ಎಲ್ಲೆಲ್ಲೂ ನವರಾತ್ರಿ ಹಬ್ಬದ ಸಂಭ್ರಮ. 9 ದಿನಗಳ ಕಾಲ ದೇವಿಯನ್ನು ಆರಾಧಿಸುವ ಕಾರ್ಯ ನಡೆಯುತ್ತಿದೆ. ಅದೇ ರೀತಿ ಪಾಟ್ನಾದ ಮಾಡೆಲ್ ಒಬ್ಬರು ಪೂಜೆ ಮುಗಿಸಿ ಮನೆಗೆ ಬರುತ್ತಿದ್ದಾಗ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಒಳಗಾಗಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ದಾಳಿಯ ಹಿಂದಿನ ಕಾರಣ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ.
36 ವರ್ಷದ ಮಾಡೆಲ್ ಅನಿತಾ ದೇವಿ ದಾಳಿಗೆ ಒಳಗಾದವರು. ಪಾಟ್ನಾದ ಬಸಂತ್ ನಗರದಲ್ಲಿ ಇವರು ವಾಸವಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ಅವರು ರಾತ್ರಿ 10 ಗಂಟೆ ಸುಮಾರಿಗೆ ದೇವಸ್ಥಾನದಿಂದ ಮಗಳ ಜತೆ ಆಗಮಿಸುತ್ತಿದ್ದರು. ಆಗ ಇವರ ಮೇಲೆ ದಾಳಿ ನಡೆದಿದೆ. ನಂತರ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಆಗಿದ್ದೇನು?
ಅನಿತಾ ಅವರು ಬೈಕ್ ತಂದು ಮನೆ ಒಳಗೆ ಇಡುತ್ತಿದ್ದರು. ಮನೆಯ ಗೇಟ್ ತೆಗೆದೇ ಇತ್ತು. ಈ ವೇಳೆ ಎರಡು ಬೈಕ್ನಲ್ಲಿ ಬಂದ ನಾಲ್ವರು ಗುಂಡಿನ ದಾಳಿ ನಡೆಸಿದ್ದಾರೆ. ಗನ್ನಿಂದ ಹಾರಿದ ಬುಲೆಟ್ ಅನಿತಾ ಅವರ ಸೊಂಟಕ್ಕೆ ತಾಗಿದೆ. ಈ ವೇಳೆ ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಬುಲೆಟ್ ಶಬ್ದ ಕೇಳಿ ನೆರೆಹೊರೆಯವರು ಅನಿತಾ ಸಹಾಯಕ್ಕೆ ಬಂದಿದ್ದಾರೆ. ಈ ವೇಳೆ ಬೈಕ್ನಲ್ಲಿ ಬಂದ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಮೂಲಕ ಅವರು ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ.
A #Patna-based model was shot and injured by unidentified assailants right outside her home, police said on Wednesday.
She sustained a gunshot injury in her hip and is under treatment in a private hospital. pic.twitter.com/bd3dRcnb0L
— IANS Tweets (@ians_india) October 13, 2021
ಸದ್ಯ, ಅನಿತಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪಾಟ್ನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ದಾಳಿ ಹಿಂದಿನ ಉದ್ದೇಶ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ದ್ವೇಷದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಪ್ರೆಗಾ ನ್ಯೂಸ್ ಹಿಡಿದು ಪೋಸ್ ನೀಡಿದ ಕಾಜಲ್; ಏನಿದು ಹೊಸ ಸುದ್ದಿ?
ಆರ್ಯನ್ ಖಾನ್ಗೆ ಮತ್ತೆ ನಿರಾಸೆ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ