ಸರ್ಕಾರಕ್ಕೆ ಹಣದ ಕೊರತೆ: ಸಂಬಳ, ಕಾರು ನಿರಾಕರಿಸಿದ ಡಿಸಿಎಂ ಪವನ್ ಕಲ್ಯಾಣ್

ಸರ್ಕಾರದಿಂದ ಬರುವ ಸಂಬಳದ ಒಂದು ರೂಪಾಯಿಯನ್ನು ಬಿಡುವುದಿಲ್ಲ ಎಂದು ಹೇಳಿದ್ದ ಪವನ್ ಕಲ್ಯಾಣ್, ಈಗ ಮನಸ್ಸು ಬದಲಾಯಿಸಿದ್ದಾರೆ. ತಮ್ಮ ಪಂಚಾಯತ್ ರಾಜ್ ಖಾತೆ ಇಲಾಖೆಗೆ ಹಣಕಾಸಿನ ಕೊರತೆ ಇರುವ ಕಾರಣ ಕಚೇರಿ ನವೀಕರಣ, ಸಂಬಳವನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.

ಸರ್ಕಾರಕ್ಕೆ ಹಣದ ಕೊರತೆ: ಸಂಬಳ, ಕಾರು ನಿರಾಕರಿಸಿದ ಡಿಸಿಎಂ ಪವನ್ ಕಲ್ಯಾಣ್
ಪವನ್ ಕಲ್ಯಾಣ್
Follow us
|

Updated on: Jul 02, 2024 | 3:47 PM

ಆಂಧ್ರ ಪ್ರದೇಶದಲ್ಲಿ ಹೊಸ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಟ ಪವನ್ ಕಲ್ಯಾಣ್ ವಿರೋಚಿತ ಗೆಲುವು ಕಂಡು ಮೊಟ್ಟ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಮೊದಲ ಬಾರಿಯ ಗೆಲುವಿನಿಂದಲೇ ಆಂಧ್ರ ಪ್ರದೇಶ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜೊತೆಗೆ ಹಲವು ಪ್ರಮುಖ ಖಾತೆಗಳ ಮಂತ್ರಿಯೂ ಆಗಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಪವನ್ ಕಲ್ಯಾಣ್ ಪ್ರಮುಖ ನಿರ್ಧಾರ ಪ್ರಕಟಿಸಿದ್ದು, ಮುಂದಿನ ಐದು ವರ್ಷಗಳ ಕಾಲ ತಾವು ಉಪ ಮುಖ್ಯಮಂತ್ರಿಯಾಗಿ ಸಂಬಳ ಸ್ವೀಕರಿಸುವುದಿಲ್ಲ ಮತ್ತು ಸರ್ಕಾರದ ಯಾವುದೇ ಸಂಪನ್ಮೂಲಗಳನ್ನು ಬಳಸುವುದಿಲ್ಲ ಎಂದಿದ್ದಾರೆ.

ಆಂಧ್ರ ರಾಜ್ಯಕ್ಕೆ ವಿತ್ತಿಯ ಕೊರತೆ ಎದುರಾಗಿದ್ದು, ಹೊಸ ಯೋಜನೆಗಳಿಗೆ ಹಣಕಾಸು ಕೊರತೆ ಇದೆ. ಇಂಥಹಾ ಸಮಯದಲ್ಲಿ ತಾವು ಸಂಬಳ ಇನ್ನಿತರೆ ಸಂಪನ್ಮೂಲಗಳನ್ನು ಪಡೆಯುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಪವನ್ ಕಲ್ಯಾಣ್ ಈ ನಿರ್ಣಯ ಮಾಡಿದ್ದಾರೆ. ಅಧಿಕಾರದಲ್ಲಿ ಇರುವವರೆಗೂ ಸಂಬಳ ಪಡೆಯುವುದಿಲ್ಲ ಅಲ್ಲದೆ ಸರ್ಕಾರಿ ಕಾರು ಬಳಸುವುದಿಲ್ಲ, ಕಚೇರಿಗೆ ಹೆಚ್ಚುವರಿ ಪೀಠೋಪಕರಣಗಳು ಇನ್ನಿತರೆ ವಸ್ತುಗಳು ಬೇಕೆಂದರೂ ಸಹ ಅವನ್ನು ತಮ್ಮದೇ ಸ್ವಂತ ಖರ್ಚಿನಲ್ಲಿ ಹಾಕಿಸಿಕೊಳ್ಳುವುದಾಗಿ ನಟ, ಡಿಸಿಎಂ ಪವನ್ ಕಲ್ಯಾಣ್ ಘೋಷಿಸಿದ್ದಾರೆ.

‘ಅಧಿಕಾರಿಗಳು ಕಚೇರಿಯ ನವೀಕರಣ ಮತ್ತು ಹೊಸ ಪೀಠೋಪಕರಣಗಳು ಯಾವುವು ಬೇಕು ಎಂದು ಕೇಳಿದರು. ಯಾವುದೂ ಸಹ ಬೇಡ ಈಗ ಕಚೇರಿ ಹೇಗಿದೆಯೋ ಹಾಗೆಯೇ ಇರಲು ಬಿಡಿ, ಯಾವ ಹೊಸ ಪೀಠೋಪಕರಣವನ್ನೂ ಸಹ ಖರೀದಿಸಬೇಡಿ, ಹಾಗೇನಾದರೂ ಹೊಸ ಪೀಠೋಪಕರಣ ಅಥವಾ ಇನ್ಯಾವುದೇ ವಸ್ತು ಬೇಕಿದ್ದರೆ ನಾನೇ ನನ್ನ ಹಣದಿಂದ ಖರೀದಿ ಮಾಡುವೆ’ ಎಂದಿದ್ದಾರೆ.

ಇದನ್ನೂ ಓದಿ:ವಾರಾಹಿ ದೀಕ್ಷೆ ಪಡೆದ ಪವನ್ ಕಲ್ಯಾಣ್, ಪಾಲಿಸಲಿದ್ದಾರೆ ಕಟ್ಟುನಿಟ್ಟಿನ ನಿಯಮ

ಅಲ್ಲದೆ, ಮೂರು ದಿನಗಳ ಕಾಲ ವಿಧಾನಸಭೆಯಲ್ಲಿ ಭಾಗವಹಿಸಿದ್ದಕ್ಕೆ 35,000 ಸಾವಿರ ಹಣ ಬಿಡುಗಡೆ ಆಗಿದ್ದು ಅದಕ್ಕೆ ಸಹಿಯನ್ನು ಪಡೆಯಲು ಬಂದರು. ತಾವು ಅದನ್ನೂ ಸಹ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ತಾವು ನಿರ್ಹವಿಸುತ್ತಿರುವ ಪಂಚಾಯತ್ ರಾಜ್ ಇಲಾಖೆಯಲ್ಲಿ ಹಣಕಾಸಿನ ಕೊರತೆ ಇದ್ದು, ಹೀಗಿರುವಾಗ ತಾವು ಸಂಬಳ ತೆಗೆದುಕೊಳ್ಳುವುದು, ಪೀಠೋಪಕರಣ, ಕಚೇರಿ ನವೀಕರಣಕ್ಕೆ ಹಣ ಖರ್ಚು ಮಾಡುವುದು ಸೂಕ್ತವಲ್ಲವೆಂದು ಈ ನಿರ್ಣಯ ಮಾಡಿರುವುದಾಗಿ ಹೇಳಿದ್ದಾರೆ.

ಆದರೆ ಈ ಹಿಂದೆ ಮಾತನಾಡಿದ್ದ ಪವನ್ ಕಲ್ಯಾಣ್, ಸರ್ಕಾರ ನೀಡುವ ಸಂಬಳವನ್ನು ಪಡೆದುಕೊಳ್ಳುವುದಾಗಿ ಹೇಳಿದ್ದರು. ಸರ್ಕಾರ ನೀಡುವ ಯಾವುದೇ ಸಂಬಳವನ್ನು ತಾವು ಬಿಡುವುದಿಲ್ಲ ಎಂದಿದ್ದರು. ಆದರೆ ಈಗ ಮನಸ್ಸು ಬದಲಿಸಿದ್ದಾರೆ. ಇಲಾಖೆ ಹಣದ ಕೊರತೆ ಎದುರಿಸುತ್ತಿರುವ ಕಾರಣಕ್ಕೆ ಪವನ್ ಕಲ್ಯಾಣ್ ಈ ನಿರ್ಧಾರ ಮಾಡಿದ್ದಾರೆ.

ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಕಳೆದ ಹತ್ತಕ್ಕಿಂತಲೂ ಹೆಚ್ಚು ವರ್ಷದಿಂದ ರಾಜಕೀಯದಲ್ಲಿದ್ದಾರೆ. ಆದರೆ ಅವರಿಗೆ ಚುನಾವಣಾ ಗೆಲುವು ದೊರಕಿರಲಿಲ್ಲ. ಆದರೆ ಈ ಬಾರಿ ಆಂಧ್ರದ ಜಗನ್ ಸರ್ಕಾರದ ವಿರುದ್ಧ ಸತತ ಹೋರಾಟ ಮಾಡಿದ ಪವನ್ ಕಲ್ಯಾಣ್, ಟಿಡಿಪಿ ಹಾಗೂ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಸ್ಪರ್ಧಿಸಿದ್ದರು, ಜನಸೇನಾ ಪಕ್ಷದ 21 ಅಭ್ಯರ್ಥಿಗಳು ಕಣಕ್ಕೆ ಇಳಿಸಿದ್ದು ಎಲ್ಲರೂ ಗೆಲುವು ಸಾಧಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ