ಹೊಸ ಹಾಲಿವುಡ್ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ, ಪೋಸ್ಟರ್ ನೋಡಿ
Priyanka Chopra movie: ಇತ್ತೀಚೆಗಿನ ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಹಾಲಿವುಡ್ನಲ್ಲಿ ಪ್ರಮುಖ ನಾಯಕಿಯ ಪಾತ್ರಗಳು ಅದರಲ್ಲೂ ಆಕ್ಷನ್ ನಾಯಕಿಯ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿವೆ. ಸಿನಿಮಾಗಳು ಯಶಸ್ವಿಯೂ ಆಗುತ್ತಿವೆ. ಇದೀಗ ಪ್ರಿಯಾಂಕಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಮತ್ತೊಂದು ಆಕ್ಷನ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಪೋಸ್ಟರ್ ಬಿಡುಗಡೆ ಆಗಿದೆ.

ಪ್ರಿಯಾಂಕಾ ಚೋಪ್ರಾ (Priyanka Chopra) ಭಾರತದ ನಟಿಯಾದರೂ ಮಿಂಚುತ್ತಿರುವುದು ಹಾಲಿವುಡ್ನಲ್ಲಿ. 2017 ರಲ್ಲಿ ಹಾಲಿವುಡ್ಗೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಆರಂಭದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಇಲ್ಲದ ಕೆಲವು ಪಾತ್ರಗಳಲ್ಲಿ ನಟಿಸಿದರಾದರೂ ವರ್ಷಗಳು ಕಳೆದಂತೆ ತಮ್ಮನ್ನು ತಾವು ಹಾಲಿವುಡ್ನಲ್ಲಿ ಗಟ್ಟಿಯಾಗಿ ನೆಲೆಗೊಳಿಸಿಕೊಂಡಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಮುಖ ನಾಯಕಿಯ ಪಾತ್ರಗಳು ಅದರಲ್ಲೂ ಆಕ್ಷನ್ ನಾಯಕಿಯ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿವೆ. ಸಿನಿಮಾಗಳು ಯಶಸ್ವಿಯೂ ಆಗುತ್ತಿವೆ. ಇದೀಗ ಪ್ರಿಯಾಂಕಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಮತ್ತೊಂದು ಆಕ್ಷನ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಪೋಸ್ಟರ್ ಬಿಡುಗಡೆ ಆಗಿದೆ.
ಪ್ರಿಯಾಂಕಾ ಚೋಪ್ರಾ ‘ದಿ ಬ್ಲಫ್’ ಹೆಸರಿನ ಆಕ್ಷನ್ ಜಾನರ್ನ ಹಾಲಿವುಡ್ ಸಿನಿಮಾನಲ್ಲಿ ನಟಿಸಿದ್ದಾರೆ. ‘ದಿ ಬ್ಲಫ್’ ಸಿನಿಮಾನಲ್ಲಿ ಪ್ರಿಯಾಂಕಾ ಅವರದ್ದು ನಾಯಕಿಯ ಪಾತ್ರ, ಸಿನಿಮಾದ ಪ್ರಧಾನ ಪಾತ್ರವೂ ಅವರದ್ದೆ. ಸಿನಿಮಾನಲ್ಲಿ ಪೈರೇಟ್ (ಕಡಲ್ಗಳ್ಳ) ಪಾತ್ರದಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ತಾಯಿಯಾಗಿ ತನ್ನ ಮಗುವನ್ನು ಕಾಪಾಡಿಕೊಳ್ಳುವ ಪೈರೇಟ್ ಪಾತ್ರ ಪ್ರಿಯಾಂಕಾ ಚೋಪ್ರಾ ಅವರದ್ದು. ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಆಗಿದ್ದು, ಅದ್ಭುತ ಆಕ್ಷನ್ ಭರಿತ ಸಿನಿಮಾ ಇದೆಂಬುದು ತಿಳಿಯುತ್ತಿದೆ.
ಸಿನಿಮಾದ ವಿಲನ್ ಪಾತ್ರದಲ್ಲಿ ಹಾಲಿವುಡ್ನ ಖ್ಯಾತ ನಟ ಕಾರ್ಲ್ ಅರ್ಬನ್ ನಟಿಸಿದ್ದಾರೆ. ಈ ಹಿಂದೆ ಅವರು ‘ಥಾರ್’, ‘ಬ್ರೂನೊ: ಸುಪ್ರಿಮಸಿ’, ‘ಲಾರ್ಡ್ ಆಫ್ ದಿ ರಿಂಗ್ಸ್’, ‘ಸ್ಟಾರ್ ಟ್ರೆಕ್’, ‘ಸ್ಟಾರ್ ವಾರ್ಸ್’, ‘ವಾಕಿಂಗ್ ವಿತ್ ಡೈನೋಸಾರ್ಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ದಿ ಬ್ಲಫ್’ ಸಿನಿಮಾನಲ್ಲಿ ಪ್ರಿಯಾಂಕಾ ಅವರಿಗೆ ಎದುರಾಗಿ ನಟಿಸುತ್ತಿದ್ದಾರೆ. ‘ದಿ ಬ್ಲಫ್’ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಫ್ರಾಂಕ್ ಇ ಫ್ಲವರ್ಸ್.
ಇದನ್ನೂ ಓದಿ:ದೀಪಿಕಾ ಪಡುಕೋಣೆ ಸ್ಥಾನಕ್ಕೆ ಪ್ರಿಯಾಂಕಾ ಚೋಪ್ರಾ: ಡಬಲ್ ಧಮಾಕ
ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ. ಅದರ ಹೊರತಾಗಿ ಹಾಲಿವುಡ್ ಆಕ್ಷನ್ ಸಿನಿಮಾ ‘ಜಡ್ಜ್ಮೆಂಟಲ್ ಡೇ’ ಸಿನಿಮಾನಲ್ಲಿ ಸಹ ನಟಿಸುತ್ತಿದ್ದಾರೆ. ‘ದಿ ಬ್ಲಫ್’ ಸಿನಿಮಾ ಶೂಟಿಂಗ್ ಮುಗಿದಿದ್ದು, ಸಿನಿಮಾ ಫೆಬ್ರವರಿ ಆರರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




