AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರವೇ ‘ಕೆಜಿಎಫ್​ 3’ ಘೋಷಣೆ; ಆದರೆ, ಪ್ರಶಾಂತ್ ನೀಲ್ ಬದಲು ಬೇರೊಬ್ಬ ನಿರ್ದೇಶಕ?

KGF 3: ಇತಿಹಾಸ ಸೃಷ್ಟಿಸಿದ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದ ಮುಂದಿನ ಭಾಗ ಬರಲಿದೆ ಎಂಬ ಸುದ್ದಿ ಮೊದಲಿನಿಂದಲೂ ಇದೆ. ಈ ಬಗ್ಗೆ ಇದೀಗ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. ಆದರೆ ‘ಕೆಜಿಎಫ್ 3’ ಸಿನಿಮಾವನ್ನು ಪ್ರಶಾಂತ್ ನಿರ್ದೇಶನ ಮಾಡಲಿದ್ದಾರೆಯೇ ಎಂಬುದೇ ಅನುಮಾನ.

ಶೀಘ್ರವೇ ‘ಕೆಜಿಎಫ್​ 3’ ಘೋಷಣೆ; ಆದರೆ, ಪ್ರಶಾಂತ್ ನೀಲ್ ಬದಲು ಬೇರೊಬ್ಬ ನಿರ್ದೇಶಕ?
ಯಶ್-ಪ್ರಶಾಂತ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Dec 07, 2023 | 5:01 PM

ಕೆಜಿಎಫ್ ಚಾಪ್ಟರ್ 1’ (KGF 1) ಹಾಗೂ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾಗಳು ಕನ್ನಡ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆ ಸೃಷ್ಟಿ ಮಾಡಿತ್ತು. ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತ್ತು. ಈ ಚಿತ್ರಕ್ಕೆ ಮೂರನೇ ಪಾರ್ಟ್ ಬರಲಿದೆ ಅನ್ನೋದು ‘ಕೆಜಿಎಫ್ 2’ ಕ್ಲೈಮ್ಯಾಕ್ಸ್​​ನಲ್ಲಿ ರಿವೀಲ್ ಆಗಿತ್ತು. ಆದರೆ, ಇದು ಯಾವಾಗ ಬರಲಿದೆ ಎಂಬ ಬಗ್ಗೆ ನಿರ್ಮಾಣ ಸಂಸ್ಥೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈಗ ಪ್ರಶಾಂತ್ ನೀಲ್ (Prashanth Neel) ಅವರು ಈ ಕುರಿತು ಅಪ್​​ಡೇಟ್ ನೀಡಿದ್ದಾರೆ. ‘ನಾನು ನಿರ್ದೇಶಕನಾಗಿ ಇರ್ತೀನೋ ಅಥವಾ ಇಲ್ಲವೋ ಗೊತ್ತಿಲ್ಲ, ಕೆಜಿಎಫ್​ಗೆ ಮೂರನೇ ಪಾರ್ಟ್ ಬಂದೇ ಬರುತ್ತದೆ’ ಎಂದಿದ್ದಾರೆ.

ಪ್ರಶಾಂತ್ ನೀಲ್​ ನಿರ್ದೇಶನದ, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಪ್ರಶಾಂತ್ ನೀಲ್ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಭರ್ಜರಿ ಪ್ರಮೋಷನ್ ನೀಡಲಾಗುತ್ತಿದೆ. ಈ ಸಿನಿಮಾ ಬಗ್ಗೆ ‘ಪಿಂಕ್​ವಿಲ್ಲಾ’ ಜೊತೆ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. ಈ ವೇಳೆ ಅವರು ‘ಕೆಜಿಎಫ್ 3’ ವಿಚಾರ ರಿವೀಲ್ ಮಾಡಿದ್ದಾರೆ.

‘ಕೆಜಿಎಫ್​ಗೆ ಮೂರನೇ ಪಾರ್ಟ್​ ಬರ್ತಿದೆ. ನಾನು ಸಿನಿಮಾದ ನಿರ್ದೇಶಕ ಹೌದೋ ಅಲ್ಲವೋ ಅನ್ನೋದು ಗೊತ್ತಿಲ್ಲ’ ಎಂದು ನಕ್ಕಿದ್ದಾರೆ ಪ್ರಶಾಂತ್ ನೀಲ್. ‘ಯಶ್ ಅವರು ಈ ಚಿತ್ರದ ಭಾಗವಾಗಿದ್ದಾರೆ. ನಾವು ಈ ಬಗ್ಗೆ ಘೋಷಣೆ ಮಾಡಿಲ್ಲ. ಸ್ಕ್ರಿಪ್ಟ್​ ರೆಡಿ ಇದೆ. ಘೋಷಣೆ ಮಾಡುವ ಮುನ್ನವೇ ಸ್ಕ್ರಿಪ್ಟ್ ಬಗ್ಗೆ ನಿರ್ಧರಿಸಿದ್ದೆವು. ಯಶ್ ಅವರು ಸಾಕಷ್ಟು ಜವಾಬ್ದಾರಿಯುತ ವ್ಯಕ್ತಿ. ಕೇವಲ ಕಮರ್ಷಿಯಲ್ ಕಾರಣಕ್ಕೆ ಅವರು ಸಿನಿಮಾ ಮಾಡಲು ಒಪ್ಪುವುದಿಲ್ಲ. ಕೆಜಿಎಫ್​ ಎರಡನೇ ಚಾಪ್ಟರ್ ಕೊನೆಯಲ್ಲಿ ಮುಂದಿನ ಪಾರ್ಟ್ ಬಗ್ಗೆ ಅನೌನ್ಸ್ ಮಾಡುವ ಮೊದಲೇ ಅದನ್ನು ಪೇಪರ್​ನಲ್ಲಿ ಹೊಂದಿದ್ದೆವು’ ಎಂದಿದ್ದಾರೆ ಪ್ರಶಾಂತ್ ನೀಲ್.

ಇದನ್ನೂ ಓದಿ:‘ಉಗ್ರಂ’ನಿಂದ ‘ಸಲಾರ್’ ಚಿತ್ರದವರೆಗೆ: ಪ್ರಶಾಂತ್ ನೀಲ್​ ಸಿನಿಮಾಗೆ ಈ ಹೀರೋ ಪಾತ್ರಗಳೇ ಸ್ಫೂರ್ತಿ

ಜೂನಿಯರ್ ಎನ್​ಟಿಆರ್ ಜೊತೆಗಿನ ಸಿನಿಮಾ 2024ರಲ್ಲಿ ಸೆಟ್ಟೇರಲಿದೆ. ಈ ಸಿನಿಮಾ ಆ್ಯಕ್ಷನ್​ ಹೊಂದಿರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದನ್ನು ಸುಳ್ಳು ಮಾಡುವ ಆಲೋಚನೆಯಲ್ಲಿ ಅವರಿದ್ದಂತೆ ಇದೆ. ಈ ಬಗ್ಗೆಯೂ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. ‘ಈ ಸಿನಿಮಾ ಒಂದು ಭಿನ್ನ ಭಾವನೆಗಳ ಭಿನ್ನ ಸಿನಿಮಾ ಆಗಿರಲಿದೆ. ನಾನು ಆ ಪ್ರಕಾರದ ಸಿನಿಮಾ ಮಾಡಲು ಬಯಸುವುದಿಲ್ಲ. ಜನರು ಇದನ್ನು ಆಕ್ಷನ್ ಸಿನಿಮಾ ಎಂದು ಭಾವಿಸುತ್ತಾರೆ. ಇದು ಹೊಸ ರೀತಿಯ ಕಥೆ ಎಂದು ಕರೆಯತ್ತೇನೆ. ಈ ಸಿನಿಮಾ ತನ್ನದೇ ಆದ ಭಾವನೆಯನ್ನು ಹೊಂದಿದೆ’ ಎಂದಿದ್ದಾರೆ ಪ್ರಶಾಂತ್ ನೀಲ್.

ಪ್ರಶಾಂತ್ ನೀಲ್ ಹಾಗೂ ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ಕಮರ್ಷಿಯಲ್ ಆಗಿ ಸೂಪರ್ ಹಿಟ್ ಆಗಿದೆ. ಈಗ ಇದಕ್ಕೆ ಬರೋ ಸೀಕ್ವೆಲ್​ ಯಾವಾಗ ರೆಡಿ ಆಗಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಇದಕ್ಕೆ ಪ್ರಶಾಂತ್ ನೀಲ್ ಅವರೇ ನಿರ್ದೇಶನ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

‘ಸಲಾರ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರಭಾಸ್ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಅವರು ನಟಿಸಿದ್ದಾರೆ. ಬಹುತೇಕ ಕನ್ನಡ ತಂತ್ರಜ್ಞರು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಯಾವ ರೀತಿಯ ದಾಖಲೆ ಬರೆಯಲಿದೆ ಎನ್ನುವ ಕುತೂಹಲ ಮೂಡಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ‘ಉಗ್ರಂ’ ಸಿನಿಮಾದ ಛಾಯೆ ಕಾಣಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ