಕ್ಕೆ ಒಂದು ಎಪಿಸೋಡ್ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ
Image
ಚಿರಂಜೀವಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; ಅಸಮಾಧಾನ ಹೊರಹಾಕಿದ ಫ್ಯಾನ್ಸ್
Image
ಭಾನುವಾರವೂ ಹೆಚ್ಚಿಲ್ಲ ಕಣ್ಣಪ್ಪ ಕಲೆಕ್ಷನ್; ನೂರಾರು ಕೋಟಿ ರೂ. ನೀರಲ್ಲಿ ಹೋಮ
Image
ಹೃದಯಾಘಾತ, ಇಂಜಂಕ್ಷನ್ ಅಲ್ಲ; ಶೆಫಾಲಿ ಸಾವಿನ ಹಿಂದಿನ ರಹಸ್ಯ ತಿಳಿಸಿದ
Image
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

ಈ ಸರಣಿಯಲ್ಲಿ ವಿನಯ್ ಹಾಗೂ ಮೋಕ್ಷಿತಾ ಪತಿ-ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಲೀಪ್ ರಾಜ್ ಅವರು ಇದನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಇದು ಬುಲೆಟ್ ಆ್ಯಪ್​ನಲ್ಲಿ ಬರಲಿದೆ. ‘ನಾನು ಮೈಕ್ರೋ ಸೀರಿಸ್​ನ ಭಾಗ ಆಗಿದ್ದೇನೆ. ಒಂದು ಎಪಿಸೋಡ್ ಒಂದು ನಿಮಿಷ ಅಷ್ಟೇ ಇರೋದು. ಒಟ್ಟೂ 50 ಎಪಿಸೋಡ್​ಗಳು ಇರಬಹುದು. ಅಂದರೆ 50 ನಿಮಿಷಗಳಲ್ಲಿ ಸೀರಿಸ್ ಪೂರ್ಣಗೊಳ್ಳುತ್ತದೆ. ಕನ್ನಡದಲ್ಲಿ ಹೊಸ ಪ್ರಯತ್ನ. ಮತ್ತೊಂದು ವಿಶೇಷ ಎಂದರೆ ಈ ಸರಣಿ ವರ್ಟಿಕಲ್ ಆಗಿರುತ್ತದೆ. ಅಂದರೆ ರೀಲ್ಸ್ ಸೈಜ್​ನಲ್ಲಿ ದೃಶ್ಯಗಳನ್ನು ನೋಡಬೇಕಾಗುತ್ತದೆ’ ಎಂದು ಮೋಕ್ಷಿತಾ ವಿವರಿಸಿದ್ದಾರೆ.

‘ಈ ಸರಣಿಯಲ್ಲಿ ನಟಿಸೋದು ಚಾಲೆಂಜಿಂಗ್ ಆಗಿತ್ತು. ಇಲ್ಲಿ ಹೆಚ್ಚು ಭಾವನೆಗಳನ್ನು ತೋರಿಸೋಕೆ ಆಗಲ್ಲ. ಧಾರಾವಾಹಿಗಳಲ್ಲಿ ಭಾವನೆಗಳನ್ನು ಹೆಚ್ಚು ಡ್ರ್ಯಾಗ್ ಮಾಡಲಾಗುತ್ತದೆ. ಇಲ್ಲಿ ಅದಕ್ಕೆ ಅವಕಾಶ ಇಲ್ಲ. ಎಕ್ಸ್​ಪ್ರೆಷನ್, ಡೈಲಾಗ್ ಡೆಲಿವರಿ ಎಲ್ಲವನ್ನೂ ಆ ಒಂದು ಟೈಮ್​​ನಲ್ಲಿ ಮಾಡಬೇಕು. ಇದು ಸುಲಭ ಆಗಿರಲಿಲ್ಲ. ಶೂಟಿಂಗ್, ಡಬ್ಬಿಂಗ್ ಎಲ್ಲವೂ ಮುಗಿದಿದೆ’ ಎಂದು ಮೋಕ್ಷಿತಾ ವಿವರಿಸಿದ್ದಾರೆ.

ಇದನ್ನೂ ಓದಿ: ಸೀರೆಯಲ್ಲಿ ಸಖತ್ ಶೈನ್ ಆಗುವ ಬಿಗ್ ಬಾಸ್ ಸುಂದರಿ ಮೋಕ್ಷಿತಾ ಪೈ

‘ಈ ವೆಬ್ ಸೀರಿಸ್ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ನಾನು ಮುಗ್ಧ ಹುಡುಗಿ ಪಾತ್ರ ಮಾಡಿದ್ದೇನೆ. ಮುಗ್ಧೆ ಎಂದ ಮಾತ್ರಕ್ಕೆ ತಪ್ಪು ನಡೆದಿದೆ ಎಂದಾಗ ಅವಳು ಸುಮ್ಮನೆ ಇರೋದಿಲ್ಲ. ನನ್ನ ಪಾರು ಸೀರಿಯಲ್​ನ ದಿಲೀಪ್ ರಾಜ್ ನಿರ್ಮಾಣ ಮಾಡಿದ್ದರು. ಈಗ ಈ ಸೀರಿಸ್​ನ ಅವರೇ ನಿರ್ದೇಶನ ಮಾಡಿದ್ದಾರೆ. ಸುಮಾರು ವರ್ಷ ಆದಮೇಲೆ ಮತ್ತೆ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಮೊದಲ ಧಾರಾವಾಹಿ, ಮೊದಲ ಮೈಕ್ರೋ ಸೀರಿಸ್ ಅವರ ಜೊತೆ ಮಾಡಿದ್ದೇನೆ’ ಎಂದು ಖುಷಿ ಹೊರಹಾಕಿದರು ಮೋಕ್ಷಿತಾ. ಈ ಸರಣಿಗೆ  ‘ಅದೇ ಕಣ್ಣು’ಎಂಬ ಶೀರ್ಷಿಕೆ ಇಡಲಾಗಿದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:18 pm, Mon, 30 June 25

ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್
ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್