AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7.50 ಕೋಟಿ ಬೆಲೆಯ ಐಶಾರಾಮಿ ಕಾರು ಖರೀದಿಸಿದ ರಾಮ್ ಚರಣ್, ಏನಿದರ ವಿಶೇಷತೆ?

Ram Charan: ಟಾಲಿವುಡ್​ನ ಸ್ಟಾರ್ ನಟ ರಾಮ್ ಚರಣ್ ನಟನೆ ಜೊತೆಗೆ ಉದ್ಯಮಿಯೂ ಹೌದು. ಅವರ ವಾರ್ಷಿಕ ಆದಾಯ ಹಲವು ಕೋಟಿಗಳಿವೆ. ಇದೀಗ ರಾಮ್ ಚರಣ್ 7.50 ಕೋಟಿ ರೂಪಾಯಿ ಬೆಲೆಯ ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ವಿಶೇಷತೆಗಳೇನು?

7.50 ಕೋಟಿ ಬೆಲೆಯ ಐಶಾರಾಮಿ ಕಾರು ಖರೀದಿಸಿದ ರಾಮ್ ಚರಣ್, ಏನಿದರ ವಿಶೇಷತೆ?
ಮಂಜುನಾಥ ಸಿ.
|

Updated on: Oct 24, 2024 | 1:13 PM

Share

ರಾಮ್ ಚರಣ್ ಭಾರತದ ಟಾಪ್ ಪ್ಯಾನ್ ಇಂಡಿಯಾ ನಟರಲ್ಲಿ ಒಬ್ಬರು. ‘RRR’ ಸಿನಿಮಾದಿಂದಾಗಿ ರಾಮ್ ಚರಣ್ ಖ್ಯಾತಿ ಈಗ ವಿದೇಶಗಳಲ್ಲೂ ಹರಡಿದೆ. ನಟನೆಯ ಆರಂಭದ ದಿನಗಳಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿದ್ದ ರಾಮ್ ಚರಣ್ ನಟನೆಯ ವಿಷಯದಲ್ಲಿ ಹಾಗೂ ಸಿನಿಮಾ ಕತೆಗಳ ಆಯ್ಕೆಯ ವಿಷಯದಲ್ಲಿ ಸಾಕಷ್ಟು ಪ್ರಯೋಗ, ಕಲಿಕೆಯ ಬಳಿಕ ಈಗ ತೆಲುಗಿನ ಟಾಪ್ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಸಿನಿಮಾ ನಟನೆಯ ಜೊತೆಗೆ ಒಳ್ಳೆಯ ಉದ್ಯಮಿ ಸಹ ಆಗಿರುವ ರಾಮ್ ಚರಣ್ ದೊಡ್ಡ ಮೊತ್ತದ ವಾರ್ಷಿಕ ಲಾಭ ಪಡೆಯುತ್ತಾರೆ. ಇದೀಗ ರಾಮ್ ಚರಣ್ 7.50 ಕೋಟಿ ರೂಪಾಯಿ ಬೆಲೆಯ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಟಾಲಿವುಡ್​ನಲ್ಲಿ ಇನ್ಯಾರ ಬಳಿಯೂ ಇಷ್ಟು ದೊಡ್ಡ ಮೊತ್ತದ ಐಶಾರಾಮಿ ಕಾರಿಲ್ಲ. ಅಂದಹಾಗೆ ಈ ಕಾರಿನ ವಿಶೇಷತೆಗಳೇನು?

ರಾಮ್ ಚರಣ್ ಖರೀದಿ ಮಾಡಿರುವುದು ರೋಲ್ಸ್ ರಾಯ್ಸ್ ಕಾರನ್ನು. ರೋಲ್ಸ್ ರಾಯ್ಸ್ ಕಾರು ಈಗಾಗಲೇ ಹಲವು ನಟರ ಬಳಿ ಇದೆಯಾದರೂ. ರಾಮ್ ಚರಣ್ ಖರೀದಿ ಮಾಡಿರುವುದು ಅತ್ಯಂತ ದುಬಾರಿ ಮತ್ತು ನವ-ನವೀನ ತಂತ್ರಜ್ಞಾನಗಳನ್ನು, ಸೇಫ್ಟಿ ಫೀಚರ್ಸ್​ಗಳನ್ನು ಹೊಂದಿರುವ ಹೊಸ ರೋಲ್ಸ್ ರಾಯ್ಸ್ ಕಾರನ್ನು. ರಾಲ್ಸ್ ರಾಯ್ಸ್​ನ ಹಲವು ವಿಧದ ಕಾರುಗಳಿವೆ. ಈಗ ರಾಮ್ ಚರಣ್ ಖರೀದಿ ಮಾಡಿರುವುದು ರಾಲ್ಸ್ ರಾಯ್ಸ್ ಸ್ಪೆಕ್ಟರ್ ಮಾದರಿಯ ಕಾರನ್ನು ಈ ಕಾರಿನ ಬೆಲೆ 7.50 ಕೋಟಿ ರೂಪಾಯಿಗಳು.

ರೋಲ್ಸ್ ರಾಯ್ಸ್​ನ ಇತರೆ ಕಾರುಗಳಿಗಿಂತಲೂ ಡಿಸೈನ್ ಹಾಗೂ ತಂತ್ರಜ್ಞಾನದಲ್ಲಿ ಸಾಕಷ್ಟು ನಾವಿನ್ಯತೆಯನ್ನು ಸ್ಪೆಕ್ಟರ್ ಕಾರು ಹೊಂದಿದೆ. ಈ ಕಾರಿಗೆ ಎರಡೇ ಬಾಗಿಲಿದೆ, ನಾಲ್ಕು ಜನ ಕೂರುವ ಸೀಟು ಸಾಮರ್ಥ್ಯ ಹೊಂದಿದೆ. ಅತ್ಯುತ್ತಮ ಗುಣಮಟ್ಟದ ಕಾರ್ಬನ್ ಫೈಬರ್, ಗುಣಮಟ್ಟದ ಲೆದರ್​ನ ಬಳಕೆ ಮಾಡಿ ಈ ಕಾರಿನ ಇಂಟೀರಿಯರ್ ಡಿಸೈನ್ ಮಾಡಲಾಗಿದೆ. ಈ ಕಾರು ಅತ್ಯಂತ ಶಕ್ತಿಶಾಲಿಯಾಗಿರುವ ಜೊತೆಗೆ ಐಶಾರಾಮಿತನ, ಸಂಪೂರ್ಣ ಭದ್ರತೆಯನ್ನು ಒಳಗೆ ಕೂತವರಿಗೆ ಒದಗಿಸುತ್ತದೆ. ಹಾಗಾಗಿಯೇ ಈ ಕಾರಿನ ಬೆಲೆ ಬಹಳ ಹೆಚ್ಚು.

ಇದನ್ನೂ ಓದಿ:ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಪ್ರತಿಮೆ ಜತೆ ಇರಲಿದೆ ಮುದ್ದಿನ ಶ್ವಾನ

ರಾಮ್ ಚರಣ್ ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಪ್ರೈವೇಟ್ ಜೆಟ್​ಗಳನ್ನು ಬಾಡಿಗೆಗೆ ನೀಡುವ ಉದ್ಯಮವನ್ನೂ ಮಾಡುತ್ತಾರೆ. ಭಾರಿ ದೊಡ್ಡ ಮೊತ್ತವನ್ನು ಈ ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ ರಾಮ್ ಚರಣ್. ಸಿನಿಮಾ ನಿರ್ಮಾಣ, ರಿಯಲ್ ಎಸ್ಟೇಟ್​ನಲ್ಲಿಯೂ ರಾಮ್ ಚರಣ್ ಹೂಡಿಕೆ ಮಾಡಿದ್ದಾರೆ. ಟಾಲಿವುಡ್​ನ ದುಬಾರಿ ನಟರಲ್ಲಿ ರಾಮ್ ಚರಣ್ ಸಹ ಒಬ್ಬರು. ಹಾಗಾಗಿ ಅವರಿಗೆ ರೋಲ್ಸ್ ರಾಯ್ಸ್ ಖರೀದಿ ಬಹಳ ಖರ್ಚಿನ ಕಾರ್ಯವೇನಲ್ಲ. ಅಂದಹಾಗೆ ರಾಮ್ ಚರಣ್ ಪ್ರಸ್ತುತ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ಬಳಿಕ ಬುಚ್ಚಿಬಾಬು ಸನಾ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ರಾಮ್ ಚರಣ್ ಜೊತೆಗೆ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ