‘ಮನೆಗೆ ನಿರ್ದೇಶಕರು ಬಂದಾಗ ಕನ್ಫ್ಯೂಸ್ ಆಗುತ್ತೆ’; ರಾಮ್ ಚರಣ್ ಹೀಗೆ ಹೇಳಿದ್ದೇಕೆ?
ರಾಮ್ ಚರಣ್ ಅವರು ಕಪಿಲ್ ಶರ್ಮಾ ಶೋನಲ್ಲಿ ತಮ್ಮ ದೊಡ್ಡ ಕುಟುಂಬದ ಬಗ್ಗೆ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಬಂದಾಗ ಗೊಂದಲವಿಲ್ಲ, ಆದರೆ ನಿರ್ದೇಶಕರು ಬಂದಾಗ ಗೊಂದಲ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿರಂಜೀವಿ ಹಾಗೂ ಅವರ ಮಗ ರಾಮ್ ಚರಣ್ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರದ್ದು ದೊಡ್ಡ ಕುಟುಂಬ. ಅಲ್ಲು ಅರ್ಜುನ್ ಫ್ಯಾಮಿಲಿ ಜೊತೆ ಇವರಿಗೆ ಸಂಬಂಧ ಇದೆ. ಇದು ಗೊತ್ತಿರುವ ವಿಚಾರ. ಇವರಲ್ಲ ಒಟ್ಟಿಗೆ ಸೇರಿದರೆ ಹಂಗಾಮ ಸೃಷ್ಟಿ ಆಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಇವರು ಇಟ್ಟಿಗೆ ಸೇರುತ್ತಾರೆ. ಈ ಮೊದಲು ರಾಮ್ ಚರಣ್ ಅವರು ಕುಟುಂಬದ ಬಗೆಗಿನ ಅಪರೂಪದ ಸೀಕ್ರೆಟ್ ಒಂದನ್ನು ಹಂಚಿಕೊಂಡಿದ್ದರು. ಅದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ರಾಮ್ ಚರಣ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ನಟನೆಯ ‘ಆರ್ಆರ್ಆರ್’ ಚಿತ್ರದ ಪ್ರಚಾರಕ್ಕಾಗಿ ಅವರು ಕಪಿಲ್ ಶರ್ಮಾ ಶೋಗೆ ಬಂದಿದ್ದರು. ಈ ವೇಳೆ ಒಂದು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದರು ರಾಮ್ ಚರಣ್. ಈ ವಿಚಾರ ಕೇಳಿ ಅನೇಕರಿಗೆ ಅಚ್ಚರಿ ಆಗಿತ್ತು. ಅಷ್ಟಕ್ಕೂ ಏನಿದು ವಿಚಾರ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
‘ನಿಮ್ಮದು ದೊಡ್ಡ ಕುಟುಂಬ. ಎಲ್ಲಾ ಸೆಲಬ್ರಿಟಿಗಳು ಇದ್ದಾರೆ. ವಾಚ್ಮ್ಯಾನ್ ಬಂದು ಅಭಿಮಾನಿ ಬಂದಿದ್ದಾನೆ ಎಂದಾಗ ಗೊಂದಲ ಉಂಟಾಗುತ್ತದೆಯೇ’ ಎಂದು ಕಪಿಲ್ ಶರ್ಮಾ ಕೇಳಿದರು. ಎಲ್ಲರೂ ಸೂಪರ್ಸ್ಟಾರ್ಗಳೇ ಆಗಿರುವುದರಿಂದ ಅಲ್ಲಿ ಬಂದಿದ್ದು ಯಾರ ಅಭಿಮಾನಿ ಎಂಬ ಗೊಂದಲ ಮೂಡಬಹುದು ಎಂಬ ರೀತಿಯಲ್ಲಿ ಈ ಪ್ರಶ್ನೆ ಕೇಳಲಾಗಿತ್ತು.
View this post on Instagram
ಇದಕ್ಕೆ ಉತ್ತರಿಸಿದ್ದ ರಾಮ್ ಚರಣ್ ಅವರು, ‘ಅಭಿಮಾನಿ ಬಂದಾಗ ಯಾವುದೇ ಗೊಂದಲ ಆಗಲ್ಲ. ಆದರೆ, ನಿರ್ದೇಶಕರು ಬಂದರೆ ಗೊಂದಲ ಆಗುತ್ತದೆ’ ಎಂದರು. ಅಂದರೆ, ಅವರು ಯಾರ ಜೊತೆ ಸಿನಿಮಾ ಮಾಡಲು ಬಂದಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ ಎಂಬರ್ಥದಲ್ಲಿ ರಾಮ್ ಚರಣ್ ಅವರು ವಿವರಿಸಿದ್ದರು. ಇದನ್ನು ಕೇಳಿ ಕಪಿಲ್ ಶರ್ಮಾ ಅವರು ನಕ್ಕಿದ್ದರು.
ಇದನ್ನೂ ಓದಿ: ‘ಪುಷ್ಪ 2’ ಎಫೆಕ್ಟ್, ರಾಮ್ ಚರಣ್ ಸಿನಿಮಾಕ್ಕೆ ಇಲ್ಲ ವಿಶೇಷ ಶೋ, ಭಾರಿ ನಷ್ಟ
ರಾಮ್ ಚರಣ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ನಟನೆಯ ‘ಗೇಮ್ ಚೇಂಜರ್’ ಮುಂದಿನ ವರ್ಷ ಜನವರಿ 10ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಇಂಡಿಯನ್ 2’ ಮೂಲಕ ಅವರು ಸೋಲು ಕಂಡಿದ್ದು, ಈಗ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ.
ಇನ್ನು ರಾಮ್ ಚರಣ್ ಅವರು ‘ಆರ್ಆರ್ಆರ್’ ಗೆಲುವಿನ ಬಳಿಕ ‘ಆಚಾರ್ಯ’ ಸಿನಿಮಾ ಮೂಲಕ ಹೀನಾಯ ಸೋಲು ಕಂಡರು. ಈ ಚಿತ್ರ ಪ್ರೇಕ್ಷಕರಿಗೆ ಸ್ವಲ್ಪವೂ ಇಷ್ಟ ಆಗಿಲ್ಲ. ಈ ಕಾರಣಕ್ಕೆ ಅವರು ಟ್ರೋಲ್ ಆಗಬೇಕಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:39 am, Wed, 25 December 24