Adipurush: 3ಡಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ ‘ಆದಿಪುರುಷ್​’ ಚಿತ್ರತಂಡ; ಪ್ರೇಕ್ಷಕರಿಗೂ ವಿಶೇಷ ಸೂಚನೆ

Prabhas: ಚಿತ್ರತಂಡ ಎಷ್ಟೇ ಅದ್ಭುತವಾಗಿ ಕೆಲಸ ಮಾಡಿರಬಹುದು. ಆದರೆ ಅದರ ಸಂಪೂರ್ಣ ಅನುಭವ ಪ್ರೇಕ್ಷಕರಿಗೆ ಸಿಗಬೇಕು ಎಂದರೆ ಒಳ್ಳೆಯ ಥಿಯೇಟರ್​ನಲ್ಲಿ ಮಾತ್ರ ಈ ಸಿನಿಮಾವನ್ನು ನೋಡಬೇಕು.

Adipurush: 3ಡಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ ‘ಆದಿಪುರುಷ್​’ ಚಿತ್ರತಂಡ; ಪ್ರೇಕ್ಷಕರಿಗೂ ವಿಶೇಷ ಸೂಚನೆ
ಪ್ರಭಾಸ್
Follow us
ಮದನ್​ ಕುಮಾರ್​
|

Updated on: May 12, 2023 | 10:29 AM

ನಟ ಪ್ರಭಾಸ್​ ಅವರ ಆದಿಪುರುಷ್​’ (Adipurush) ಸಿನಿಮಾದ ಬಿಡುಗಡೆಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ರಾಮನ ಪಾತ್ರ ಮಾಡಿದ್ದಾರೆ. ರಾಮಾಯಣದ ಕಥೆಯನ್ನು ಆಧರಿಸಿ ಈ ಚಿತ್ರ ಸಿದ್ಧವಾಗಿದೆ. ಜೂನ್​ 16ರಂದು ಅದ್ದೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ನಿರ್ದೇಶಕ ಓಂ ರಾವತ್​ (Om Raut) ಅವರಿಗೆ ‘ಆದಿಪುರುಷ್​’ ಚಿತ್ರ ನಿಜಕ್ಕೂ ಸವಾಲಿನ ಪ್ರಾಜೆಕ್ಟ್​. ಯಾಕೆಂದರೆ, ಈ ಸಿನಿಮಾದ ಮೊದಲ ಟೀಸರ್​ ಬಿಡುಗಡೆ ಆದಾಗ ಗ್ರಾಫಿಕ್ಸ್​ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಚಿತ್ರತಂಡವನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿತ್ತು. ಈ ಸಿನಿಮಾ 3ಡಿ (3D Movie) ವರ್ಷನ್​ನಲ್ಲಿ ಬಿಡುಗಡೆ ಆಗಲಿದೆ. ಅಭಿಮಾನಿಗಳನ್ನು ಇಂಪ್ರೆಸ್​ ಮಾಡಬೇಕು ಎಂಬ ಕಾರಣಕ್ಕೆ 3ಡಿ ಬಗ್ಗೆ ಚಿತ್ರತಂಡ ವಿಶೇಷ ಕಾಳಜಿ ವಹಿಸಿದೆ ಎನ್ನಲಾಗಿದೆ.

ರಾಮಾಯಣದ ಕಥೆ ಎಲ್ಲರಿಗೂ ಗೊತ್ತು. ಆದರೂ ಅದನ್ನು ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ನೋಡಬೇಕು ಎಂದರೆ ಏನಾದರೊಂದು ವಿಶೇಷ ಕಾರಣ ಇರಲೇಬೇಕು. ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಮತ್ತು 3ಡಿ ದೃಶ್ಯಗಳೇ ‘ಆದಿಪುರುಷ್​’ ಸಿನಿಮಾದ ಹೈಲೈಟ್​. ಪ್ರೇಕ್ಷಕರು 3ಡಿ ಅನುಭವವನ್ನು ಎಂಜಾಯ್​ ಮಾಡಬೇಕು ಎಂಬ ಕಾರಣಕ್ಕೆ ವಿಶೇಷ ಕಾಳಜಿ ವಹಿಸಿ ಚಿತ್ರತಂಡ ಕೆಲಸ ಮಾಡಿದೆ.

ಇದನ್ನೂ ಓದಿ: Adipurush Trailer: ಫ್ಯಾನ್ಸ್​ಗೆ ಪ್ರೀತಿ ತೋರಿಸಿದ್ದೇ ತಪ್ಪಾಯ್ತು; ‘ಆದಿಪುರುಷ್​’ ಟ್ರೇಲರ್​ ವಿಚಾರದಲ್ಲಿ ನಿರಾಸೆ ಮೂಡಿಸಿದ ಅಭಿಮಾನಿಗಳು

ಚಿತ್ರತಂಡ ಎಷ್ಟೇ ಅದ್ಭುತವಾಗಿ ಕೆಲಸ ಮಾಡಿರಬಹುದು. ಆದರೆ ಅದರ ಸಂಪೂರ್ಣ ಅನುಭವ ಪ್ರೇಕ್ಷಕರಿಗೆ ಸಿಗಬೇಕು ಎಂದರೆ ಒಳ್ಳೆಯ ಥಿಯೇಟರ್​ನಲ್ಲಿ ಮಾತ್ರ ಈ ಸಿನಿಮಾವನ್ನು ನೋಡಬೇಕು. ಹಾಗಾಗಿ 3ಡಿ ಪ್ರೊಜೆಕ್ಷನ್​ ಇರುವಂತಹ ಚಿತ್ರಮಂದಿರದಲ್ಲಿಯೇ ‘ಆದಿಪುರುಷ್​’ ಸಿನಿಮಾವನ್ನು ನೋಡಿ ಎಂದು ಪ್ರೇಕ್ಷಕರಿಗೆ ಸಲಹೆ ನೀಡಲಾಗುತ್ತಿದೆ.

ಇದನ್ನೂ ಓದಿ: Adipurush Trailer: ‘ಆದಿಪುರುಷ್​’ ಟ್ರೇಲರ್​ ಬಿಡುಗಡೆ: ರಾಮನ ಪಾತ್ರದಲ್ಲಿ ಪ್ರಭಾಸ್​ ಕಂಡು ಖುಷಿಪಟ್ಟ ಸಿನಿಪ್ರಿಯರು

ಕೆಲವೇ ದಿನಗಳ ಹಿಂದೆ ‘ಆದಿಪುರುಷ್​’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಆನ್​ಲೈನ್​ನಲ್ಲಿ ಬಿಡುಗಡೆ ಮಾಡುವುದಕ್ಕೂ ಮುನ್ನ ಹೈದರಾಬಾದ್​ನ ಕೆಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗಾಗಿ ಟ್ರೇಲರ್​ ಪ್ರದರ್ಶನ ಮಾಡಲಾಗಿತ್ತು. ಆ ವೇಳೆ ಟ್ರೇಲರ್​ ನೋಡಿದ ಅಭಿಮಾನಿಗಳು ಸಖತ್​ ಎಂಜಾಯ್​ ಮಾಡಿದ್ದರು. ಎಲ್ಲರೂ ಜೈ ಶ್ರೀರಾಮ್​ ಎಂದು ಜೈಕಾರ ಹಾಕಿದ್ದರು.

ಇದನ್ನೂ ಓದಿ: Saif Ali Khan: ‘ಆದಿಪುರುಷ್​’ ಪ್ರಮೋಷನ್​ನಿಂದ ದೂರ ಉಳಿಯಲಿದ್ದಾರೆ ರಾವಣನ ಪಾತ್ರ ಮಾಡಿದ ಸೈಫ್ ಅಲಿ ಖಾನ್

ಪ್ರಭಾಸ್​ ಅವರು ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ‘ಬಾಹುಬಲಿ 2’ ಬಳಿಕ ಅವರ ಯಾವುದೇ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿಲ್ಲ. ಹಾಗಾಗಿ ‘ಆದಿಪುರುಷ್​’ ಚಿತ್ರದಿಂದ ಅವರು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈ ಸಿನಿಮಾ ಸೂಪರ್​ ಹಿಟ್​ ಆಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ. ಇದಾದ ನಂತರ ‘ಪ್ರಾಜೆಕ್ಟ್​ ಕೆ’ ಮತ್ತು ‘ಸಲಾರ್​’ ಸಿನಿಮಾಗಳು ಬಿಡುಗಡೆ ಆಗಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು