ಪ್ರಭಾಸ್ ಜನ್ಮದಿನ: ಟಾಲಿವುಡ್ ಹೀರೋ ಬಳಿ ಇದೆ ಅರ್ಧ ಡಜನ್ ಸಿನಿಮಾ
ಇಂದು ನಟ ಪ್ರಭಾಸ್ ಜನ್ಮದಿನ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಬಳಿ ಅರ್ಧ ಡಜನ್ ಬೃಹತ್ ಬಜೆಟ್ ಸಿನಿಮಾಗಳಿವೆ. 'ದಿ ರಾಜಾ ಸಾಬ್', 'ಸಲಾರ್: ಪಾರ್ಟ್ 2', 'ಕಲ್ಕಿ 2898 AD: ಪಾರ್ಟ್ 2' ಪ್ರಮುಖವಾದವು. 'ಬಾಹುಬಲಿ'ಯಂತಹ ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾಗಳ ಮೂಲಕ ಅವರು ಜಾಗತಿಕ ಸ್ಟಾರ್ ಆಗಿ ಬೆಳೆದಿದ್ದಾರೆ.

ನಟ ಪ್ರಭಾಸ್ ಅವರಿಗೆ ಇಂದು (ಅಕ್ಟೋಬರ್ 23) ಜನ್ಮದಿನದ ಸಂಭ್ರಮ. ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಬರ್ತ್ಡೇ ವಿಶ್ ತಿಳಿಸುತ್ತಿದ್ದಾರೆ. ಪ್ರಭಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅಷ್ಟು ಆ್ಯಕ್ಟೀವ್ ಆಗಿಲ್ಲ. ಆದರೆ, ಅವರ ಅಭಿಮಾನಿಗಳು ಪ್ರಭಾಸ್ ಹೆಸರಲ್ಲಿ ಸಾಕಷ್ಟು ಫ್ಯಾನ್ ಪೇಜ್ಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ ಮತ್ತು ಅದರ ಮೂಲಕ ಪ್ರಭಾಸ್ ಸಿನಿಮಾಗಳ ಪ್ರಚಾರ ಮಾಡುತ್ತಿದ್ದಾರೆ. ಪ್ರಭಾಸ್ ಬಳಿ ಯಾವೆಲ್ಲ ಸಿನಿಮಾಗಳಿವೆ ಎಂಬುದನ್ನು ಇಂದು ನೋಡೋಣ.
ಪ್ರಭಾಸ್ ಜನ್ಮದಿನ ಅವರ ಅಭಿಮಾನಿಗಳ ಪಾಲಿಗೆ ವಿಶೇಷ ಎನಿಸಿಕೊಂಡಿದೆ. ಪ್ರಭಾಸ್ ಬರ್ತ್ಡೇ ಪ್ರಯುಕ್ತ ‘ಸಲಾರ್’, ‘ಈಶ್ವರ್’ ಮತ್ತು ‘ಪೌರ್ಣಮಿ’ ಅಕ್ಟೋಬರ್ 23ರಂದು ಮರು ಬಿಡುಗಡೆ ಆಗಿದೆ ಎಂಬುದು ವಿಶೇಷ. ‘ಬಾಹುಬಲಿ: ದಿ ಎಪಿಕ್’ ಅಕ್ಟೋಬರ್ 31ರಂದು ತೆರೆಗೆ ಬರಲಿದ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಹೀರೋ. ಅವರು ಸಾಕಷ್ಟು ಜನಪರ ಕಾರ್ಯಗಳನ್ನೂ ಮಾಡಿದ್ದಾರೆ ಎಂಬುದು ವಿಶೇಷ. ಆದರೆ, ಅದನ್ನು ಎಲ್ಲಿಯೂ ಹೇಳಿಕೊಳ್ಳಲು ಅವರು ಇಷ್ಟಪಡೋದಿಲ್ಲ. ಇದನ್ನು ಅವರು ಗುಟ್ಟಾಗಿಯೇ ಇಡುತ್ತಾರೆ.
ಪ್ರಭಾಸ್ ಅವರು ವರ್ಷಕ್ಕೆ ಎರಡು ಸಿನಿಮಾ ನೀಡುವ ಉದ್ದೇಶ ಹೊಂದಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಳಿ ಹಲವು ಸೂಪರ್ ಬಿಗ್ ಬಜೆಟ್ ಚಿತ್ರಗಳು ಇವೆ. ‘ದಿ ರಾಜಾ ಸಾಬ್’ ಚಿತ್ರ ಬಿಡುಗಡೆ ರೆಡಿ ಇದೆ. ಸಂಕ್ರಾಂತಿ ಪ್ರಯುಕ್ತ ಜನವರಿ 9 ರಂದು ಸಿನಿಮಾ ರಿಲೀಸ್ ಆಗಲಿದೆ. ‘ಸಲಾರ್: ಪಾರ್ಟ್ 2’ ಕೂಡ ಸೆಟ್ಟೇರಬೇಕಿದೆ. ‘ಶೌರ್ಯಾಂಗ ಪರ್ವ’, ‘ಸ್ಪಿರಿಟ್’, ‘ಕಲ್ಕಿ 2898 AD: ಪಾರ್ಟ್ 2’ ಚಿತ್ರಗಳು ಕೂಡ ಅವರ ಬಳಿ ಇದೆ. ಇನ್ನು, ‘ಫೌಜಿ’ ಹೆಸರಿನ ಸಿನಿಮಾ ಕೂಡ ಅವರ ಬಳಿ ಇದೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ಗೆ ಪ್ರಶಂಸೆಗಳ ಸುರಿಮಳೆ, ಪ್ರಭಾಸ್, ಜೂ ಎನ್ಟಿಆರ್ ಹೇಳಿದ್ದೇನು?
ಪ್ರಭಾಸ್ ಬಳಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದ ಕೆಲವು ಸಿನಿಮಾಗಳಿವೆ. ‘ಬಾಹುಬಲಿ’ ಸಿನಿಮಾ ಪ್ರಭಾಸ್ಗೆ ಪ್ಯಾನ್ ಇಂಡಿಯಾ ಹೀರೋ ಪಟ್ಟ ನೀಡಿತು. ಭಾರತ ಮಾತ್ರವಲ್ಲದೆ, ಜಾಗತಿಕವಾಗಿಯೂ ಸ್ಟಾರ್ ಆಗಿ ಬೆಳೆದರು. ‘ಬಾಹುಬಲಿ 2’ ಸಿನಿಮಾ ಹಾಗೂ ‘ಕಲ್ಕಿ 2898 AD’ ಮತ್ತು ಬಾಹುಬಲಿಯಂತಹ ಸಿನಿಮಾಗಳು 1000 ಕೋಟಿ ರೂಪಾಯಿ ಗಡಿ ದಾಟುವುದರೊಂದಿಗೆ ಸ್ಟಾರ್ ಡಮ್ ಹೆಚ್ಚಿಸಿವೆ. ನಿರ್ಮಾಪಕರ ಪಾಲಿನ ಅಕ್ಷಯಪಾತ್ರೆಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







