AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಿನ್ನಾಭಿಪ್ರಾಯ ಮರೆತು ಮತ್ತೆ ಒಂದಾದ ಪೃಥ್ವಿ ಶಾ-ನಟಿ ಆಕೃತಿ ಅಗರ್ವಾಲ್

ನಿಶ್ಚಿತಾರ್ಥ ಮುರಿದುಕೊಂಡ ಕೆಲವೇ ವಾರಗಳಲ್ಲಿ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಹಾಗೂ ನಟಿ ಆಕೃತಿ ಅಗರ್ವಾಲ್ ಮತ್ತೆ ಒಂದಾಗಿದ್ದಾರೆ. ಇತರರ ಮಾತುಗಳನ್ನು ಕೇಳಿ ತಾವು ತಪ್ಪು ನಿರ್ಧಾರ ಮಾಡಿದ್ದಾಗಿ ಆಕೃತಿ ಒಪಿಕೊಂಡಿದ್ದು, ಇಬ್ಬರೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಮತ್ತೆ ಹೊಸ ಜೀವನ ಆರಂಭಿಸಲು ನಿರ್ಧರಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.

ಭಿನ್ನಾಭಿಪ್ರಾಯ ಮರೆತು ಮತ್ತೆ ಒಂದಾದ ಪೃಥ್ವಿ ಶಾ-ನಟಿ ಆಕೃತಿ ಅಗರ್ವಾಲ್
ಪೃಥ್ವಿ ಶಾ-ಆಕೃತಿ
ರಾಜೇಶ್ ದುಗ್ಗುಮನೆ
|

Updated on: Oct 13, 2026 | 10:39 AM

Share

ಮುಖ್ಯಾಂಶಗಳು

  • ನಿಶ್ಚಿತಾರ್ಥ ಮುರಿದುಕೊಂಡ ಕೆಲವೇ ವಾರಗಳಲ್ಲಿ ಒಂದಾದ ಜೋಡಿ
  • ಇತರರ ಪ್ರಭಾವದಿಂದ ತಪ್ಪು ನಿರ್ಧಾರ ಮಾಡಿದ್ದೆ ಎಂದ ನಟಿ ಆಕೃತಿ
  • ಹೊಸ ಜೀವನ ಆರಂಭಿಸಲು ಮುಂದಾದ ಪೃಥ್ವಿ ಶಾ ಹಾಗೂ ಆಕೃತಿ

ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ ಮತ್ತು ನಟಿ ಆಕೃತಿ ಅಗರ್ವಾಲ್ ನಡುವಿನ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಮುರಿದುಕೊಂಡಿದ್ದ ಈ ಜೋಡಿ ಈಗ ಒಂದಾಗಿದ್ದಾರೆ. ತಾವಿಬ್ಬರೂ ಭಿನ್ನ ಅಭಿಪ್ರಾಯಗಳನ್ನು ಮರೆತು ಮತ್ತೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿರುವುದಾಗಿ ಖುದ್ದು ಆಕೃತಿ ಸ್ಪಷ್ಟಪಡಿಸಿದ್ದಾರೆ. ಇವರ ಈ ಅನಿರೀಕ್ಷಿತ ನಿರ್ಧಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಈ ವರ್ಷ ಮಾರ್ಚ್ ತಿಂಗಳಲ್ಲಿ ಪೃಥ್ವಿ ಶಾ ಮತ್ತು ಆಕೃತಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಅನಿವಾರ್ಯ ಕಾರಣಗಳಿಂದ ತಾವು ಬೇರ್ಪಡುವುದಾಗಿ ಆಕೃತಿ ಘೋಷಿಸಿದ್ದರು. ಇದು ಅವರ ಅಭಿಮಾನಿಗಳಿಗೆ ತೀವ್ರ ಬೇಸರವನ್ನು ಮಾಡಿತ್ತು. ಇವರು ಬೇರೆ ಆಗಲು ಕಾರಣಗಳೇನು ಎಂಬುದನ್ನು ಫ್ಯಾನ್ಸ್ ಹುಡಕಿದ್ದರು. ಆದರೆ ಈಗ ಇಬ್ಬರ ನಡುವಿನ ಮನಸ್ತಾಪಗಳು ದೂರವಾಗಿವೆ.

ಈ ಕುರಿತು ಇನ್​ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆಕೃತಿ ನಡೆದ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ‘ಇತರರ ಮಾತುಗಳನ್ನು ಕೇಳಿ ಮತ್ತು ತಪ್ಪು ಗ್ರಹಿಕೆಯಿಂದ ನಾನು ಆತುರದ ನಿರ್ಧಾರ ತೆಗೆದುಕೊಂಡಿದ್ದೆ. ನಮ್ಮ ನಡುವೆ ಮುಕ್ತ ಮಾತುಕತೆ ನಡೆದ ಬಳಿಕ ನನ್ನ ನಿರ್ಧಾರ ಬದಲಿಸಿದ್ದೇನೆ’ಎಂದು ಅವರು ಬರೆದುಕೊಂಡಿದ್ದಾರೆ.

‘ಮತ್ತೊಬ್ಬರ ಪ್ರಭಾವದಿಂದ ತಮ್ಮ ಸಂಬಂಧದಲ್ಲಿ ಬಿರುಕು ಮೂಡಿತ್ತು. ನಾನು ತೆಗೆದುಕೊಂಡ ತಪ್ಪಾದ ನಿರ್ಧಾರಕ್ಕೆ ನಾನೇ ಜವಾಬ್ದಾರಿಯಾಗಿದ್ದೇನೆ. ಇನ್ನುಮುಂದೆ ಯಾರ ಮಾತಿಗೂ ಕಿವಿಗೊಡದೆ ಸ್ವಂತ ತಿಳಿವಳಿಕೆ ಹಾಗೂ ನಂಬಿಕೆಯ ಮೇಲೆ ಜೀವನ ನಡೆಸುತ್ತೇನೆ’ ಎಂದು ಅವರು ಪೋಸ್ಟ್​​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ‘ಒಟ್ಟಿಗೆ ಪ್ರಯಾಣಿಸಲು ಸಾಧ್ಯವಿಲ್ಲ’; ಮುರಿದು ಬಿತ್ತು ಪೃಥ್ವಿ ಶಾ-ಆಕೃತಿ ಅಗರ್ವಾಲ್ ನಿಶ್ಚಿತಾರ್ಥ..!

ಪೃಥ್ವಿ ಶಾ ಕ್ರಿಕೆಟ್​ನಲ್ಲಿ ಸಕ್ರಿಯರಾಗಿದ್ದರೆ. ಆಕೃತಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲೂ ಅವರು ಗುರುತಿಸಿಕೊಂಡಿದ್ದಾರೆ. ಈಗ ಈ ಜೋಡಿ ಹಳೆಯ ಕಹಿ ನೆನಪುಗಳನ್ನು ಮರೆತು ಹೊಸ ಜೀವನ ಆರಂಭಿಸುತ್ತಿರುವುದಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More