AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್: ಆಗಿದ್ದ ಸಮಸ್ಯೆ ಏನು?

Pawan Kalyan movie: ಪವನ್ ಕಲ್ಯಾಣ್ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು, ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ವೈದ್ಯರ ಸಲಹೆಯಂತೆ ಕೆಲ ವಾರ ವಿಶ್ರಾಂತಿಯನ್ನೂ ಪಡೆದಿದ್ದರು. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮೊದಲ ಬಾರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಪವನ್ ಕಲ್ಯಾಣ್, ತಮಗಾಗಿದ್ದ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್: ಆಗಿದ್ದ ಸಮಸ್ಯೆ ಏನು?
Pawan Kalyan
ಮಂಜುನಾಥ ಸಿ.
|

Updated on: May 16, 2026 | 9:39 AM

Share

ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗಷ್ಟೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅವರ ಸಹೋದರ ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್ ಇನ್ನೂ ಹಲವರು ಟ್ವೀಟ್ ಮಾಡಿ ಶೀಘ್ರ ಗುಣಮುಖವಾಗುವಂತೆ ಕೋರಿದ್ದರು. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ವೈದ್ಯರ ಸಲಹೆಯಂತೆ ಕೆಲ ವಾರ ವಿಶ್ರಾಂತಿಯನ್ನೂ ಪಡೆದಿದ್ದರು. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮೊದಲ ಬಾರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಪವನ್ ಕಲ್ಯಾಣ್, ತಮಗಾಗಿದ್ದ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಜನಸೇನಾ ಪಕ್ಷದ ಸಭೆಯಲ್ಲಿ ಭಾಗಿ ಆಗಿದ್ದ ಪವನ್ ಕಲ್ಯಾಣ್, ತಮಗಾಗಿದ್ದ ಆರೋಗ್ಯ ಸಮಸ್ಯೆ ಬಗ್ಗೆ ವಿವರಿಸಿದರು. ‘ಕೋವಿಡ್ ಸಮಯದಲ್ಲಿ ನನಗೆ ಶ್ವಾಸಕೋಶದ ಸೋಂಕು ಆಗಿತ್ತು. ಅದು ಪೂರ್ಣವಾಗಿ ಗುಣವಾಗಿರಲಿಲ್ಲ. ಅದರ ಜೊತೆಗೆ ಚುನಾವಣೆಗೆ ಮುಂಚೆ ಸುಮಾರು ಒಂದೂವರೆ ವರ್ಷದ ಕಾಲ ದೂಳಿನಲ್ಲಿ ಓಡಾಟ, ವಿಶ್ರಾಂತಿ ಇಲ್ಲದ ಪ್ರಚಾರ ಇನ್ನಿತರೆಗಳಿಂದ ಆರೋಗ್ಯದಲ್ಲಿ ವ್ಯತ್ಯಾಸಗಳಾಗಿದ್ದವು’ ಎಂದರು.

‘ದೂಳಿನಲ್ಲಿ ಸಾಕಷ್ಟು ತಿರುಗಿ ಸೈನಸ್ ನಲ್ಲಿ ದೂಳು ಜಮೆಯಾಗಿ ಅಲ್ಲಿ ಗಟ್ಟಿಯಾಗಿಬಿಟ್ಟಿತ್ತು. ಇದರಿಂದ ಎಡಗಣ್ಣಿನ ಪಕ್ಕ ಪದೇ ಪದೇ ಊತ ಬರುತ್ತಿತ್ತು. ಒಂದು ಹಂತದಲ್ಲಂತೂ ಕಣ್ಣಿನ ದೃಷ್ಟಿ ಮಂದವಾಗಿತ್ತು, ಹಾಗೂ ಎಡಗಡೆ ಕಣ್ಣು ತಿರುಗಿಸಿದರೆ ಏನೂ ಕಾಣುತ್ತಲೇ ಇರಲಿಲ್ಲ. ಇದರ ಜೊತೆಗೆ ದೇಹದ ಕೆಲವೆಡೆ ಮಾಂಸಖಂಡಗಳು ಹರಿದಿವೆ, ಕೆಲ ಮೂಳೆಗಳಲ್ಲಿ ಬಿರುಕು ಮೂಡಿದೆ ಎಂಬುದು ಸಹ ಗೊತ್ತಾಯ್ತು’ ಎಂದಿದ್ದಾರೆ ಪವನ್.

ಇದನ್ನೂ ಓದಿ:ಚಿಕ್ಕಪ್ಪ ಪವನ್ ಕಲ್ಯಾಣ್ ದಾಖಲೆ ಮುರಿದ ರಾಮ್ ಚರಣ್

‘ನಾನು ಹೋದಲ್ಲೆಲ್ಲ ಅಭಿಮಾನಿಗಳು ಕೈ ಕುಲುಕುವುದು, ಕೈ ಕೊಟ್ಟರೆ ಎಳೆಯುವುದು ಮಾಡುತ್ತಾರೆ ಅದು ಅವರ ಪ್ರೀತಿ, ಆದರೆ ಅದರಿಂದ ನನಗೆ ಎರಡೂ ಭುಜಗಳಲ್ಲಿ ಮಾಂಸಖಂಡಗಳು ತುಸು ಹರಿದಿದ್ದು, ಮೂಳೆಗಳಲ್ಲಿ ಸಣ್ಣ ಬಿರುಕುಗಳು ಮೂಡಿವೆ. ಆದರೆ ಜೊತೆಗೆ ಕೆಲವು ಭಾಗಗಳಲ್ಲಿ ಅಸಹನೀಯ ನೋವು ಸಹ ಇತ್ತು. ಆದರೆ ನಾನು ಮೊದಲಿನಿಂದಲೂ ಮಾರ್ಷಲ್ ಆರ್ಟ್ಸ್ ತರಬೇತಿ, ವ್ಯಾಯಾಮಗಳನ್ನು ಮಾಡುತ್ತಿದ್ದರಿಂದ ದೇಹ ತಡೆದುಕೊಂಡಿದೆ’ ಎಂದು ಪವನ್ ಕಲ್ಯಾಣ್ ಹೇಳಿದರು.

ವೈದ್ಯರ ಹಾಗಾಗಿ ಎಲ್ಲ ಕಾರ್ಯಕ್ರಮವನ್ನು ರದ್ದು ಮಾಡಿ, ಚಿಕಿತ್ಸೆಗೆ ಒಳಗಾದೆ. ಈಗ ಸುಮಾರು ಒಂದು ತಿಂಗಳ ಬಳಿಕ ನಾನು ಇಲ್ಲಿಗೆ ಬಂದಿದ್ದೇನೆ. ಜನರ ಪ್ರೀತಿಯಿಂದ ಸಮಸ್ಯೆ ಆದರೆ ನನಗೆ ನೋವೆನಿಸುವುದಿಲ್ಲ ಏಕೆಂದರೆ ಆ ನೋವನ್ನು ಹೋಗಲಾಡಿಸುವುದು ಸಹ ಜನರೇ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಆರೋಗ್ಯ ಈಗ ಸಾಕಷ್ಟು ಸುಧಾರಿಸಿದ್ದು, ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿಯರಾಗಿರುವುದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇಂಡೋನೇಷ್ಯಾದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯದ ಮೂಲಕ ಸ್ವಾಗತ;ಮೋದಿ ಮೆಚ್ಚುಗೆ
ಇಂಡೋನೇಷ್ಯಾದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯದ ಮೂಲಕ ಸ್ವಾಗತ;ಮೋದಿ ಮೆಚ್ಚುಗೆ
ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ಯುವತಿ
ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ಯುವತಿ
ಇಂಡೋನೇಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಸರ್ಕಾರಿ ಗೌರವದ ಸ್ವಾಗತ
ಇಂಡೋನೇಷ್ಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಸರ್ಕಾರಿ ಗೌರವದ ಸ್ವಾಗತ
ಈ ತಿಂಗಳ ಅಂತ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ
ಈ ತಿಂಗಳ ಅಂತ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ
ಗುಂಪು ಸೇರಿಸಿ SIR ಮಾಡ್ತಿರುವ ಸ್ಥಳಕ್ಕೆ ಮಾಜಿ ಸಂಸದರ ಸಪ್ರೈಸ್​​ ಎಂಟ್ರಿ!
ಗುಂಪು ಸೇರಿಸಿ SIR ಮಾಡ್ತಿರುವ ಸ್ಥಳಕ್ಕೆ ಮಾಜಿ ಸಂಸದರ ಸಪ್ರೈಸ್​​ ಎಂಟ್ರಿ!
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​