AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನತಾರಾಗಾಗಿ ನೆಟ್​ಫ್ಲಿಕ್ಸ್​ಗೆ ಬಂದ ಉಪೇಂದ್ರ

ಒಟಿಟಿಗಳು ಕನ್ನಡ ಸಿನಿಮಾಗಳನ್ನು ಖರೀದಿಸುತ್ತಿಲ್ಲ, ನೆಟ್​ಫ್ಲಿಕ್ಸ್​ ಅಂತೂ ಕನ್ನಡ ಸಿನಿಮಾಗಳತ್ತ ತಿರುಗಿಯೂ ನೋಡುತ್ತಿಲ್ಲ. ಇಂಥಹಾ ಸಮಯದಲ್ಲಿ ಉಪೇಂದ್ರ ಹಠಾತ್ತನೆ ನೆಟ್​ಫ್ಲಿಕ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ನಯನತಾರಾಗಾಗಿ.

ನಯನತಾರಾಗಾಗಿ ನೆಟ್​ಫ್ಲಿಕ್ಸ್​ಗೆ ಬಂದ ಉಪೇಂದ್ರ
ಮಂಜುನಾಥ ಸಿ.
|

Updated on: Nov 09, 2024 | 7:06 PM

Share

ಕನ್ನಡ ಸಿನಿಮಾಗಳನ್ನು ಒಟಿಟಿಗಳು ಖರೀದಿ ಮಾಡುತ್ತಿಲ್ಲ ಎಂಬ ಆರೋಪ ದೊಡ್ಡಮಟ್ಟದಲ್ಲಿದೆ. ಅಮೆಜಾನ್ ಪ್ರೈಂ, ಜೀ 5 ಆಗೊಂದು ಈಗೊಂದು ಕನ್ನಡ ಸಿನಿಮಾಗಳನ್ನು ಖರೀದಿ ಮಾಡುತ್ತಿವೆ. ವಿಶ್ವದ ಟಾಪ್ ಒಟಿಟಿ ಎನ್ನಲಾಗುವ ನೆಟ್​ಫ್ಲಿಕ್ಸ್​ ಅಂತೂ ಕನ್ನಡ ಸಿನಿಮಾಗಳ ಕಡೆಗೆ ಕಣ್ಣೋಟವನ್ನೂ ಬೀರುತ್ತಿಲ್ಲ. ‘ಯೂ ಟರ್ನ್’, ‘ಕಾಂತಾರ’ರ ಹೊರತಾಗಿ ಕನ್ನಡದ ಇನ್ಯಾವುದೇ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಇಲ್ಲ. ಪರಿಸ್ಥಿತಿ ಹೀಗಿರುವಾಗ ನಟ ಉಪೇಂದ್ರ ಹಠಾತ್ತನೆ ನೆಟ್​ಫ್ಲಿಕ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ನಟಿ ನಯನತಾರಾಗಾಗಿ.

ಉಪೇಂದ್ರ ನೆಟ್​ಫ್ಲಿಕ್ಸ್​ನ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆಶ್ಚರ್ಯಗೊಳ್ಳಬೇಕಿಲ್ಲ. ಉಪೇಂದ್ರ ಕಾಣಿಸಿಕೊಂಡಿರುವುದು ಡಾಕ್ಯುಮೆಂಟರಿಯಲ್ಲಿ. ನೆಟ್​ಫ್ಲಿಕ್ಸ್​, ನಟಿ ನಯನತಾರಾ ಬಗ್ಗೆ ಡಾಕ್ಯುಮೆಂಟರಿ ನಿರ್ಮಾಣ ಮಾಡಿದ್ದು, ಕೆಲವೇ ದಿನಗಳಲ್ಲಿ ಈ ಡಾಕ್ಯುಮೆಂಟರಿ ಬಿಡುಗಡೆ ಆಗಲಿದೆ. ಈ ಡಾಕ್ಯುಮೆಂಟರಿಯಲ್ಲಿ ಉಪೇಂದ್ರ ಸಹ ಇದ್ದಾರೆ. ನಯನತಾರಾ ಬಗ್ಗೆ ಉಪೇಂದ್ರ ಕೆಲ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಪ್ರೋಮೋನಲ್ಲಿ ಮೊದಲಿಗೆ ಉಪೇಂದ್ರ ಅವರೇ ಕಾಣಿಸಿಕೊಳ್ಳುತ್ತಾರೆ.

ನಯನತಾರಾ ಡಾಕ್ಯುಮೆಂಟರಿಯಲ್ಲಿ ಹಲವು ಸ್ಟಾರ್ ನಟ, ನಟಿಯರು ಮತ್ತು ನಿರ್ದೇಶಕರುಗಳು ನಯನತಾರಾ ಬಗ್ಗೆ ಮಾತನಾಡಿದ್ದಾರೆ. ಉಪೇಂದ್ರ ಅವರು, ‘ನಯನತಾರಾ ಅನ್ನು ಲೇಡಿ ಸೂಪರ್ ಸ್ಟಾರ್’ ಎಂದು ಕರೆಯುತ್ತಾರೆ ಎಂದು ಕೊಂಡಾಡಿದ್ದರೆ. ನಟ ಅಕ್ಕಿನೇನಿ ನಾಗಾರ್ಜುನ, ‘ಆಕೆ ವೈಯಕ್ತಿಕ ಜೀವನದಲ್ಲಿ ಕಷ್ಟದಲ್ಲಿದ್ದಾಗೂ ವೃತ್ತಿಧರ್ಮ ಮರೆತಿಲ್ಲ’ ಎಂದಿದ್ದಾರೆ. ಹಲವು ನಟ, ನಟಿಯರು ನಯನತಾರಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಶಿವಣ್ಣ-ಉಪೇಂದ್ರ ಮುಂದೆ ಕರಾಟೆ ಪ್ರದರ್ಶಿಸಿದ ರಾಜ್ ಬಿ ಶೆಟ್ಟಿ

ನಯನತಾರಾ ಹಾಗೂ ಉಪೇಂದ್ರ ಅವರುಗಳು ಒಟ್ಟಿಗೆ ಸಿನಿಮಾ ಒಂದರಲ್ಲಿ ನಟಿಸಿದ್ದರು. ಇಬ್ಬರು ಸ್ಟಾರ್​ಗಳು, ‘ಸೂಪರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಸಿನಿಮಾ ಅನ್ನು ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು. ಸಿನಿಮಾದ ಶೂಟಿಂಗ್ ಸಮಯದಲ್ಲಿ ನಯನತಾರಾ ತಮಗೆ ಸಾಕಷ್ಟು ಸಹಾಯ ಮಾಡಿದರು ಎಂದು ಉಪೇಂದ್ರ ಆಗ ಹೇಳಿಕೊಂಡಿದ್ದರು. ರಾಕ್​ಲೈನ್ ವೆಂಕಟೇಶ್ ಸಹ ನಯನತಾರಾಗೆ ಆಗ ಧನ್ಯವಾದ ಹೇಳಿದ್ದರು.

ನಯನತಾರಾ ಹುಟ್ಟುಹಬ್ಬದಂದು ನೆಟ್​ಫ್ಲಿಕ್ಸ್​ನಲ್ಲಿ ಡಾಕ್ಯುಮೆಂಟರಿ ಬಿಡುಗಡೆ ಆಗಲಿದೆ. ನವೆಂಬರ್ 18 ರಂದು ಡಾಕ್ಯುಮೆಂಟರಿ ಬಿಡುಗಡೆ ಆಗಲಿದ್ದು, ಡಾಕ್ಯುಮೆಂಟರಿಯಲ್ಲಿ ಉಪೇಂದ್ರ, ನಾಗಾರ್ಜುನ, ನಿರ್ದೇಶಕ ಅಟ್ಟಿಲಿ, ಯೋಗಿ ಬಾಬು, ಬಾಲಿವುಡ್ ನಟಿ ತಾಪ್ಸಿ ಪನ್ನು, ರಾಣಾ ದಗ್ಗುಬಾಟಿ, ನಿರ್ದೇಶಕ ನೆಲ್ಸನ್ ಇನ್ನೂ ಹಲವರು ಡಾಕ್ಯುಮೆಂಟರಿಯಲ್ಲಿ ನಯನತಾರಾ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು