Pawan kalyan: ಪವನ್ ಕಲ್ಯಾಣ್ ಜೊತೆ ಶ್ರೀರೆಡ್ಡಿ ಫೋಟೋ ವೈರಲ್; ಇದು ಅಸಲಿಯೋ ನಕಲಿಯೋ?
Sri Reddy: ಕೊವಿಡ್ ಸೋಂಕಿತರಾಗಿರುವ ಪವನ್ ಅವರನ್ನು ಸದ್ಯ ಶ್ರೀರೆಡ್ಡಿ ನೋಡಿಕೊಳ್ಳುತ್ತಿದ್ದಾರಂತೆ! ಅದಕ್ಕೆ ಸಾಕ್ಷಿ ಎಂಬಂತೆ ಅವರು ಫೇಸ್ಬುಕ್ನಲ್ಲಿ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಟಾಲಿವುಡ್ನ ಸ್ಟಾರ್ ನಟ ಪವನ್ ಕಲ್ಯಾಣ್ ಅವರಿಗೆ ಕೊರೊನಾ ವೈರಸ್ ತಗುಲಿರುವುದು ಧೃಡವಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪವನ್ ಬಗ್ಗೆ ಬೇರೆ ಬೇರೆ ರೀತಿಯ ಕೀಟಲೆಗಳನ್ನು ಮಾಡಲಾಗುತ್ತಿದೆ. ಪವನ್ ಕಲ್ಯಾಣ್ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವುದೇ ಫೇಕ್ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದರು. ಅದರ ಬೆನ್ನಲ್ಲೇ ನಟಿ ಶ್ರೀರೆಡ್ಡಿ ಇನ್ನೊಂದು ವಿಚಾರಕ್ಕೆ ಪವನ್ ಕಲ್ಯಾಣ್ ಅವರನ್ನು ಎಳೆದು ತಂದಿದ್ದಾರೆ.
ಕೊವಿಡ್ ಸೋಂಕಿತರಾಗಿರುವ ಪವನ್ ಅವರನ್ನು ಸದ್ಯ ಶ್ರೀರೆಡ್ಡಿ ನೋಡಿಕೊಳ್ಳುತ್ತಿದ್ದಾರಂತೆ! ಅದಕ್ಕೆ ಸಾಕ್ಷಿ ಎಂಬಂತೆ ಅವರು ಫೇಸ್ಬುಕ್ನಲ್ಲಿ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಪವನ್ ಮಲಗಿರುವ ಬೆಡ್ ಪಕ್ಕದಲ್ಲೇ ಶ್ರೀರೆಡ್ಡಿ ಕುಳಿತುಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ಅಸಲಿಯೋ ನಕಲಿಯೋ ಎಂಬ ಬಗ್ಗೆ ಈಗ ಚರ್ಚೆ ಶುರುವಾಗಿದೆ.
‘ಪವನ್ ಕಲ್ಯಾಣ್ ಅವರನ್ನು ನೋಡಿಕೊಳ್ಳುವ ಈ ಕೆಲಸವನ್ನು ರಾಮ್ ಗೋಪಾಲ್ ವರ್ಮಾ ನನಗೆ ನೀಡಿದ್ದಾರೆ. ನಾನು ಇವರ ಸೇವೆ ಮಾಡುತ್ತೇನೆ’ ಎಂದು ಆ ಫೋಟೋ ಜೊತೆ ಶ್ರೀರೆಡ್ಡಿ ಬರೆದುಕೊಂಡಿದ್ದಾರೆ. ಸರಿಯಾಗಿ ಗಮನಿಸಿದರೆ ಇದು ಫೇಕ್ ಫೋಟೋ ಎಂಬುದು ಗೊತ್ತಾಗುತ್ತದೆ. ಪವನ್ ಕಲ್ಯಾಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಎಡಿಟ್ ಮಾಡಲಾಗಿದೆ. ಅದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಶ್ರೀರೆಡ್ಡಿ ಇಷ್ಟಕ್ಕೇ ಸುಮ್ಮನಾಗಿಲ್ಲ. ಇನ್ನೊಂದು ವಿಡಿಯೋ ಕೂಡ ಮಾಡಿದ್ದಾರೆ. ಅದರಲ್ಲಿ ಏನೇನೋ ಕಥೆ ಕಟ್ಟಿ ಹೇಳಿದ್ದಾರೆ. ಒಟ್ಟಿನಲ್ಲಿ ಪವನ್ ಕಲ್ಯಾಣ್ ಅವರ ಅನಾರೋಗ್ಯವನ್ನು ಹಾಸ್ಯದ ವಿಷಯವಾಗಿ ಅವರು ಪರಿಗಣಿಸಿದ್ದಾರೆ. ಇದು ಪವನ್ ಕಲ್ಯಾಣ್ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಅಂದಹಾಗೆ, ಶ್ರೀರೆಡ್ಡಿ ಈ ರೀತಿ ವಿಲಕ್ಷಣವಾಗಿ ಗಮನ ಸೆಳೆಯುತ್ತಿರುವುದು ಇದೇ ಮೊದಲೇನಲ್ಲ. ಆಗಾಗ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಚಿತ್ರವಾದ ಪೋಸ್ಟ್ಗಳನ್ನು ಹಾಕುತ್ತಿರುತ್ತಾರೆ.
ಪವನ್ ಕಲ್ಯಾಣ್ ಅವರಿಗೆ ಕೊವಿಡ್ ಬಂದಿರುವುದನ್ನು ಶುಕ್ರವಾರ (ಏ.16) ಜನಸೇನಾ ಪಾರ್ಟಿ ಖಚಿತಗೊಳಸಿತ್ತು. ತಿರುಪತಿಯಲ್ಲಿ ಚುನಾವಣಾ ಪ್ರಚಾರ ಮುಗಿಸಿ ಬಂದ ಬಳಿಕ ಪವನ್ ಆರೋಗ್ಯದಲ್ಲಿ ಏರುಪೇರಾಯಿತು. ‘ನನ್ನ ಆರೋಗ್ಯ ಸ್ಥಿರವಾಗಿದೆ. ನಾನು ಚೆನ್ನಾಗಿದ್ದೇನೆ. ಇದನ್ನು ಎದುರಿಸಿ ಆದಷ್ಟು ಬೇಗ ಗುಣಮುಖನಾಗುತ್ತೇನೆ’ ಎಂದು ಪವನ್ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಪವನ್ ಕಲ್ಯಾಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಫೇಕ್
ಪವನ್ ಕಲ್ಯಾಣ್ ಭವಿಷ್ಯದ ಬಗ್ಗೆ ಶಾಕಿಂಗ್ ವಿಚಾರ ಬಹಿರಂಗಪಡಿಸಿದ ಜ್ಯೋತಿಷಿಗಳು