AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಣ್ಣನ ಪವರ್​ಫುಲ್ ಕಣ್ಣಿನ ಬಗ್ಗೆ ನಟಿ ಜಾನ್ಹವಿ ಕಪೂರ್ ಹೇಳಿದ್ದೇನು?

Peddi Movie: ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಶಿವಣ್ಣನ ಜೊತೆಗೆ ರಾಮ್ ಚರಣ್, ಜಾನ್ಹವಿ ಕಪೂರ್ ಅವರುಗಳು ನಟಿಸಿದ್ದಾರೆ. ನಿನ್ನೆ ‘ಪೆದ್ದಿ’ ಚಿತ್ರತಂಡ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿತ್ತು. ಈ ವೇಳೆ ನಟಿ ಜಾನ್ಹವಿ ಕಪೂರ್ ಅವರು ಶಿವರಾಜ್ ಕುಮಾರ್ ಅವರ ಬಗ್ಗೆ ತಾವು ಗಮನಿಸಿದ ಅಂಶವನ್ನು ಹೇಳಿದ್ದಾರೆ.

ಶಿವಣ್ಣನ ಪವರ್​ಫುಲ್ ಕಣ್ಣಿನ ಬಗ್ಗೆ ನಟಿ ಜಾನ್ಹವಿ ಕಪೂರ್ ಹೇಳಿದ್ದೇನು?
Shivaraj Kumar Janhvi Kapoor
ಮಂಜುನಾಥ ಸಿ.
|

Updated on:May 26, 2026 | 11:03 AM

Share

ಶಿವರಾಜ್ ಕುಮಾರ್ (Shiva Rajkumar) ಕನ್ನಡ ಚಿತ್ರರಂಗದ ಹಿರಿಯ ನಟ. ಹಲವು ಯಂಗ್ ನಟರು, ನಟನೆ, ಫೈಟ್ಸ್, ಡ್ಯಾನ್ಸು ಎಲ್ಲ ರೀತಿಯಲ್ಲಿಯೂ ತಯಾರಾಗಿ ಚಿತ್ರರಂಗಕ್ಕೆ ಬರುತ್ತಿದ್ದರೂ ಈ ಮೂರೂ ವಿಭಾಗಗಳಲ್ಲಿ ಶಿವಣ್ಣನ ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ವಯಸ್ಸಾದಂತೆ ಶಿವಣ್ಣನ ಖದರ್ ಹೆಚ್ಚಾಗಿದ್ದು, ಕಣ್ಣಿನಲ್ಲೇ ಖದರ್ ತೋರಿಸುತ್ತಾ ತೆರೆಯನ್ನು ಆವರಿಸಿಕೊಳ್ಳುತ್ತಾರೆ. ಇದೀಗ ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಶಿವಣ್ಣನ ಜೊತೆಗೆ ರಾಮ್ ಚರಣ್, ಜಾನ್ಹವಿ ಕಪೂರ್ ಅವರುಗಳು ನಟಿಸಿದ್ದಾರೆ. ನಿನ್ನೆ ‘ಪೆದ್ದಿ’ ಚಿತ್ರತಂಡ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿತ್ತು. ಈ ವೇಳೆ ನಟಿ ಜಾನ್ಹವಿ ಕಪೂರ್ ಅವರು ಶಿವರಾಜ್ ಕುಮಾರ್ ಅವರ ಬಗ್ಗೆ ತಾವು ಗಮನಿಸಿದ ಅಂಶವನ್ನು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಜಾನ್ಹವಿ ಕಪೂರ್, ‘ಶಿವರಾಜ್ ಕುಮಾರ್ ಅವರು ಹಿರಿಯ ನಟ, ‘ಪೆದ್ದಿ’ಯಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ದರಾದೃಷ್ಟವಷಾತ್ ನನ್ನದು ಅವರೊಟ್ಟಿಗೆ ಕೇವಲ ಒಂದು ಸೀನ್ ಅಷ್ಟೆ ಇತ್ತು. ಅದರೆ ಆ ಒಂದು ಸೀನ್​​ನಲ್ಲೇ ಅವರು ಎಂಥಹಾ ಅದ್ಭುತ ಕಲಾವಿದ ಎಂಬುದನ್ನು ನಾನು ಅರಿತುಕೊಂಡೆ. ಅವರು ಬಹಳ ಗಾಢವಾಗಿ ತಮ್ಮ ನಟನೆ ನೀಡುತ್ತಾರೆ ಅವರ ಕಣ್ಣುಗಳು ಬಹಳ ಪವರ್​ಫುಲ್ ಆಗಿವೆ’ ಎಂದಿದ್ದಾರೆ.

ಇದನ್ನೂ ಓದಿ:ವಿಕಲಚೇತನ ಯುವಕನ ಚಿತ್ರಕಲೆ ಮೆಚ್ಚಿದ ಶಿವರಾಜ್ ಕುಮಾರ್

‘ಪೆದ್ದಿ’ ಸಿನಿಮಾನಲ್ಲಿ ಅವರೊಟ್ಟಿಗೆ ಹೆಚ್ಚು ನಟಿಸಲು ನನಗೆ ಅವಕಾಶ ಸಿಗಲಿಲ್ಲ ಆದರೆ ಮುಂದಿನ ದಿನಗಳಲ್ಲಿ ಅವರಂಥಹಾ ಮಹಾನ್ ನಟನೊಡನೆ ನಟಿಸಲು ಹೆಚ್ಚು ಅವಕಾಶ ಸಿಗಲಿದೆ ಎಂದು ಆಶಿಸುತ್ತೇನೆ’ ಎಂದು ನಟಿ ಜಾನ್ಹವಿ ಕಪೂರ್ ಹೇಳಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ನಟಿ ಜಾನ್ಹವಿ ಕಪೂರ್ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು. ಸಾಕಷ್ಟು ಅಭ್ಯಾಸ ಮಾಡಿ ಕೆಲ ಕನ್ನಡದ ಮಾತುಗಳನ್ನು ನಟಿ ಮಾತನಾಡಿದ್ದು ವಿಶೇಷ.

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ನಾಯಕ. ಸಿನಿಮಾನಲ್ಲಿ ಅವರು ಕ್ರಿಕೆಟಿಗನಾಗಿ ಮತ್ತು ಕುಸ್ತಿ ಪಟುವಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಶಿವಣ್ಣ ಗೌಡನಾಯ್ಡು ಪಾತ್ರದಲ್ಲಿ ನಟಿಸಿದ್ದು, ರಾಮ್ ಚರಣ್​​ಗೆ ಕುಸ್ತಿ ಹೇಳಿಕೊಡುವ ಪಾತ್ರ ಅವರದ್ದು. ಜಾನ್ಹವಿ ಕಪೂರ್ ನಾಯಕಿ. ಜಗಪತಿ ಬಾಬು, ಬಾಲಿವುಡ್ ನಟ ದಿವ್ಯೇಂದು ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾ ನಿರ್ದೇಶನ ಮಾಡಿರುವುದು ಬುಚ್ಚಿಬಾಬು ಸನಾ. ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:57 am, Tue, 26 May 26

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More