AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajinikanth: ‘ಜೈಲರ್’ ಟ್ರೈಲರ್ ಬಿಡುಗಡೆ: ರಜನೀ ಖದರ್ ಸೂಪರ್, ಆದರೆ ಶಿವಣ್ಣ ನಾಪತ್ತೆ

Jailer: ರಜನೀಕಾಂತ್ ನಟನೆಯ 'ಜೈಲರ್' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಆದರೆ ಟ್ರೈಲರ್​ನಲ್ಲಿ ಶಿವರಾಜ್ ಕುಮಾರ್ ಇಲ್ಲ!

Rajinikanth: 'ಜೈಲರ್' ಟ್ರೈಲರ್ ಬಿಡುಗಡೆ: ರಜನೀ ಖದರ್ ಸೂಪರ್, ಆದರೆ ಶಿವಣ್ಣ ನಾಪತ್ತೆ
ಜೈಲರ್
ಮಂಜುನಾಥ ಸಿ.
|

Updated on:Aug 02, 2023 | 9:26 PM

Share

ರಜನೀಕಾಂತ್ (Rajinikanth) ನಟನೆಯ ‘ಜೈಲರ್‘ (Jailer) ಸಿನಿಮಾದ ಆಕ್ಷನ್ ಭರಿತ ಟ್ರೈಲರ್ ಇಂದು (ಆಗಸ್ಟ್ 02) ಬಿಡುಗಡೆ ಆಗಿದೆ. ಟ್ರೈಲರ್​ನಲ್ಲಿ ರಜನೀಕಾಂತ್​ರ ಎರಡು ಭಿನ್ನ ಅವತಾರಗಳನ್ನು ತೋರಿಸಲಾಗಿದೆ. ಸಿನಿಮಾದಲ್ಲಿ ಕಾಮಿಡಿ, ಆಕ್ಷನ್ ಜೊತೆಗೆ ಭಾವುಕ ಸನ್ನಿವೇಶಗಳೂ ಇರಲಿವೆ ಎಂಬುದನ್ನು ಟ್ರೈಲರ್​ ಸೂಚ್ಯವಾಗಿ ಹೇಳುತ್ತಿದೆ. ಎಲ್ಲವೂ ಚೆನ್ನಾಗಿದೆಯಾದರೂ ಟೀಸರ್​ನಲ್ಲಿ ಖದರ್ ಆಗಿ ಕಾಣಿಸಿಕೊಂಡಿದ್ದ ಶಿವಣ್ಣ (Shiva Rajkumar), ಟ್ರೈಲರ್​ನಲ್ಲಿ ನಾಪತ್ತೆಯಾಗಿದ್ದಾರೆ!

‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್ ಸಹ ನಟಿಸಿದ್ದಾರೆ, ಟೀಸರ್​ನಲ್ಲಿ ಶಿವರಾಜ್ ಕುಮಾರ್ ಅವರನ್ನು ಭರ್ಜರಿಯಾಗಿ ತೋರಿಸಲಾಗಿತ್ತು. ಹಾಗೆಯೇ ಟ್ರೈಲರ್​ನಲ್ಲಿಯೂ ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇತ್ತು ಆದರೆ ಅದು ಹುಸಿಯಾಗಿದೆ. ಟ್ರೈಲರ್​ ಅನ್ನು ಕೇವಲ ರಜನೀಕಾಂತ್​ಗೆ ಮಾತ್ರವೇ ಮೀಸಲಿಟ್ಟಂತಿದೆ. ಶಿವರಾಜ್ ಕುಮಾರ್ ಹಾಗೂ ಮೋಹನ್​ಲಾಲ್ ಇಬ್ಬರೂ ಟ್ರೈಲರ್​ನಲ್ಲಿ ಕಂಡು ಬಂದಿಲ್ಲ. ಇದು ಶಿವಣ್ಣನ ಅಭಿಮಾನಿಗಳಿಗೆ ತುಸು ಬೇಸರ ತರಿಸುವ ಸಾಧ್ಯತೆ ಇದೆ. ಅಂದಹಾಗೆ ನಟಿ ತಮನ್ನಾಗೂ ಟ್ರೈಲರ್​ನಲ್ಲಿ ಜಾಗವಿಲ್ಲ.

ಶಿವಣ್ಣನ ಗೈರು ಹೊರತುಪಡಿಸಿದರೆ ಟ್ರೈಲರ್ ಖದರ್​ ಭರಿತವಾಗಿದೆ. ಟ್ರೈಲರ್​ನ ಆರಂಭದಲ್ಲಿ ಅಮಾಯಕನಂತೆ, ಮಗನ, ಮೊಮ್ಮಗನ ಶೂ ಪಾಲೀಶ್ ಮಾಡುವ, ಪುದಿನ ಚಟ್ನಿಗೆ ಬೇಡಿ ಪತ್ನಿಯಿಂದ ಬೈಸಿಕೊಳ್ಳುವ, ತರಕಾರಿ-ಹಾಲು ತರುವ, ದಾರಿಯಲ್ಲಿ ಯಾರಾದರೂ ಬೈದರೆ ಎದುರು ಮಾತನಾಡದ ಅಮಾಯಕನಂತೆ ಕಾಣಿಸಿಕೊಳ್ಳುವ ರಜನೀಕಾಂತ್ ಆ ನಂತರ ಪೂರ್ಣವಾಗಿ ಮಾಸ್ ಅವತಾರವೆತ್ತಿದ್ದಾರೆ.

ಇದನ್ನೂ ಓದಿ:Jailer: ರಜನೀಕಾಂತ್ ಜೊತೆಗಿನ ಆತ್ಮೀಯತೆ ಬಗ್ಗೆ ಶಿವರಾಜ್ ಕುಮಾರ್ ಮಾತು

ಟ್ರೈಲರ್​ನಲ್ಲಿ ಮೂರು ನಾಲ್ಕು ಶೇಡ್​ಗಳಲ್ಲಿ ರಜನೀಕಾಂತ್ ಕಾಣಿಸಿಕೊಂಡಿದ್ದಾರೆ. ವಿದೇಶಿಗರ ಹೈಟೆಕ್ ದಾಳಿಯನ್ನು ಹೈಟೆಕ್ ಮಾದರಿಯಲ್ಲಿ ಎದುರಿಸುವ ಏಜೆಂಟ್ ರೀತಿ, ಕುಟುಂಬದ ವಿರುದ್ಧ ಕತ್ತಿ ಬೀಸುವ ರೌಡಿಯ ಎದುರಿಸುವ ಕುಟುಂಬದ ಹಿರಿಯನ ರೀತಿ, ಮಾಸ್ ಫಾಲೋವಿಂಗ್ ಇರುವ ನಾಯಕನ ರೀತಿ, ಪೊಲೀಸ್ ಸಮವಸ್ತ್ರ ಧರಿಸಿದ ಖಡಕ್ ಅಧಿಕಾರಿ ಹೀಗೆ ಹಲವು ಶೇಡ್​ಗಳಲ್ಲಿ ರಜನೀಕಾಂತ್ ಕಾಣಿಸಿಕೊಂಡಿದ್ದಾರೆ.

ರಜನೀಕಾಂತ್ ಹೊರತಾಗಿ ನಟ ಸುನಿಲ್ ಟ್ರೈಲರ್​ನ ಆರಂಭದಲ್ಲಿ ಸಣ್ಣ ತುಣುಕಿನಲ್ಲಿ ಕಾಣಿಸುತ್ತಾರೆ, ‘ಜೈಲರ್’ನಲ್ಲಿ ಅವರದ್ದು ಹಾಸ್ಯ ಪಾತ್ರ ಎಂಬುದು ಗೊತ್ತಾಗುತ್ತದೆ. ಬಾಲಿವುಡ್ ನಟ ಜಾಕಿ ಶ್ರಾಫ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಮಲಯಾಳಂ ನಟ ವಿನಾಯಕನ್ ಭಯಾನಕ ರೌಡಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್​ನಲ್ಲಿಯೇ ಅವರ ಅಭಿನಯ ಭೀತಿ ಹುಟ್ಟಿಸುವಂತಿದೆ. ಇವುಗಳ ಹೊರತಾಗಿ ಅನಿರುದ್ಧ್ ರವಿಚಂದ್ರನ್​ರ ಸಂಗೀತ, ಹಾಡಿನ ಬಿಟ್ ಗಮನ ಸೆಳೆಯುತ್ತದೆ.

‘ಜೈಲರ್’ ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡಿದ್ದಾರೆ. ಸನ್ ನೆಟ್​ವರ್ಕ್ಸ್​ನ ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್, ಮಲಯಾಳಂ ನಟ ಮೋಹನ್​ಲಾಲ್, ತೆಲುಗು ನಟ ಸುನಿಲ್, ಬಾಲಿವುಡ್​ನ ಜಾಕಿ ಶ್ರಾಫ್ ಮಲಯಾಳಂನ ವಿನಾಯಗನ್ ನಟಿಸಿದ್ದಾರೆ. ಇವರುಗಳ ಹೊರತಾಗಿ ನಟಿ ತಮನ್ನಾ, ರಮ್ಯಕೃಷ್ಣ ಅವರುಗಳು ಸಹ ಇದ್ದಾರೆ. ‘ಜೈಲರ್’ ಸಿನಿಮಾ ಆಗಸ್ಟ್ 10ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:25 pm, Wed, 2 August 23

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More