AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೆದ್ದಿ’ ಚಿತ್ರದ  ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ನಿರ್ದೇಶಕ; ಹೊಸ ದೃಶ್ಯಗಳ ಸೇರ್ಪಡೆ 

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಸದ್ಯ ಭಾರಿ ಕಲೆಕ್ಷನ್ ಮಾಡುತ್ತಿರುವ ಈ ಸೂಪರ್ ಹಿಟ್ ಚಿತ್ರಕ್ಕೆ ಹೊಸದಾಗಿ ಮೂರು ದೃಶ್ಯಗಳನ್ನು ಸೇರಿಸಲಾಗಿದೆ. ಜೂನ್ 17ರಿಂದ ಪ್ರದರ್ಶನಗೊಳ್ಳಲಿರುವ ಈ ದೃಶ್ಯಗಳು ನಾಯಕಿ ಜಾನ್ವಿ ಕಪೂರ್ ಮತ್ತು ಜಗಪತಿ ಬಾಬು ಅವರ ಪಾತ್ರಗಳಿಗೆ ಇನ್ನಷ್ಟು ತೂಕ ನೀಡಲಿವೆ.

'ಪೆದ್ದಿ' ಚಿತ್ರದ  ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ನಿರ್ದೇಶಕ; ಹೊಸ ದೃಶ್ಯಗಳ ಸೇರ್ಪಡೆ 
ಪೆದ್ದಿ ಸಿನಿಮಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 15, 2026 | 7:48 AM

Share

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಇತ್ತೀಚಿನ ಸೂಪರ್ ಹಿಟ್ ಸಿನಿಮಾ ‘ಪೆದ್ದಿ’ (Peddi Movie) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಜೂನ್ 4 ರಂದು ವಿಶ್ವಾದ್ಯಂತ ತೆರೆಕಂಡ ಈ ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭರ್ಜರಿ ಪ್ರಶಂಸೆ ಪಡೆದುಕೊಂಡಿದೆ. ಸದ್ಯ ಭಾರಿ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾ 2026ರಲ್ಲಿ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ನಂಬರ್ ಒನ್ ಚಿತ್ರವಾಗಿ ಹೊರಹೊಮ್ಮಿದೆ. ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಸಕ್ಸಸ್ ಪ್ರೆಸ್‌ಮೀಟ್ ಆಯೋಜಿಸಿತ್ತು.

ಈ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಬುಚಿ ಬಾಬು ಸನಾ, ನಿರ್ಮಾಪಕ ಸತೀಶ್ ಕಿಲಾರು, ಗೀತರಚನೆಕಾರ ಅನಂತ್ ಶ್ರೀರಾಮ್ ಮತ್ತು ಮೈತ್ರಿ ಸಂಸ್ಥೆಯ ಶಶಿ ಅವರು ಭಾಗವಹಿಸಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ವೇಳೆ ಮಾತನಾಡಿದ ನಿರ್ದೇಶಕ ಬುಚಿ ಬಾಬು, ಸಿನಿಮಾ ನೋಡಿದ ಶೇಕಡಾ 95 ರಷ್ಟು ಪ್ರೇಕ್ಷಕರು ಚಿತ್ರದ ಕಥೆ ಹಾಗೂ ರಾಮ್ ಚರಣ್ ಅವರ ಅದ್ಭುತ ನಟನೆಯನ್ನು ಕೊಂಡಾಡಿದ್ದಾರೆ. ಚಿತ್ರತಂಡವಾಗಿ ನಾವು ಏನನ್ನು ನಂಬಿ ಸಿನಿಮಾ ಮಾಡಿದ್ದೆವೋ, ಅದನ್ನು ಪ್ರೇಕ್ಷಕರು ನಿಜವಾಗಿಸಿ ತೋರಿಸಿದ್ದಾರೆ. ನಾವು ಭೇಟಿ ನೀಡಿದ ಪ್ರತಿಯೊಂದು ಚಿತ್ರಮಂದಿರದಲ್ಲೂ ಜನರಿಂದ ನಮಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಚಿತ್ರದ ಬಗ್ಗೆ ಪ್ರಮುಖ ಘೋಷಣೆ ಮಾಡಿದ ನಿರ್ದೇಶಕರು, ‘ಪೆದ್ದಿ’ ಸಿನಿಮಾಗೆ ಈಗ ಕೆಲವು ಹೊಸ ದೃಶ್ಯಗಳನ್ನು ಸೇರಿಸಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ ಈ ದೃಶ್ಯಗಳ ಎಡಿಟಿಂಗ್ ಕೆಲಸ ಮುಗಿದಿದ್ದು, ಬುಧವಾರದಿಂದ (ಜೂನ್ 17) ಚಿತ್ರಮಂದಿರಗಳಲ್ಲಿ ಇವು ಪ್ರದರ್ಶನಗೊಳ್ಳಲಿವೆ. ಸಿನಿಮಾದಲ್ಲಿ ಒಟ್ಟು ಮೂರು ಹೊಸ ದೃಶ್ಯಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತಿದ್ದು, ಇದರಲ್ಲಿ ನಾಯಕಿಯ ಪಾತ್ರಕ್ಕೆ ಸಂಬಂಧಿಸಿದ ದೃಶ್ಯಗಳು ಮತ್ತು ನಟ ಜಗಪತಿ ಬಾಬು ಅವರ ಒಂದು ಮುಖ್ಯ ದೃಶ್ಯ ಒಳಗೊಂಡಿದೆ. ಈ ಹಿಂದೆ ಸಿನಿಮಾದಲ್ಲಿ ಮಿಸ್ ಆಗಿದ್ದ ಕೆಲವು ಮುಖ್ಯ ಅಂಶಗಳು ಈ ದೃಶ್ಯಗಳ ಮೂಲಕ ಪ್ರೇಕ್ಷಕರಿಗೆ ಸಿಗಲಿವೆ.

ಇದನ್ನೂ ಓದಿ: ‘ಪೆದ್ದಿ’ ಸಕ್ಸಸ್ ಮೀಟ್‌ಗೆ ಜಾನ್ವಿ ಕಪೂರ್ ಗೈರು: ರಾಮ್ ಚರಣ್ ಸಿನಿಮಾ ವಿವಾದಕ್ಕೆ ಹೆದರಿದ್ರಾ ನಟಿ?

ಮುಖ್ಯವಾಗಿ ನಾಯಕಿ ಜಾನ್ವಿ ಕಪೂರ್ ಪಾತ್ರಕ್ಕೆ ಸಂಬಂಧಿಸಿದ ಇನ್ನೂ ಎರಡು ದೃಶ್ಯಗಳನ್ನು ಸೇರಿಸುತ್ತಿರುವುದರಿಂದ, ಪ್ರೇಕ್ಷಕರು ಆ ಪಾತ್ರಕ್ಕೆ ಮತ್ತಷ್ಟು ಕನೆಕ್ಟ್ ಆಗಲಿದ್ದಾರೆ ಮತ್ತು ಜಾನ್ವಿ ಪಾತ್ರದ ತೂಕ ಇನ್ನೊಂದು ಹಂತಕ್ಕೆ ತಲುಪಲಿದೆ ಎಂದು ಬುಚಿಬಾಬು ವಿಶ್ವಾಸ ವ್ಯಕ್ತಪಡಿಸಿದರು. ಕೊನೆಯಲ್ಲಿ ತಮ್ಮ ಜೀವನದ ಮರೆಯಲಾಗದ ಘಟನೆಯೊಂದನ್ನು ನೆನೆದ ಅವರು, ‘ಒಂದು ದಿನ ನಾನು ಕಾರಿನಲ್ಲಿ ಹೋಗುತ್ತಿದ್ದಾಗ ಆಟೋ ಚಾಲಕರೊಬ್ಬರು ತಮ್ಮ ತಾಯಿಯೊಂದಿಗೆ ಬಂದು ನನ್ನನ್ನು ಮಾತನಾಡಿಸಿದರು. ‘ಬಾಬು, ತುಂಬಾ ಅದ್ಭುತವಾದ ಸಿನಿಮಾ ಮಾಡಿದ್ದೀರಿ. ನಾನು 25 ವರ್ಷಗಳ ನಂತರ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದೆ’ ಎಂದು ಪ್ರೀತಿಯಿಂದ ಹೇಳಿದರು. ಈ ಮಾತುಗಳು ನನ್ನ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂತಹ ಅತ್ಯುತ್ತಮ ಪ್ರಶಂಸೆ’ ಎಂದು ಭಾವುಕರಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ನ್ಯೂಜಿಲೆಂಡ್​ನಲ್ಲಿ ತಮ್ಮ ಮಫ್ಲರ್ ಕತೆ ಹೇಳುತ್ತಾ ಭಾವುಕರಾದ ಪ್ರಧಾನಿ ಮೋದಿ
ನ್ಯೂಜಿಲೆಂಡ್​ನಲ್ಲಿ ತಮ್ಮ ಮಫ್ಲರ್ ಕತೆ ಹೇಳುತ್ತಾ ಭಾವುಕರಾದ ಪ್ರಧಾನಿ ಮೋದಿ
ಆರೋಗ್ಯ ಕೇಂದ್ರದ ಗೇಟ್ ಮುರಿದುಬಿದ್ದು ಅರ್ಚಕನಿಗೆ ಗಂಭೀರ ಗಾಯ
ಆರೋಗ್ಯ ಕೇಂದ್ರದ ಗೇಟ್ ಮುರಿದುಬಿದ್ದು ಅರ್ಚಕನಿಗೆ ಗಂಭೀರ ಗಾಯ
ಪಿಆರ್​ಸಿ ಜಟಾಪಟಿ: ಆದೇಶ ವಾಪಸ್ ಪಡೆಯುವಂತೆ ಆರ್​​ ಅಶೋಕ್ ಆಗ್ರಹ
ಪಿಆರ್​ಸಿ ಜಟಾಪಟಿ: ಆದೇಶ ವಾಪಸ್ ಪಡೆಯುವಂತೆ ಆರ್​​ ಅಶೋಕ್ ಆಗ್ರಹ
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ