ಸೈಫ್​-ಕರೀನಾ ಮದುವೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ‘ಪಂಚಾಯತ್’ ನಟ; ಬದುಕು ಬದಲಿಸಿತು ಆ ದಿನ ನಡೆದ ಘಟನೆ

‘ಪಂಚಾಯತ್’ ಮೊದಲ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದ ಆಸಿಫ್ ಖಾನ್ ಈಗ ಮೂರನೇ ಸೀಸನ್​ಗೆ ಮರಳಿದ್ದಾರೆ. ‘ಪಂಚಾಯತ್’ ಜೊತೆ ಅವರು ‘ಮಿರ್ಜಾಪುರ್’ ಸೀರಿಸ್ನಲ್ಲಿ, ‘ಪಾತಾಳ್ ಲೋಕ್’ನಲ್ಲಿ ಅವರು ನಟಿಸಿದ್ದಾರೆ. ಅವರ ಬದುಕನ್ನು ಬದಲಿಸಿದ್ದು ಒಂದು ಘಟನೆ. ಆ ಬಗ್ಗೆ ಆಸಿಫ್ ಮಾತನಾಡಿದ್ದಾರೆ.

ಸೈಫ್​-ಕರೀನಾ ಮದುವೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ‘ಪಂಚಾಯತ್’ ನಟ; ಬದುಕು ಬದಲಿಸಿತು ಆ ದಿನ ನಡೆದ ಘಟನೆ
ಆಸಿಫ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jun 12, 2024 | 11:55 AM

ಅಮೇಜಾನ್ ಪ್ರೈಮ್ ವಿಡಿಯೋ (Amazon Prime Video) ಮೂಲಕ ಪ್ರಸಾರ ಕಂಡ ‘ಪಂಚಾಯತ್’ ಸೀರಿಸ್ ಸಾಕಷ್ಟು ಗಮನ ಸೆಳೆದಿದೆ. ಇತ್ತೀಚೆಗೆ ‘ಪಂಚಾಯತ್ ಸೀಸನ್ 3’ ಪ್ರಸಾರ ಕಂಡಿದೆ. ಇದರಲ್ಲಿ ನಟಿಸಿದ ಹಲವರು ಫೇಮಸ್ ಆಗಿದ್ದಾರೆ. ಈ ಪೈಕಿ ನಟ ಆಸಿಫ್ ಖಾನ್ ಕೂಡ ಒಬ್ಬರು. ‘ಪಂಚಾಯತ್’ ಸೀರಿಸ್​ನಲ್ಲಿ ಅತಿಥಿ ರೀತಿ ಕಾಣಿಸಿಕೊಂಡ ಇವರು ಭರ್ಜರಿ ಜನಪ್ರಿಯತೆ ಪಡೆದಿದ್ದಾರೆ. ಅಚ್ಚರಿ ಎಂದರೆ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮದುವೆಯಲ್ಲಿ ಇವರು ಪಾತ್ರೆ ತೊಳೆಯುತ್ತಿದ್ದರು! ಅಂದು ನಡೆದ ಒಂದು ಘಟನೆ ಇವರ ಬದುಕನ್ನು ಬದಲಿಸಿತು.

ಆಸಿಫ್ ಖಾನ್ ಅವರು ಪಂಚಾಯತ್ ಸೀರಿಸ್​ನಲ್ಲಿ ನಟಿಸಿ ಗಮನ ಸಳೆದಿದ್ದಾರೆ. ಅವರು ಹೇಳಿದ್ದ ‘ಗಜಬ್ ಬೇಜತಿ ಹೇ ಯಾರ್’ ಡೈಲಾಗ್ ಭರ್ಜರಿ ಫೇಮಸ್ ಆಗಿತ್ತು. ಪಂಚಾಯತ್​ನ ಮೊದಲ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದ ಅವರು ಮೂರನೇ ಸೀಸನ್​ಗೆ ಮರಳಿದ್ದಾರೆ. ಅವರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ‘ಪಂಚಾಯತ್’ ಜೊತೆ ಅವರು ‘ಮಿರ್ಜಾಪುರ್​’ ಸೀರಿಸ್​ನಲ್ಲಿ, ‘ಪಾತಾಳ್ ಲೋಕ್​’ನಲ್ಲಿ ಅವರು ನಟಿಸಿದ್ದಾರೆ. ಅವರು ಇತ್ತೀಚೆಗೆ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ.

ಆಸಿಫ್ ಜನಿಸಿದ್ದು ರಾಜಸ್ಥಾನದಲ್ಲಿ. ನಂತರ ಮುಂಬೈಗೆ ಬಂದರು. ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮದುವೆ ನಡೆಯುತ್ತಿದ್ದ ಹೋಟೆಲ್​ನಲ್ಲಿ ಆಸಿಫ್ ಅವರು ಕೆಲಸ ಮಾಡುತ್ತಿದ್ದರು. ಆ ದಿನ ಅವರು ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದರು. ಈ ವೇಳೆ ಸೆಲೆಬ್ರಿಟಿಗಳನ್ನು ಒಮ್ಮೆ ನೋಡಿ ಬರುವುದಾಗಿ ಮ್ಯಾನೇಜರ್ ಬಳಿ ಒಪ್ಪಿಗೆ ಕೇಳಿದರು. ಆದರೆ, ಮ್ಯಾನೇಜರ್ ಇದಕ್ಕೆ ಒಪ್ಪಿಗೆ ಕೊಟ್ಟಿಲ್ಲ. ಸೆಲೆಬ್ರಿಟಿಗಳು ಅಷ್ಟು ಹತ್ತಿರ ಬಂದರೂ ಅವರನ್ನು ಭೇಟಿ ಮಾಡೋಕೆ ಅವಕಾಶ ಸಿಗಲಿಲ್ಲವಲ್ಲ ಎಂದು ಸಾಕಷ್ಟು ಅತ್ತಿದ್ದರು.

ಈ ಘಟನೆ ಬಳಿಕ ಆಸಿಫ್ ಅವರು ಬಾಲಿವುಡ್ ಕನಸು ಕಂಡರು. ಒಂದು ತಿಂಗಳು ಸುತ್ತಾಡಿದ ಬಳಿಕ ಅವರಿಗೆ ಒಂದು ಕಾಸ್ಟಿಂಗ್ ಏಜೆನ್ಸಿಯ ವಿಳಾಸ ಸಿಕ್ಕಿತು. ಅವರನ್ನು ಆಸಿಫ್ ಸಂಪರ್ಕಿಸಿದರು. ‘ನಾನು ಇದ್ದಿದ್ದನ್ನು ಹೇಳುತ್ತೇನೆ. ಇದನ್ನು ವೈಯಕ್ತಿಕವಾಗಿ ಸ್ವೀಕರಿಸಿಬೇಡಿ. ನೀವು ನೋಡಲು ಚೆನ್ನಾಗಿಲ್ಲ, ಅಟ್ರ್ಯಾಕ್ಟಿವ್ ಎಂದು ಕೂಡ ಅನಿಸುವುದಿಲ್ಲ. ಹೀಗಿರುವಾಗ ನಿಮಗೇಕೆ ಚಾನ್ಸ್ ನೀಡಬೇಕು. ಮೊದಲು ನಟನೆ ಕಲಿಯಿರಿ’ ಎಂದು ಕಾಸ್ಟಿಂಗ್ ಏಜೆನ್ಸಿಯವರು ಕಿವಿ ಮಾತು ಹೇಳಿದ್ದರು.

ಇದನ್ನೂ ಓದಿ: ‘ಪಂಚಾಯತ್​’ ವೆಬ್​ ಸೀರಿಸ್​ಗೆ ಕಥೆ ಬರೆದಿದ್ದಕ್ಕೆ ಸಿಕ್ಕಿದ್ದು ಬರೋಬ್ಬರಿ 5 ಕೋಟಿ ರೂಪಾಯಿ?

ಆ ಬಳಿಕ ಆಸಿಫ್ ರಾಜಸ್ಥಾನಕ್ಕೆ ಮರಳಿದರು. ಅವರು ರಂಗಭೂಮಿ ಕಲಾವಿದರ ಜೊತೆ ಸೇರಿದರು. ಇರ್ಫಾನ್ ಖಾನ್ ಸೇರಿ ಅನೇಕರು ಇಲ್ಲಿಯೇ ಕಲಿತಿದ್ದರು. ಕಳೆದ ಆರು ವರ್ಷಗಳಿಂದ ಅವರು ಇಲ್ಲಿ ನಟನಾ ತರಬೇತಿ ಪಡೆದರು. ಆ ಬಳಿಕ ಮುಂಬೈಗೆ ಬಂದು ಸಿನಿಮಾ ಆಫರ್ ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:52 am, Wed, 12 June 24

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ