ಬಾಯ್​ಫ್ರೆಂಡ್​ ಜತೆ ರಾಕುಲ್​ ಪ್ರೀತ್ ಸಿಂಗ್ ಮೋಜು ಮಸ್ತಿ; ಹೊರಬಿತ್ತು ಫೋಟೋ

ಇಂದು (ಅಕ್ಟೋಬರ್ 10) ರಾಕುಲ್​ ಪ್ರೀತ್​ ಸಿಂಗ್​ ಜನ್ಮದಿನ. ಅವರು 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಕುಲ್​ಗೆ ಬಾಲಿವುಡ್​ ಹಾಗೂ ಟಾಲಿವುಡ್​ ಸ್ಟಾರ್​ಗಳು ಮತ್ತು ಅಭಿಮಾನಿಗಳು ವಿಶ್​ ಮಾಡುತ್ತಿದ್ದಾರೆ.

ಬಾಯ್​ಫ್ರೆಂಡ್​ ಜತೆ ರಾಕುಲ್​ ಪ್ರೀತ್ ಸಿಂಗ್ ಮೋಜು ಮಸ್ತಿ; ಹೊರಬಿತ್ತು ಫೋಟೋ
ರಾಕುಲ್​ ಪ್ರೀತ್​ ಸಿಂಗ್​

ರಾಕುಲ್​ ಪ್ರೀತ್​ ಸಿಂಗ್​ ಅವರು ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ಟಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡರು. ಸಿನಿಮಾ ಆಯ್ಕೆಯಲ್ಲಿ ತುಂಬಾನೇ ಚ್ಯೂಸಿ ಆಗಿರುವ ಈ ಗ್ಲಾಮರ್​ ಬೆಡಗಿ ಕೈಯಲ್ಲಿ ಸಾಕಷ್ಟು ದೊಡ್ಡ ಪ್ರಾಜೆಕ್ಟ್​ಗಳಿವೆ. ಸಿನಿಮಾ ಮಾತ್ರವಲ್ಲದೆ, ಬಾಯ್​ಫ್ರೆಂಡ್​ ವಿಚಾರದಲ್ಲೂ ಅವರು ಸುದ್ದಿಯಾಗುತ್ತಿದ್ದರು. ಈಗ ಈ ಎಲ್ಲಾ ವದಂತಿಗೆ ರಾಕುಲ್​ ಫುಲ್​ ಸ್ಟಾಪ್​ ಇಟ್ಟಿದ್ದಾರೆ. ಹಾಗಂತ ತಮಗೆ ಬಾಯ್​ಫ್ರೆಂಡ್​ ಇಲ್ಲ, ನಾನು ಸುತ್ತಾಡುತ್ತಿರುವ ಹುಡುಗ ನನ್ನ ಬೆಸ್ಟ್​ ಫ್ರೆಂಡ್​ ಅಷ್ಟೇ ಎಂಬಿತ್ಯಾದಿ ಸಬೂಬನ್ನು ಅವರು ನೀಡಿಲ್ಲ. ಬದಲಿಗೆ ನೇರವಾಗಿ ಪ್ರಿಯಕರನನ್ನೇ ಅವರು ಪರಿಚಯಿಸಿದ್ದಾರೆ.

ಇಂದು (ಅಕ್ಟೋಬರ್ 10) ರಾಕುಲ್​ ಪ್ರೀತ್​ ಸಿಂಗ್​ ಜನ್ಮದಿನ. ಅವರು 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಕುಲ್​ಗೆ ಬಾಲಿವುಡ್​ ಹಾಗೂ ಟಾಲಿವುಡ್​ ಸ್ಟಾರ್​ಗಳು ಮತ್ತು ಅಭಿಮಾನಿಗಳು ವಿಶ್​ ಮಾಡುತ್ತಿದ್ದಾರೆ. ಈ ವಿಶೇಷ ದಿನದಂದು ಅವರು ತಮ್ಮ ಬಾಯ್​ಫ್ರೆಂಡ್​, ಯುವ ನಟ ಜಾಕಿ ಭಗ್ನಾನಿ ಅವರನ್ನು ಪರಿಚಯಿಸಿದ್ದಾರೆ. ಇದಕ್ಕೆ ಅವರು ವಿಶೇಷ ಸಾಲುಗಳನ್ನು ಕೂಡ ಬರೆದಿದ್ದಾರೆ.

 

View this post on Instagram

 

A post shared by Rakul Singh (@rakulpreet)

ವಿದೇಶದಲ್ಲಿ ಸಮಯ ಕಳೆದ ಫೋಟೋವನ್ನು ರಾಕುಲ್​ ಪೋಸ್ಟ್​ ಮಾಡಿದ್ದಾರೆ. ‘ಧನ್ಯವಾದಗಳು ನನ್ನ ಲವ್​. ಈ ವರ್ಷದ ಅತಿ ದೊಡ್ಡ ಗಿಫ್ಟ್​ ನೀನು. ನನ್ನ ಜೀವನಕ್ಕೆ ಬಣ್ಣ ತುಂಬಿದ್ದಕ್ಕೆ ಧನ್ಯವಾದ. ನಿರಂತರವಾಗಿ ನಗುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್​. ಒಟ್ಟಾಗಿ ಇನ್ನೂ ಸಾಕಷ್ಟು ನೆನಪುಗಳನ್ನು ಕೂಡೋಣೋ’ ಎಂದಿದ್ದಾರೆ ರಾಕುಲ್​.

ಅಚ್ಚರಿ ಎಂದರೆ ಜಾಕಿ ಕೂಡ ಇದೇ ಮಾದರಿಯ ಸಾಲುಗಳನ್ನು ಬರೆದು ರಾಕುಲ್​ಗೆ ಬರ್ತ್​ಡೇ ವಿಶ್​ ಮಾಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಪ್ರೀತಿ ವಿಚಾರವನ್ನು ಮದುವೆವರೆಗೆ ಸೀಕ್ರೆಟ್​ ಆಗಿ ಇಡುತ್ತಾರೆ. ಆದರೆ, ರಾಕುಲ್​ ಈ ವಿಚಾರದಲ್ಲಿ ಹಾಗಿಲ್ಲ. ಅವರು ನೇರವಾಗಿ ತಮ್ಮ ಬಾಯ್​ಫ್ರೆಂಡ್​ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಇತ್ತೀಚೆಗೆ ರಾಕುಲ್ ಅವರು ತುಟಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್​ ಆಗಿತ್ತು. ಅವರು ಇತ್ತೀಚೆಗೆ ಹಂಚಿಕೊಂಡ ಫೋಟೋದಲ್ಲಿ ತುಂಬಾನೇ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಜತೆಗೆ ಅವರ ಹಳೆಯ ಫೋಟೋಗಳನ್ನು ಇಟ್ಟು ಹೋಲಿಕೆ ಮಾಡಿದ್ದರು ಅಭಿಮಾನಿಗಳು. ರಾಕುಲ್​ ಕೈಯಲ್ಲಿ ಬಾಲಿವುಡ್​ ಸಿನಿಮಾಗಳು ಹೆಚ್ಚಿವೆ. ‘ತಲೈವಿ’ ನಿರ್ದೇಶಕ ಎ.ಎಲ್​. ವಿಜಯ್​ ಅವರ ‘ಅಕ್ಟೋಬರ್​ 31 ಲೇಡಿಸ್​ ನೈಟ್​’ ಸಿನಿಮಾದಲ್ಲಿ ರಾಕುಲ್​ ನಟಿಸುತ್ತಿದ್ದಾರೆ. ಈ ಸಿನಿಮಾ ತೆಲುಗು ಹಾಗೂ ತಮಿಳಲ್ಲಿ ತೆರೆಗೆ ಬರೋಕೆ ರೆಡಿ ಆಗುತ್ತಿದೆ.

 

ಇದನ್ನೂ ಓದಿ: ಅಂದ ಹೆಚ್ಚಿಸಿಕೊಳ್ಳೋಕೆ ರಾಕುಲ್​ ಪ್ರೀತ್​ ಸಿಂಗ್​ ತುಳಿದ್ರು ಸರ್ಜರಿ ಮಾರ್ಗ?; ಇಲ್ಲಿದೆ ಸಾಕ್ಷ್ಯ

Read Full Article

Click on your DTH Provider to Add TV9 Kannada