AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್-ಅನ್ನಾ ಲೆಜ್ನೆವಾ ವಿಚ್ಛೇದನದ ಬೆನ್ನಲ್ಲೇ ಮಾಜಿ ಪತ್ನಿ ರೇಣು ದೇಸಾಯಿ ಮಾರ್ಮಿಕ ಪೋಸ್ಟ್ ವೈರಲ್

ರೇಣು ದೇಸಾಯಿ ಅವರು ಪವನ್ ಕಲ್ಯಾಣ್ ಅವರ ಎರಡನೇ ಪತ್ನಿಯಾಗಿದ್ದರು. ಈ ಜೋಡಿ 2009ರ ಜನವರಿಯಲ್ಲಿ ಮದುವೆಯಾಗಿದ್ದರು. ಆದರೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ 2012ರಲ್ಲಿ ಇಬ್ಬರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಈಗ ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಬೇರೆಯಾಗುತ್ತಿರುವ ಈ ಸಂದರ್ಭದಲ್ಲಿ ರೇಣು ದೇಸಾಯಿ ಹಂಚಿಕೊಂಡಿರುವ ಪೋಸ್ಟ್ ಗಮನ ಸೆಳೆದಿದೆ.

ಪವನ್ ಕಲ್ಯಾಣ್-ಅನ್ನಾ ಲೆಜ್ನೆವಾ ವಿಚ್ಛೇದನದ ಬೆನ್ನಲ್ಲೇ ಮಾಜಿ ಪತ್ನಿ ರೇಣು ದೇಸಾಯಿ ಮಾರ್ಮಿಕ ಪೋಸ್ಟ್ ವೈರಲ್
Renu DesaiImage Credit source: Instagram/renuudesai
ಮದನ್​ ಕುಮಾರ್​
|

Updated on: Nov 11, 2026 | 4:31 PM

Share

ಟಾಲಿವುಡ್ ನಟ ಹಾಗೂ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮ್ಮ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರೊಂದಿಗೆ ವಿಚ್ಛೇದನ ಪಡೆದುಕೊಳ್ಳುತ್ತಿರುವುದಾಗಿ ಘೋಷಿಸಿದ ಬಳಿಕ, ಅವರ 2ನೇ ಮಾಜಿ ಪತ್ನಿ ಹಾಗೂ ನಟಿ ರೇಣು ದೇಸಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾರ್ಮಿಕ ಸಂದೇಶವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ರಷ್ಯನ್ ಮೂಲದ ಅನ್ನಾ ಲೆಜ್ನೆವಾ ಅವರು ತಮ್ಮ 13 ವರ್ಷಗಳ ದಾಂಪತ್ಯ ಜೀವನವನ್ನು ಪರಸ್ಪರ ಸಮ್ಮತಿಯೊಂದಿಗೆ ಕೊನೆಗೊಳಿಸುತ್ತಿರುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದರು. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ರೇಣು ದೇಸಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಮಾನವೀಯತೆ ಮತ್ತು ಸಹಾನುಭೂತಿಯ ಬಗ್ಗೆ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಯಾರ ಹೆಸರನ್ನೂ ಉಲ್ಲೇಖಿಸದೆ ಪೋಸ್ಟ್ ಮಾಡಿರುವ ರೇಣು ದೇಸಾಯಿ, ‘ಇನ್ನೊಬ್ಬರು ಈಗಾಗಲೇ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಅವರನ್ನು ಮತ್ತಷ್ಟು ಟೀಕಿಸುವುದು ನೈತಿಕವಾಗಿ ಸರಿಯಲ್ಲ. ಈಗಾಗಲೇ ಕುಸಿದು ಬಿದ್ದಿರುವವರನ್ನು ತುಳಿಯುವುದು ಅಮಾನವೀಯ. ಅವರ ಸ್ಥಾನಮಾನ ಏನೇ ಇರಲಿ, ಅವರೂ ಒಬ್ಬ ಮನುಷ್ಯ, ಯಾರದ್ದೋ ಮಗು, ಯಾರದ್ದೋ ಪೋಷಕರು ಅಥವಾ ಸಹೋದರ-ಸಹೋದರಿ ಎಂಬುದನ್ನು ನಾವು ಎಂದಿಗೂ ಮರೆಯಬಾರದು’ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by renu desai (@renuudesai)

ಸೋಷಿಯಲ್ ಮೀಡಿಯಾ ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿರುವ ಅವರು, ‘ನಾವು ಗಾಜಿನ ಮನೆಯಲ್ಲಿ ಕುಳಿತು ಇತರರ ಮನೆಗೆ ಕಲ್ಲು ತೂರುವುದು ಬೇಡ. ನಾವೆಲ್ಲರೂ ಮನುಷ್ಯರು, ಮನುಷ್ಯತ್ವಕ್ಕೆ ಇರಬೇಕಾದ ಮೊದಲ ಮೂಲಭೂತ ಅರ್ಹತೆಯೇ ಸಹಾನುಭೂತಿ ಮತ್ತು ದಯೆ’ ಎಂದಿದ್ದಾರೆ.

ಇದನ್ನೂ ಓದಿ: ಮೂರು ಮದುವೆ ಆಗಿದ್ದೇಕೆ? ಸ್ಪಷ್ಟನೆ ಕೊಟ್ಟಿದ್ದ ಪವನ್ ಕಲ್ಯಾಣ್

ತಮ್ಮ ಪೋಸ್ಟ್‌ನ ಕೊನೆಯಲ್ಲಿ ಅನಗತ್ಯ ಊಹಾಪೋಹಗಳಿಗೆ ತೆರೆ ಎಳೆಯುವ ಯತ್ನ ಮಾಡಿರುವ ರೇಣು, ‘ಈ ಮಾತುಗಳನ್ನು ಬರೆದಿದ್ದೇನೆ ಎಂದ ತಕ್ಷಣ ನಿಮ್ಮ ಮೂರ್ಖತನದ ಊಹಾಪೋಹಗಳನ್ನು ಪ್ರಾರಂಭಿಸಬೇಡಿ. ಸಮಾಜವಾಗಿ ನಾವು ಇನ್ನಷ್ಟು ಉತ್ತಮವಾಗಿ ನಡೆದುಕೊಳ್ಳಬಹುದು ಎಂಬ ಭರವಸೆ ನನಗಿದೆ. ದಯೆ ಮತ್ತು ವಿವೇಚನೆಯಿಂದ ಮಾತನಾಡಲು ನನಗೇನೂ ಹಣ ಸಿಕ್ಕಿಲ್ಲ. ಸರಿ-ತಪ್ಪುಗಳನ್ನು ಸರಿಯಾಗಿ ಯೋಚಿಸುವ ಬುದ್ಧಿ ನನಗಿದೆ ಅಷ್ಟೇ’ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್
ಈ ವರ್ಷ ಪಟಾಕಿ ಅವಘಡಗಳಿಂದ ಹೆಚ್ಚು ಮಂದಿಗೆ ಗಾಯ: ವೈದ್ಯರಿಂದ ಮಾಹಿತಿ
ಈ ವರ್ಷ ಪಟಾಕಿ ಅವಘಡಗಳಿಂದ ಹೆಚ್ಚು ಮಂದಿಗೆ ಗಾಯ: ವೈದ್ಯರಿಂದ ಮಾಹಿತಿ
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
ಮಂತ್ರಘೋಷಗಳು ಮೊಳಗುತ್ತಿದ್ದಂತೆ ತೆರೆದುಕೊಳ್ಳುವ ದೇಗುಲದ ಗರ್ಭಗುಡಿ ಬಾಗಿಲು!
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?