ರಜನಿಕಾಂತ್ ಮುಂದಿನ ಸಿನಿಮಾಗೆ ನಿರ್ದೇಶಕನಾರು? ಸಿಕ್ತು ಉತ್ತರ
ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರದ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ವಿನೋದ್ ಮತ್ತು ಎಸ್.ಯು. ಅರುಣ್ ಕುಮಾರ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ.'ಕೂಲಿ' ಚಿತ್ರದ ಬಳಿಕ 'ಜೈಲರ್ 2' ಚಿತ್ರದಲ್ಲಿ ಬ್ಯುಸಿ ಇರುವ ರಜನಿಕಾಂತ್, ತಮ್ಮ ಭವಿಷ್ಯದ ಚಿತ್ರಗಳ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ವಯಸ್ಸಿನಲ್ಲೂ ಅವರು ಯುವಕರಂತೆ ಕೆಲಸ ಮಾಡುವುದನ್ನು ನೀವು ನೋಡಬಹುದು. ಇದಕ್ಕೆ ಅವರ ಆತ್ಮಸ್ಥೈರ್ಯವೇ ಕಾರಣ. ಈಗ ಲೋಕೇಶ್ ಕನಗರಾಜ್ ಅವರ ನಿರ್ದೇಶನದ ‘ಕೂಲಿ’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಆ ಬಳಿಕ ನೆಲ್ಸನ್ ದಿಲೀಪ್ ಕುಮಾರ್ ಜೊತೆ ರಜನಿ ಸಿನಿಮಾ ಮಾಡಬೇಕಿದೆ. ಇದೆಲ್ಲಾ ಆದ ಬಳಿಕ ಅವರ ಮುಂದಿನ ನಿರ್ದೇಶಕರು ಯಾರು ಎಂಬುದು ಸದ್ಯದ ಪ್ರಶ್ನೆ.
ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾಗೆ ಲೋಕೇಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಹುತೇಕ ಶೂಟ್ ಮುಗಿದಿದೆ ಎನ್ನಲಾಗಿದೆ. ಇದಾದ ಬಳಿಕ ಅವರು ನೆಲ್ಸನ್ ದಿಲೀಪ್ ಕುಮಾರ್ ಜೊತೆ ‘ಜೈಲರ್ 2’ ಚಿತ್ರವನ್ನು ಶೂಟ್ ಮಾಡುತ್ತಿದ್ದಾರೆ. ಅವರು ಕೇರಳದಲ್ಲಿ ಚಿತ್ರದ ಶೂಟ್ ನಡೆಯುತ್ತಿದೆ. ಇದಾದ ಬಳಿಕ ಅವರು ಯಾರ ಜೊತೆ ಸಿನಿಮಾ ಮಾಡುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಅದಕ್ಕೆ ಉತ್ತರ ಸಿಕ್ಕಿದೆ.
ರಜನಿಕಾಂತ್ ಅವರ ಮುಂದಿನ ಚಿತ್ರವನ್ನು ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ನಿರ್ಮಾಣ ಮಾಡಲಿದೆ. ಇದಕ್ಕೆ ನಿರ್ದೇಶಕರ ಆಯ್ಕೆ ನಡೆಯುತ್ತಿದೆ. ವಿನೋದ್ ಹಾಗೂ ಎಸ್ಯು ಅರುಣ್ಕುಮಾರ್ ಬಳಿ ರಜನಿಕಾಂತ್ ಅವರು ಕಥೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಇವರಲ್ಲಿ ಒಬ್ಬರು ಈ ಚಿತ್ರವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ವಿನೋದ್ ಅವರು ದಳಪತಿ ವಿಜಯ್ ನಟನೆಯ ‘ಜನನಾಯಗನ್’ ಸಿನಿಮಾ ಮಾಡುತ್ತಿದ್ದಾರೆ. ಇದು ರಾಜಕೀಯ ಕಥಾ ಹಂದರ ಹೊಂದಿರೋ ಸಿನಿಮಾ. ಇದಾದ ಬಳಿಕ ಅವರು ರಜಿನಿ ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಅರುಣ್ ಕುಮಾರ್ ಅವರು ‘ವೀರ ತೀರ ಸೂರನ್ 2’ ಮೂಲಕ ಮೆಚ್ಚುಗೆ ಪಡೆದಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ಜೊತೆ ಅತಿಥಿ ಪಾತ್ರ ಮಾಡಲು 50 ಕೋಟಿ ರೂಪಾಯಿ ಕೇಳಿದ ಬಾಲಯ್ಯ
ಸದ್ಯ ಎರಡೂ ನಿರ್ದೇಶಕರು ರಜನಿಕಾಂತ್ ಅವರಿಗೆ ಆಫರ್ ನೀಡಿದ್ದಾರೆ. ಆದರೆ, ಇವರ ಪೈಕಿ ರಜನಿಕಾಂತ್ ಅವರು ಯಾರನ್ನು ಫೈನಲ್ ಮಾಡುತ್ತಾರೆ ಎನ್ನುವುದು ಇನ್ನೂ ರಿವೀಲ್ ಆಗಿಲ್ಲ. ರಜನಿಕಾಂತ್ ಅವರು ಇನ್ನೂ 7 ವರ್ಷಗಳ ಕಾಲ ಹೀರೋ ಆಗಿ ಮಿಂಚುವ ಕನಸನ್ನು ಹೊಂದಿದ್ದಾರೆ. ಅವರು ಸದ್ಯ ‘ಕೂಲಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಆಗಸ್ಟ್ 14ರಂದು ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:16 am, Wed, 14 May 25







