ಗೇಮ್ ಚೇಂಜರ್ ಬಿಡುಗಡೆ: ಹೇಗಿದೆ ರಾಮ್ ಚರಣ್ ಸಿನಿಮಾದ ಫಸ್ಟ್ ಹಾಫ್?
ನಿರ್ದೇಶಕ ಶಂಕರ್ ಮತ್ತು ಟಾಲಿವುಡ್ ನಟ ರಾಮ್ ಚರಣ್ ಅವರ ಕಾಂಬಿನೇಷನ್ನಲ್ಲಿ ‘ಗೇಮ್ ಚೇಂಜರ್’ ಸಿನಿಮಾ ಮೂಡಿಬಂದಿದೆ. ಅದ್ದೂರಿಯಾಗಿ ನಿರ್ಮಾಣವಾದ ಈ ಸಿನಿಮಾದಲ್ಲಿ ರಾಮ್ ಚರಣ್ ಅವರು ಹಲವು ಶೇಡ್ ಇರುವ ಪಾತ್ರ ಮಾಡಿದ್ದಾರೆ. ಟ್ರೇಲರ್ ಗಮನ ಸೆಳೆದಿತ್ತು. ಈಗ ಸಿನಿಮಾ ತೆರೆಕಂಡಿದ್ದು, ಮೊದಲಾರ್ಧದ ವಿಮರ್ಶೆ ಇಲ್ಲಿದೆ.
ನಟ ರಾಮ್ ಚರಣ್ ಅವರು ‘ಆರ್ಆರ್ಆರ್’ ಸಿನಿಮಾದ ಯಶಸ್ಸಿನ ಬಳಿಕ ಅಭಿನಯಿಸಿದ ಸಿನಿಮಾ ‘ಗೇಮ್ ಚೇಂಜರ್’. ಈ ಸಿನಿಮಾದ ಮೂಲಕ 2025ರಲ್ಲಿ ಅವರು ಖಾತೆ ತೆರೆಯುತ್ತಿದ್ದಾರೆ. ಇಂದು (ಜನವರಿ 10) ‘ಗೇಮ್ ಚೇಂಜರ್’ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಖ್ಯಾತ ನಿರ್ದೇಶಕ ಶಂಕರ್ ಅವರು ಆ್ಯಕ್ಷನ್-ಕಟ್ ಹೇಳಿದ ಸಿನಿಮಾ ಎಂಬ ಕಾರಣದಿಂದ ನಿರೀಕ್ಷೆ ಜಾಸ್ತಿ ಆಗಿದೆ. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಅವರು ರಾಮ್ ಚರಣ್‌ಗೆ ಈ ಸಿನಿಮಾದಲ್ಲಿ ಜೋಡಿ ಆಗಿದ್ದಾರೆ. ಚಿತ್ರದ ಫಸ್ಟ್ ಹಾಫ್ ಹೀಗಿದೆ..
- ರಾಜಕೀಯದ ಕಥಾಹಂದರವನ್ನು ‘ಗೇಮ್ ಚೇಂಜರ್’ ಸಿನಿಮಾ ಹೊಂದಿದೆ. ಚಿತ್ರದ ಆರಂಭದಲ್ಲೇ ರಾಮ್ ಚರಣ್ ಆ್ಯಕ್ಷನ್ ಅಬ್ಬರ ಶುರು ಮಾಡುತ್ತಾರೆ.
- ಐಎಎಸ್ ಆಫೀಸರ್ ಪಾತ್ರದಲ್ಲಿ ರಾಮ್ ಚರಣ್ ಪಾತ್ರದ ಎಂಟ್ರಿ ಆಗುತ್ತದೆ. ಜಿಲ್ಲಾಧಿಕಾರಿಯಾಗಿ ಸಖತ್ ಕ್ಲಾಸ್ ಆಗಿ ಕಾಣಿಸಿದ ರಾಮ್ ಚರಣ್.
- ಫ್ಲ್ಯಾಶ್‌ಬ್ಯಾಕ್ ಕಥೆಯಲ್ಲಿ ರಾಮ್ ಚರಣ್‌ಗೆ ಸ್ಟೈಲಿಶ್ ಮತ್ತು ಮಾಸ್ ಗೆಟಪ್ ಇದೆ. ರಫ್ ಆ್ಯಂಡ್ ಟಫ್ ಪಾತ್ರದಲ್ಲಿ ರಾಮ್ ಚರಣ್ ರಂಜಿಸುತ್ತಾರೆ.
- ಸೀರಿಯಸ್ ಕಥೆಯ ನಡುವೆ ಲವಲವಿಕೆಯ ಲವ್ ಟ್ರ್ಯಾಕ್ ಕೂಡ ಇದೆ. ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಜೋಡಿ ತುಂಬಾ ಕ್ಯೂಟ್ ಆಗಿದೆ.
- ಸಿಕ್ಕಾಪಟ್ಟೆ ಕಲರ್‌ಫುಲ್ ಆದಂತಹ ಹಾಡುಗಳು ಫಸ್ಟ್ ಹಾಫ್‌ನಲ್ಲಿ ಇದೆ. ಡ್ಯಾನ್ಸ್ ಮೂಲಕ ಕಿಯಾರಾ ಹಾಗೂ ರಾಮ್ ಚರಣ್ ಮನರಂಜನೆ ನೀಡಿದ್ದಾರೆ.
- ಜಿಲ್ಲಾಧಿಕಾರಿ ಪಾತ್ರದಲ್ಲಿ ಗತ್ತು ತೋರಿಸಿದ ರಾಮ್ ಚರಣ್ ಅವರು ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ. ಭ್ರಷ್ಟಾಚಾರದ ವಿರುದ್ಧ ಈ ಪಾತ್ರ ಯುದ್ಧ ಸಾರುತ್ತದೆ.
- ನಟ ಎಸ್.ಜೆ. ಸೂರ್ಯ ಅವರಿಗೆ ಗೇಮ್ ಚೇಂಜರ್ ಚಿತ್ರದಲ್ಲಿ ಉತ್ತಮ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ವಿಲನ್ ಆಗಿ ಅವರು ರಾಮ್ ಚರಣ್ ವಿರುದ್ಧ ನಿಂತು ಗುಡುಗಿದ್ದಾರೆ.
- ಭರ್ಜರಿ ಆ್ಯಕ್ಷನ್ ಬಯಸುವ ಪ್ರೇಕ್ಷಕರಿಗೆ ಫಸ್ಟ್ ಹಾಫ್ ಕೊನೆಯಲ್ಲಿ ಸಖತ್ ಮನರಂಜನೆ ಇದೆ. ಬಿಗ್ ಟ್ವಿಸ್ಟ್ ಮೂಲಕ ಇಂಟರ್‌ವಲ್ ನೀಡಿದ್ದಾರೆ ನಿರ್ದೇಶಕ ಶಂಕರ್.
- ಡೈರೆಕ್ಟರ್ ಶಂಕರ್ ಮತ್ತು ನಟ ರಾಮ್ ಚರಣ್ ಅವರ ಚಾರ್ಮ್‌ಗೆ ಸೂಕ್ತವಾಗಿ ಸಾಥ್ ನೀಡಿದೆ ಥಮನ್ ಅವರ ಹಿನ್ನೆಲೆ ಸಂಗೀತ.
- ಅದ್ಧೂರಿ ಮೇಕಿಂಗ್ ಕಾರಣದಿಂದಲೂ ಗೇಮ್ ಚೇಂಜರ್ ಸಿನಿಮಾ ಗಮನ ಸೆಳೆಯುತ್ತದೆ. ಮೊದಲಾರ್ಧದಲ್ಲೇ ಪ್ರೇಕ್ಷಕರಿಗೆ ಮನರಂಜನೆಯ ಪ್ಯಾಕೇಜ್ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.